Free training from the state government with a scholarship of 15,000: Apply,
15,000 ವಿದ್ಯಾರ್ಥಿ ವೇತನದೊಂದಿಗೆ ರಾಜ್ಯ ಸರ್ಕಾರದಿಂದ ಉಚಿತ ತರಬೇತಿ: ಅಪ್ಲೈ ಮಾಡಿ,
ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ ಎಂಎಲ್ ಮತ್ತು ಎಐ ಉನ್ನತ ತರಬೇತಿ
ಇಂಜಿನಿಯರಿಂಗ್ ಪದವಿ ಹೊಂದಿದವರಿಗೆ ಎಐ ಮತ್ತು ಎಂಎಲ್ ತರಬೇತಿ ಮೂಲಕ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಉಜ್ವಲವಾದ ಅವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಹತ್ವಕಾಂಕ್ಷಿಯಾದ ಯಾದ ಯೋಜನೆಯನ್ನು ಕೈಗೊಂಡಿದೆ.
2024, 25ನೇ ಸಾಲಿನ ಆಯವ್ಯಯ ಭಾಷಣದ ಅನ್ವಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉನ್ನತಮಟ್ಟದ ತಾಂತ್ರಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಂಡಿದೆ. ಇದರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ತಾಂತ್ರಿಕ ಸಂಸ್ಥೆ, ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ಮತ್ತು ಇತ್ಯಾದಿ ಮುಂತಾದ ರಾಷ್ಟ್ರಮಟ್ಟದ ಖ್ಯಾತ ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷೀನ್ ಲರ್ನಿಂಗ್ ವಿಷಯಗಳಲ್ಲಿ ಶಿಷ್ಯವೇತನ ಸಹಿತ ಉನ್ನತ ಮಟ್ಟದ ತರಬೇತಿ ಕೊಡಲಾಗುವುದು.
ಈ ಟ್ರೈನಿಂಗ್ ಮೂಲಕ ವಿದ್ಯಾರ್ಥಿಗಳು ಕೇವಲ ತಾಂತ್ರಿಕ ಜ್ಞಾನವನ್ನು ಅಷ್ಟೇ ಅಲ್ಲದೆ ಬದಲಿಗೆ ಉದ್ಯೋಗ ಜಗತ್ತಿನಲ್ಲಿ ತಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಟ್ರೈನಿಂಗ್ ಅವಧಿ ಹೆಚ್ಚೆಂದರೆ ಎರಡು ವಾರಗಳು ಮಾತ್ರ ಇರುತ್ತದೆ, ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾಸಿಕ 15,000 ರೂಪಾಯಿ ಶಿಷ್ಯವೇತನವನ್ನು ಸಹ ಕೊಡಲಾಗುತ್ತದೆ. ಈ ಕಾರ್ಯಕ್ರಮದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಕಾರ ದೊರೆಯುವುದು ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಅವಕಾಶವನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ಟ್ರೈನಿಂಗ್‌ನಲ್ಲಿ ನಲ್ಲಿ ಕಲಿಯುವ ವಿಷಯಗಳು ಯಾವುವು?
• ಎ ಐ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತರಬೇತಿ
• ಎಂಎಲ್ ಮಷೀನ್ ಲರ್ನಿಂಗ್ ತರಬೇತಿ
ತರಬೇತಿಯ ಸಂಸ್ಥೆಗಳು ಯಾವವು?
1. ಐ ಐ ಎಸ್ ಸಿ ಸಂಸ್ಥೆ
2. ಐ ಐ ಟಿ ಸಂಸ್ಥೆ
3. ಎನ್ ಐ ಟಿ ಸಂಸ್ಥೆ ಇನ್ನೂ ಮುಂತಾದ ಖ್ಯಾತ ತಾಂತ್ರಿಕ ಸಂಸ್ಥೆಗಳು.
ಈ ಟ್ರೈನಿಂಗ್‌ಗೆ ಬೇಕಾಗುವ ಅರ್ಹತಾ ಮಾನದಂಡಗಳೇನು?
- ಅಭ್ಯರ್ಥಿಗಳು ಪರಿಶಿಷ್ಟ ಪಂಗಡದವರಾಗಿರಬೇಕು.
- BE/B.Tech ಪದವೀಧರರಾಗಿರಬೇಕು.
- ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ತರಬೇತಿಯಲ್ಲಿ ಸಿಗುವ ಸೌಲಭ್ಯಗಳೇನು?
• ಉಚಿತವಾದ ತರಬೇತಿ
• ತಿಂಗಳಿಗೆ 15 ಸಾವಿರ ರೂಪಾಯಿ ಶಿಷ್ಯವೇತನ
• ರಾಷ್ಟ್ರಮಟ್ಟ ಸಂಸ್ಥೆಗಳಲ್ಲಿ ತರಬೇತಿಯ ಅವಕಾಶಗಳು.
ಈ ತರ ಬೆತ್ತಿಗೆ ಸೇರಲು ಬೇಕಾಗುವ ಅಗತ್ಯ ದಾಖಲೆಗಳಾವವು?
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
2. ಪದವಿಯ ಅಂಕಪಟ್ಟಿಗಳು.
3. ಆಧಾರ್ ಕಾರ್ಡ್ ಜೆರಾಕ್ಸ್.
4. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
5. ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಏಪ್ರಿಲ್ 13, 2025
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನಂತೆ ಮಾಡಿ.
ದೂರವಾಣಿ ಸಂಖ್ಯೆ: 080-26711096
ಇನ್ನೂ ನಿಮಗೆ ಹೆಚ್ಚಿನ ಮಾಹಿತಿ ಬೇಕೆ, ಹಾಗಾದರೆ ಸಹಾಯಕ ನಿರ್ದೇಶಕ ಕಚೇರಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ದಕ್ಷಿಣ ತಾಲೂಕು ಬನಶಂಕರಿ ಬೆಂಗಳೂರಿಗೆ ಭೇಟಿ ಮಾಡಬಹುದು.
ಈ ತರಬೇತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡದ ಯುವ ತಾಂತ್ರಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ರೂಪಿಸಲಾಗಿದೆ. ಭಾರತದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಗುರಿಯಾಗಿ ಇಟ್ಟುಕೊಂಡಿದೆ.