ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಚ್ ಡಿ ಎಫ್ ಸಿ ಬ್ಯಾಂಕ್ನಿಂದ ಬಂಪರ್ ಸ್ಕಾಲರ್ಶಿಪ್.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳನ್ನು ನನಸು ಮಾಡಿಕೊಳ್ಳುವ ಉದ್ದೇಶದಲ್ಲಿ ಎಚ್ ಡಿ ಎಫ್ ಸಿ ಪರಿವರ್ತನ್ ವಿದ್ಯಾರ್ಥಿವೇತನ 2025 ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಒಂದನೇ ತರಗತಿಯಿಂದ ಪಿಜಿವರೆಗಿನ ವಿದ್ಯಾರ್ಥಿಗಳಿಗೆ ₹15000 ಇಂದ ₹75,000ಗಳವರೆಗಿನ ಆರ್ಥಿಕ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮೂಲಕ ಕೊಡಲಾಗುವುದು. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಲಾಗಿದೆ. ಪೂರ್ತಿಯಾಗಿ ಓದಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಯೋಜನೆಯ ಉದ್ದೇಶವೇನು?
ಭಾರತದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದ ಕಾರಣ ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೇ ಈ ಯೋಜನೆಯ ಪ್ರಮುಖ ಉದ್ದೇಶ ಆಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ಆದಿವಾಸಿ ಸಮುದಾಯ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಇದು ಒಂದು ದೊಡ್ಡ ಅವಕಾಶ ಎಂದು ಹೇಳಬಹುದು.
ಈ ಯೋಜನೆಯ ವಿವರಗಳೇನು?
ECSS ವಿದ್ಯಾರ್ಥಿ ವೇತನ:
- ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ₹15,000 ವಿದ್ಯಾರ್ಥಿ ವೇತನ ನೀಡಲಾಗುವುದು.
- ಏಳನೇ ತರಗತಿಯಿಂದ 12ನೇ ತರಗತಿವರೆಗೆ ₹18,000 ವಿದ್ಯಾರ್ಥಿ ವೇತನ ನೀಡಲಾಗುವುದು.
- ಪದವಿ ಮತ್ತು ಸ್ನಾತಕೋತರ ವಿದ್ಯಾರ್ಥಿಗಳು ₹25,000 ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಕನಿಷ್ಠ 55% ಅಂಕಗಳು ಮತ್ತು ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಹೊಂದಿರಬೇಕು.
ಇದನ್ನು ಓದಿ: ಕರ್ನಾಟಕ ರಾಜ್ಯ ಸರ್ಕಾರದಿಂದ ವಾಹನ ಖರೀದಿ ಮಾಡಲು ಸಿಗಲಿದೆ ಮೂರು ಲಕ್ಷ ರೂಪಾಯಿ ಸಹಾಯಧನ.
ಸಾಮಾನ್ಯ ಪದವಿ ವಿದ್ಯಾರ್ಥಿ ವೇತನವೇಷ್ಟು?
- ಬಿ.ಎ., ಬಿ.ಎ.ಸಿ., ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳಿಗೆ ₹30,000 ಸಹಾಯಧನ ನೀಡಲಾಗುತ್ತದೆ.
- ಇದಕ್ಕೆ ಅರ್ಹತೆ ಕನಿಷ್ಠ 70% ಅಂಕಗಳು ಮತ್ತು ₹6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.
ಕೋವಿಡ್ ಸಂಕಷ್ಟ ಬೆಂಬಲ ವಿದ್ಯಾರ್ಥಿಯ ವೇತನ.
ಕೋವಿಡ್ ವೇಳೆಯಲ್ಲಿ ಕುಟುಂಬದ ಆದಾಯಕ್ಕೆ ಧಕ್ಕೆ ಬಂದ ವಿದ್ಯಾರ್ಥಿಗಳಿಗೆ ₹15,000 ಯಿಂದ ₹75,000 ವರೆಗೆ ಸಹಾಯಧನ ನೀಡಲಾಗುತ್ತದೆ. ಇದಕ್ಕೆ ಅರ್ಹತೆ ಎಂದರೆ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
• ಎಚ್ ಡಿ ಎಫ್ ಸಿ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ hdfcbank.com/scholarships
• ಪರಿವರ್ತನ್ ವಿದ್ಯಾರ್ಥಿ ವೇತನ 2025 ಅನ್ನು ಆಯ್ಕೆ ಮಾಡಿ.
• ಆನ್ಲೈನ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.
• ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಂಡಿರಿ. ಬೇಕಾಗುವ ಅಗತ್ಯ ದಾಖಲೆಗಳು ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ವಿವರಗಳು.
ಇದನ್ನು ಓದಿ: ಪಿಎಂ ಕಿಸಾನ್ ಯೋಜನೆ ಆದಷ್ಟು ಬೇಗ ಈ ಒಂದು ಕೆಲಸ ಮಾಡಿ. ಇಲ್ಲದಿದ್ದರೆ 20ನೇ ಕಂತಿನ ಹಣ ಮತ್ತು ಮುಂಬರುವ ಕಂತುಗಳ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.
• ಶಾಲೆ ಅಥವಾ ಕಾಲೇಜು ಪ್ರಮಾಣ ಪತ್ರ.
• ಆದಾಯ ಪ್ರಮಾಣ ಪತ್ರ ಇದು ತಶಿಲ್ದಾರ್ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿ ಪ್ರಮಾಣಿತವಾಗಿರಬೇಕು.
• ಬ್ಯಾಂಕ್ ಖಾತೆ ವಿವರ.
• ಹಿಂದಿನ ವರ್ಷದ ಅಂಕ ಪತ್ರ.
• ಪಾಸ್ಪೋರ್ಟ್ ಗಾತ್ರದ ಫೋಟೋ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯತೆಗಳೇನು?
• ಈ ಯೋಜನೆಗೆ ಅರ್ಜಿ ಸಲ್ಲಿಸಲು 100% ಆನ್ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಇರುತ್ತದೆ.
• ವಿದ್ಯಾರ್ಥಿಗಳಿಗೆ ಮೆಂಟರ್ಶಿಪ್ ಹಾಗೂ ಕ್ಯಾರಿಯರ್ ಕೌನ್ಸಿಲಿಂಗ್ ಸೌಲಭ್ಯ ಇರುತ್ತದೆ.
• ವಿವಿಧ ಶೈಕ್ಷಣಿಕ ಹಂತಗಳಿಗೆ ಅನುಗುಣವಾದ ಸಹಾಯಧನ ನೀಡಲಾಗುತ್ತದೆ.
• ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಈ ಯೋಚನೆಯಲ್ಲಿ ಗಮನಿಸಬೇಕಾದ ಅಂಶಗಳು.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟಂಬರ್ 30, 2025.
• ಆಯ್ಕೆ ಮಾಡಲಾಗಿರುವ ವಿದ್ಯಾರ್ಥಿಗಳ ಪಟ್ಟಿ ಅಕ್ಟೋಬರ್ 2025 ನಲ್ಲಿ ಪ್ರಕಟವಾಗುತ್ತದೆ.
• ಹಣವನ್ನು ನವೆಂಬರ್ 2025 ರಲ್ಲಿ ವರ್ಗಾವಣೆ ಮಾಡಲಾಗುತ್ತದೆ.
• ಇಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಸಹಾಯ ಮತ್ತು ಸಂಪರ್ಕ ಹೇಗೆ?
ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ 1800-123-1234
email: www.hdfcbank.com/scholarships
ಈ ಯೋಜನೆಯು ದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಿದ್ದಾರೆ, ಆದರೆ ಆರ್ಥಿಕವಾಗಿ ದುರ್ಬಲವಾಗಿ ಇರುವಂತ ವಿದ್ಯಾರ್ಥಿಗಳ ಶಿಕ್ಷಣದ ಆದಿಯಲ್ಲಿ ದೊಡ್ಡ ಮೈಲಿಗಲ್ಲು ಎನಿಸುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಶೈಕ್ಷಣಿಕ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ಅವಕಾಶವನ್ನು ಚೆನ್ನಾಗಿ ಸದುಪಯೋಗ ಮಾಡಿಕೊಳ್ಳಿ. ನೀವು ಅರ್ಹ ವಿದ್ಯಾರ್ಥಿಗಳು ಆಗಿದ್ದರೆ, ತಪ್ಪದೆ ಅರ್ಜಿ ಸಲ್ಲಿಸಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.