ನಟ ದರ್ಶನ್‌ ಟೀ ಶರ್ಟ್‌ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ನಟ ದರ್ಶನ್ ರವರನ್ನ ಕೇಳಿದ್ದೇನು?

ನಟ ದರ್ಶನ್‌ ಟೀ ಶರ್ಟ್‌ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ನಟ ದರ್ಶನ್ ರವರನ್ನ ಕೇಳಿದ್ದೇನು?

ನಟ ದರ್ಶನ್​ ರವರ ಗೆಳತಿ ಪವಿತ್ರಾ ಗೌಡ ಅವರಿಗೆ ಬ್ಯಾಡ್​ ಮಸೇಜ್​ಗಳನ್ನು ಕಳಿಸಿದ್ದ ಕಾರಣದಿಂದಾಗಿ ದರ್ಶನ್​ ಮತ್ತು ಅವರ ಗ್ಯಾಂಗ್​ ಜೈಲಿಗೆ ಹೋಗಬೇಕಾಗಿ ಬಂತು. ಈ ಕೇಸ್​ನ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯದ ಪೊಲೀಸರು ಇವಾಗ ಹೆಚ್ಚುವರಿ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಈ ಕೇಸ್ ನಲ್ಲಿ ಭಾಗಿಯಾದ ಎಲ್ಲಾ 17 ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇಂದು ಕಾಮಾಕ್ಷಿಪಾಳ್ಯ ಪೊಲೀಸರು 57ನೇ ಸಿಟಿ ಸಿವಿಲ್​ ಕೋರ್ಟ್​ಗೆ ಹೆಚ್ಚುವರಿ ಜಾರ್ಜ್​ಶೀಟ್ ಸಲ್ಲಿಕೆ​ಯನ್ನು ಸಲ್ಲಿಸಿದ್ರು. ಈ ಹೆಚ್ಚುವರಿ ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯಗಳ ಬಗ್ಗೆ ಪೊಲೀಸರು ಉಲ್ಲೇಖಿಸಿದ್ದಾರೆ. ನಮಗೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಿಕ್ಕಿಲ್ಲ. ಅದನ್ನು ಓಪನ್​ ಕೋರ್ಟ್​ನಲ್ಲಿ ಇನ್ನೂ ಸಲ್ಲಿಕೆ ಮಾಡಿಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಮಾಡಿದರು ಆದರಿಂದಾಗಿ ವಿಚಾರಣೆಯನ್ನು ನ್ಯಾಯಾಧೀಶರು ಜುಲೈ 10ಕ್ಕೆ ಮುಂದೂಡಿಕೆ ಮಾಡಿದ್ದರು. ಇನ್ನು ತಮ್ಮ ಬಳಿ ಸೀಜ್ ಮಾಡಿದಂತ ಹಣ ಬಿಡುಗಡೆ ಮಾಡಬೇಕು ಎಂದು ದರ್ಶನ್​ ಅರ್ಜಿ ಸಲ್ಲಿಸಿದರು. ಇದರ ವಿಚಾರಣೆಯನ್ನು ಜೂನ್​ 3ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಕೋರ್ಟ್​ ಹಾಲ್​ನಲ್ಲಿ ಅಕ್ಕ-ಪಕ್ಕ ನಿಂತ ಪವಿತ್ರಾ ಗೌಡ ದರ್ಶನ್​.

