Amid rising prices of essential commodities, a festive Ugadi: Prime Minister Modi, CM Siddaramaiah and many other dignitaries extended their greetings.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಸಂಭ್ರಮದ ಯುಗಾದಿ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಇನ್ನೂ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಯುಗಾದಿ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಇನ್ನೂ ಮುಂತಾದ ಗಣ್ಯಾತಿ ಗಣ್ಯರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ನಾಡಿನೆಲ್ಲೆಡೆ ಶ್ರೀ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಜನರು ಆಚರಿಸುತ್ತಿದ್ದಾರೆ. ಹೂವು, ಹಾಲು, ತರಕಾರಿ, ಹಣ್ಣು, ಮುಂತಾದವುಗಳನ್ನು ಒಳಗೊಂಡ ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಹಬ್ಬದ ಸಡಗರಕ್ಕೆ ತೊಂದರೆ ಇಲ್ಲದೆ ಎಲ್ಲೆಡೆ ಮನೆಗಳಿಗೆ ತಳಿರು ತೋರಣ ಕಟ್ಟಿ, ಹೂವುಗಳಿಂದ ಆಲಂಕರಿಸುವ ಮೂಲಕ ಯುಗಾದಿಯನ್ನು ಆಚರಿಸುತ್ತಿದ್ದಾರೆ.
ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ನಾಡಿನ ಜನತೆಗೆ ಶುಭ ಕೋರಿದ್ದಾರೆ.
ಈ ಹಬ್ಬವು ಭರವಸೆ ಮತ್ತು ಜೀವನೋತ್ಸಾಹದೊಂದಿಗೆ ಸಂಬಂಧಿಸಿದ ವಿಶೇಷ ಹಬ್ಬವಾಗಿದೆ. ಸಂತೋಷ ಮತ್ತು ಸಾಮರಸ್ಯದ ಮನೋಭಾವ ಚಿಗುರಲಿ ಮತ್ತು ಅರಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ನಾಡಿನ ಜನತೆಗೆ ಶುಭ ಕೊರಿದ್ದಾರೆ.
ನೋವು – ನಲಿವು, ಸೋಲು – ಗೆಲುವು, ಕಷ್ಟ – ನಷ್ಟ, ಸುಖ – ದುಃಖ ಗಳ ಜೀವನ ಸಂದೇಶ ಸೂಚಿಸುವ ಹಬ್ಬ ಇದಾಗಿದೆ. ದುಃಖದ ಕಹಿಬೇವು, ಸುಖದ ಸಿಹಿಬೆಲ್ಲ ಎರಡನ್ನೂ ಸಮನಾಗಿ ಸ್ವೀಕರಿಸಿ, ಭರವಸೆಯಿಂದ ಮುಂದೆ ಹೊಗೋಣ, ಬೇವಿನಂತ ಕಹಿ ಅನುಭವ ಕಲಿಸಿದ ಪಾಠ ಬೆಲ್ಲದಂತ ಸಿಹಿ ಬದುಕಿಗೆ ಮುನ್ನುಡಿ ಬರೆಯುತ್ತಾ ಬದುಕು ಮುಂದೆ ಸಾಗಿಸೋಣ. ಈ ಹೊಸ ವರ್ಷದ ಆದಿಯು ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತಂದು ಕೊಡಲಿ ಎಂದು ಸನ್ಮಾನ್ಯ ಶ್ರೀ ಸಿಎಂ ಸಿದ್ದರಾಮಯ್ಯನವರು ಎಕ್ಸ್ ನಲ್ಲಿ ಬರೆದು ನಾಡಿನ ಜನತೆಗೆ ಶುಭ ತೋರಿದ್ದಾರೆ.
ಹೊಸ ವರ್ಷಕ್ಕೆ ಹೊಸ ಹರುಷವನ್ನು ತರುತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಡಿಯೋ ಮುಖಾಂತರ ಸಮಸ್ತ ನಾಡಿನ ಜನತೆಗೆ ಶುಭ ಕೋರಿದ್ದಾರೆ.
ವಿಶ್ವಾವಸುನಾಮ ಸಂವತ್ಸರವು ನಿಮಗೆ ಸುಖ-ಶಾಂತಿ, ಸಂತೋಷ, ನೆಮ್ಮದಿ-ಸಮೃದ್ಧಿ ಹಾಗೂ ಆಯುರಾರೋಗ್ಯ ನೀಡಲಿ ಎಂದು ಕುಮಾರಸ್ವಾಮಿ ಜಾಲತಾಣದಲ್ಲಿ ವಿಡಿಯೋ ಮೂಲಕ ನಾಡಿನ ಸಮಸ್ತ ಜನತೆಗೆ ಶುಭ ಕೋರಿದ್ದಾರೆ.