ಕ್ರಿಕೆಟ್ ವಿಚಾರಕ್ಕೆ ಕಿರಿಕ್, ಯುವಕನ ಕೊಲೆ; ಇಬ್ಬರ ಬಂಧನ

ಶಿವಮೊಗ್ಗ: ಕ್ರಿಕೆಟ್ ವಿಚಾರಕ್ಕೆ ಕಿರಿಕ್, ಯುವಕನ ಕೊಲೆ; ಇಬ್ಬರ ಬಂಧನ

ಯುವಕರ ಎರಡು ಗುಂಪು ಗುಂಪುಗಳ ನಡುವೆ ಗಲಾಟೆ ನಡೆದು ಓರ್ವನು ಕೊಲೆಯಾಗಿರುವ ಘಟನೆ ಭದ್ರಾವತಿಯಲ್ಲಿ ವರದಿಯಾಗಿದೆ.

ಶಿವಮೊಗ್ಗ: ಕ್ರಿಕೆಟ್ ಆಡುವ ವಿಚಾರವಾಗಿ ಕಿರಿಕ್ ನಡೆದಿದೆ, ಯುವಕನೋರ್ವನನ್ನು ಕೊಲೆ ಮಾಡಲಾಗಿದ್ದು, ಮತ್ತೋರ್ವನಿಗೆ ಗಾಯಗೊಂಡ ಘಟನೆ ಜಿಲ್ಲೆಯ ಭದ್ರಾವತಿಯ ಹೊಸಮನೆ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೇಶವಪುರ ಬಡಾವಣೆಯ ಅರುಣ್ (23) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ, 20 ವರ್ಷದ ಸಂಜಯ್ ಎಂಬಾತ ಗಾಯಗೊಂಡಿದ್ದಾನೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರದಂದು ಸಂಜೆ ಕ್ರಿಕೆಟ್ ವಿಚಾರವಾಗಿ ಅರುಣ್ ಮತ್ತು ಇತರರ ನಡುವೆ ಗಲಾಟೆ ನಡೆದಿದೆ. ರಾತ್ರಿ ಕೇಶವಪುರ ಬಡಾವಣೆಯ ನೀರಿನ ಟ್ಯಾಂಕ್ ಕೆಳಗೆ ಕುಳಿತು ಮದ್ಯ ಸೇವಿಸುತ್ತಿರುವಾಗ ಮತ್ತೆ ಅದೆ ಯುವಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದೆ. ಈ ಸಮಯದಲ್ಲಿ ಅರುಣ್ ಎಂಬಾತನಿಗೆ ಲಾಂಗ್​ಗಳಿಂದ ಕೊಚ್ಚಿ ಸಾಧಿಸಲಾಗಿದೆ ಎಂದು ಈ ವಿಷಯದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

 ಇದನ್ನು ಓದಿ: ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕೇವಲ ಒಂದು ದಿನದಲ್ಲಿ ಮಾತ್ರ ಲೋನ್ ಸಿಗುತ್ತದೆ.

ವಿಷಯ ತಿಳಿಯುತ್ತಿದ್ದಂತೆ, ಹೊಸಮನೆ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now       

ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.

Leave a Comment