WhatsApp Group Join Now
Telegram Group Join Now       

ಇವತ್ತು ವಿಚಾರಣೆ ಇರುವ ಕಾರಣದಿಂದ 3ನೇ ಆರೋಪಿ ಪವನ್ ಹೊರತುವಪಡಿಸಿ ಉಳಿದ ಎಲ್ಲಾ ಆರೋಪಿಗಳು ಕೋರ್ಟ್​ಗೆ ಹಾಜರಿ ಆಗಿದ್ದರು. A1 ಆರೋಪಿ ಆದ ಪವಿತ್ರಾಗೌಡ ಮೊದಲೇ ಕೋರ್ಟ್​ಗೆ ಬಂದಿದ್ದರು. ಆ ಬಳಿಕ ಕೋರ್ಟ್​ಗೆ ಬಂದ ದರ್ಶನ್​ ಪವಿತ್ರಾ ಗೌಡಳಿಂದ ದೂರವನ್ನು ಕಾಯ್ದುಕೊಂಡಿದ್ದರು. ಆದರೆ ಆರೋಪಿಗಳ ಹಾಜರಾತಿ ತೆಗೆದುಕೊಳ್ಳುವಾಗ ನ್ಯಾಯಾಧೀಶರು. A1 ಆರೋಪಿ ಪವಿತ್ರ ಗೌಡರ ಜೊತೆ ಬಂದು ನಿಲ್ಲುವಂತೆ ದರ್ಶನ್​ಗೆ ಸೂಚಿಸಿದ್ದರು. ಹೀಗಾಗಿ ನಟ ದರ್ಶನ್​, ಪವಿತ್ರಾಗೌಡ ಪಕ್ಕದಲ್ಲಿ ಬಂದು ನಿಲ್ಲುವಂತೆ ಆಯಿತು.

ಕೋರ್ಟಿಗೆ ಹಾಜರಾದ ನಟ ದರ್ಶನ್ ಅವರು ಕಪ್ಪು ಬಣ್ಣದ ಬೆಲೆ ಬಾಳುವ ದುಬಾರಿ  ಟೀ ಶರ್ಟ್ ಧರಿಸಿ ಬಂದಿದ್ದರು. ಇದು (Burberry) ಅನ್ನೋ ಒಂದು ಬ್ರಾಂಡೆಂಡ್ ಟೀ ಶರ್ಟ್‌ ಇದಾಗಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 850 ಡಾಲರ್ ಇದೆ. 850 ಡಾಲರ್ ಅಂದ್ರೆ ಭಾರತದ ರೂಪಾಯಿ ಮೌಲ್ಯ ಸರಿಸುಮಾರು ಬರೋಬ್ಬರಿ 72 ಸಾವಿರದ 700 ರೂಪಾಯಿಗಳು ಆಗುತ್ತದೆ.

WhatsApp Group Join Now
Telegram Group Join Now       

ಇದನ್ನು ಓದಿ:ವಿಕಲಚೇತನರು ಹಾಗೂ ಹಿರಿಯ ನಾಗರೀಕರ NGO ಗಳ ನೋಂದಣಿ ಮಾದರಿ ಬದಲು

ಕೋರ್ಟ್‌ನಲ್ಲಿ ಒಳಗೆ ಗಪ್​ಚುಪ್​ ಹೊರಗೆ ಬರುತಿದಂತೆ ದರ್ಶನ್​ ರವರಿಗೆ ಪವಿತ್ರ ಗೌಡ ದುಂಬಾಲು ಬಿದ್ದು ಲಿಫ್ಟ್​ ಒಳಗೆ ಕಾಡಿ ಬೇಡಿ ಹಠ ಮಾಡಿ​ ನಂಬರ್​ ತೆಗೆದುಕೊಂಡ ಪವಿತ್ರಾಗೌಡ.

ಕೋರ್ಟಿನ ಹಾಲ್​ನಲ್ಲಿ ನಟ ದರ್ಶನ್ ರವರು​ A1 ಆರೊಪಿಯಾದಂತ ಪವಿತ್ರ ಗೌಡರವರ ಪಕ್ಕದಲ್ಲಿ ಬಂದು ನಿಂತಿದ್ದು ಪವಿತ್ರಾಗೌಡಗೆ ಸಂತೋಷ ಆಯಿತು. ನ್ಯಾಯಾಧೀಶರ ಎದುರುಗಡೆ ಸೈಲೆಂಟ್ ಆಗಿದ್ದ ಪವಿತ್ರಾಗೌಡ, ವಿಚಾರಣೆ ಮುಗಿದ ನಂತರ ಹೊರಗೆ ಬರುತಿದಂತೆ. ನಟ ದರ್ಶನ್​ನ ಗಂಟು ಬಿದ್ದಿದ್ದಾರೆ. ರೇಣುಕಾಸ್ವಾಮಿಯ ಕೇಸ್​ನಲ್ಲಿ ಲಾಕ್​ ಆಗಿದ ದರ್ಶನ್, ನರಕಯಾತನೆ ಅನುಭವಿಸಿದ್ದಾರೆ, ಜೈಲಿಂದ ಹೊರಗೆ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆ ಖುಷಿ ಖುಷಿಯಾಗಿ ಸಂತೋಷದಿಂದ ಇದ್ದಾರೆ.

ಮೊನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ ಇವತ್ತು ಕೋರ್ಟ್​ನಲ್ಲಿ ಅಪರೂಪದ ಘಟನೆ ನಡೆದು ಹೋಗಿದೆ.

ಕೋರ್ಟ್​ ಹಾಲ್​ನಿಂದ ಹೊರಗಡೆ ಬರುತಿರುವಾಗ ಪವಿತ್ರಾಗೌಡ ನಟ ದರ್ಶನ್​ರವರ ಕೈ ಹಿಡಿದುಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟ ಅಲ್ಲ, ಕೋರ್ಟಿನ ಒಳಗೆ ದೂರ ದೂರ ಇದ್ದವರು.. ಲಿಫ್ಟ್​ ಒಳಗೆ ಮಾತ್ರ ಜೊತೆಯಾಗಿ ಹೋಗಿದ್ದಾರೆ.

ಲಿಫ್ಟ್​ ಒಳಗೆ ಪವಿತ್ರಾಗೌಡ ನಟ ದರ್ಶನ್​ಗೆ ದುಂಬಾಲು ಬಿದ್ದಿದ್ದಾರೆ. ಫೋನ್​ ನಂಬರ್​ ಅನ್ನು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ನಟ ದರ್ಶನ್​ ಮೊದಲು ನಂಬರ್ ನೀಡಲು ನಿರಾಕರಿಸಿದ್ದರು. ಆದರೆ ಪಟ್ಟು ಬಿಡದ ಪವಿತ್ರಾಗೌಡ, Darshan ​ರ ಕೈಹಿಡಿದು force ಮಾಡಿದ್ದಾರೆ. ಅಷ್ಟ ಅಲ್ಲದೆ, ದರ್ಶನ್ರವರ​ ಕೈಗೆ ಪವಿತ್ರ ಗೌಡರು ತನ್ನ ಮೊಬೈಲ್​​ ಕೊಟ್ಟಿದ್ದಾರೆ. ಗೆಳತಿ ಪವಿತ್ರಾಳ ಒತ್ತಾಯಕ್ಕೆ ಕರಗಿದ ನಟ ದರ್ಶನ್, ಆಕೆಯ ಮೊಬೈಲ್​ನಲ್ಲಿ ತನ್ನ ನಂಬರ್ ಅನ್ನು ಡಯಲ್​ ಮಾಡಿಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ.

ಜೈಲಿನಿಂದ ಹೊರ ಬಂದ ನಂತರ, ನಟ ದರ್ಶನ್​ ಹಾಗೂ ಪವಿತ್ರಾಗೌಡ ಇಬ್ಬರು ತಮ್ಮ ಪಾಡಿಗೆ ತಾವು ಎಂಬುವಂತೆ ಇದ್ದರೂ. ದರ್ಶನ್​ ಡೆವಿಲ್​ ಶೂಟಿಂಗ್​ ಜೊತೆ ಪತ್ನಿ ವಿಜಯಲಕ್ಷ್ಮಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರು. ಪವಿತ್ರಾಗೌಡ ಮಗಳ ಜೊತೆ ಹಾಗೂ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೀಗ ಮೊಬೈಲ್​ ನಂಬರ್​ ನೆಪದಲ್ಲಿ ಮತ್ತೆ ಹಳೆ ಗೆಳೆತನವನ್ನು ನೆನಪಿಸಿಕೊಳ್ಳಲು ಮುಂದಾಗಿದ್ದಾರಾ, ಎಂಬ ಅನುಮಾನ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ.

ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment