Breaking news: Second PUC exam results, six students commit suicide.
ಬ್ರೇಕಿಂಗ್ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ, ಆತ್ಮಹತ್ಯೆ ಮಾಡಿಕೊಂಡ ಆರು ವಿದ್ಯಾರ್ಥಿಗಳು.
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಿಳಿದ ಬಳಿಕ ಆರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಕ್ಷಣ ವ್ಯವಸ್ಥೆ, ಪೋಷಕರ ಒತ್ತಡ ಅಥವಾ ಸಮಾಜ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ.
ಫಲಿತಾಂಶ, ಆತ್ಮಹತ್ಯೆಗಳು
ಕರ್ನಾಟಕದ ದ್ವಿತೀಯ ಪಿಯುಸಿ ಪರಿಚಯ ಫಲಿತಾಂಶ 73.45 ತೇರ್ಗಡೆಯನ್ನು ನಮೂದಿಸಿದೆ, ಆದರೆ ಅನುತ್ತೀರ್ಣರಾದ ಅಥವಾ ಅವರು ನಿರೀಕ್ಷಿಸಿದ ಅಂಕಗಳನ್ನು ಪಡೆಯದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಒಂದು ದೊಡ್ಡ ದುರಂತ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು.
1. ಕೆ.ಪಿ. ಮನೋಜ್ 79% ಅಂಕಗಳು ಇದ್ದರೂ ಕಡಿಮೆ ಅಂಕಗಳು ಬಂದಿವೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2. ದಾವಣಗೆರೆ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೃಪ
3. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ವಾಸಿ, ವಿಜಯಲಕ್ಷ್ಮಿ
4. ಮೈಸೂರು ಜಿಲ್ಲೆಯ ಒಂಟಿಕೊಪ್ಪಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ.
5. ಹಾವೇರಿ ಜಿಲ್ಲೆಯ ಹಂಸ ಬಾವಿ ಠಾಣೆ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿನಿ ಕಾವ್ಯ ಬಸಪ್ಪ ಲಮಾಣಿ.
6. ಬೆಂಗಳೂರಿನ ವಿದ್ಯಾರ್ಥಿನಿ ಫಲಿತಾಂಶ ಬರುವ ಮುನ್ನವೇ ಆತ್ಮಹತ್ಯೆಗೆ ಶರಣು.
ವಿದ್ಯಾರ್ಥಿಗಳು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ?
- ಪೋಷಕರ ಮತ್ತು ಸಮಾಜದ ಒತ್ತಡದಿಂದ ಹೆಚ್ಚಿನ ಅಂಕಗಳ ಬೇಡಿಕೆ.
- ವಿದ್ಯಾರ್ಥಿಗಳ ಮಾನಸಿಕ ಒತ್ತಡದಿಂದ
- ಫೇಲಾದವರು ಎಂದು ಊರಲ್ಲಿ ಆಡಿಕೊಳ್ಳುತ್ತಾರೆ ಎಂಬ ತಪ್ಪು ಭಾವನೆಯಿಂದ.
- ಫೇಲಾದವರು ಅಪ್ರಯೋಜಕರು ಎಂಬ ತಪ್ಪು ಭಾವನೆ ಇಂದ
- ಮಾನಸಿಕ ಆರೋಗ್ಯದ ಕೊರತೆ.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಶುಲ್ಕ ರಹಿತ ಅವಕಾಶ ನೀಡಿದ್ದಾರೆ. ಆದರೂ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ತಡೆಯುವವರು ಯಾರು?
ನಿರ್ವಣೆಗೆ ಮಾರ್ಗಗಳು.
1. ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಹಾನುಭೂತಿ ತುಂಬಾ ಮುಖ್ಯ; ಅಂಕಗಳಿಂದ ಮಾತ್ರ ಜೀವನ ನಡೆಯುವುದಿಲ್ಲ.
2. ಸ್ಕೂಲು ಅಥವಾ ಕಾಲೇಜುಗಳಲ್ಲಿ ಕೌನ್ಸಿಲಿಂಗ್ ಮಾಡುವುದು.
3. ಸಮಾಜದ ದೃಷ್ಟಿ ಬದಲಾವಣೆಯಾಗಬೇಕು.
ಸ್ಕೂಲ್ ಅಥವಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೊಡುವ ಸಂದೇಶವೇನೆಂದರೆ ನೀವು ಪಾಸಾಗಲಿ ಅಥವಾ ಫೇಲಾಗಲಿ ಆತ್ಮಹತ್ಯೆ ಅಂದರೆ ನಿಮ್ಮ ಜೀವ ಕಳೆದುಕೊಳ್ಳುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಯಾಕಂದರೆ ಜೀವ ಇದ್ರೇನೇ ಜೀವನ ಜೀವಂತವಾಗಿ ಇದ್ದು ಜಯಸಾಧಿಸಿ ಮುಂದೆ ಸಾಗಬೇಕು, ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಈ ಆರು ಜನ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನ ಹತ್ತಿರ ಎಲ್ಲರೂ ಪ್ರಾರ್ಥಿಸೋಣ, ಧನ್ಯವಾದಗಳು.