ಕಾರ್ಮಿಕರಿಗೆ ಒಳ್ಳೆಯ ಸಹಿ ಸುದ್ದಿ: ಕಾರ್ಮಿಕರ ಮದುವೆ ಅಥವಾ ಮಕ್ಕಳ ಮದುವೆಗೆ ಸರ್ಕಾರದಿಂದ 60,000 ರೂಪಾಯಿ ಸಹಾಯಧನ ಸಿಗಲಿದೆ. ಇಲ್ಲಿದೆ ಸಂಪೂರ್ಣ ವಿವರ ಹಾಗೂ ಅರ್ಜಿ ಹಾಕುವ ಸಂಪೂರ್ಣ ಮಾಹಿತಿ.
ಮದುವೆ ಸಹಾಯಧನ ಯೋಜನೆ, ಕರ್ನಾಟಕ ಸರ್ಕಾರದ ಸಿಹಿ ಸುದ್ದಿ ಕರ್ನಾಟಕದ ನೊಂದಾಯಿತ ಕಾರ್ಮಿಕರಿಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಮೊದಲ ಮದುವೆ ಅಥವಾ ಕಾರ್ಮಿಕರ ಎರಡು ಮದುವೆ ಆಲಂಬಿತ ಮಕ್ಕಳ ಮದುವೆಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಈ ನೆರವು ಮದುವೆ ವೆಚ್ಚವನ್ನು ಭಾಗಶಃ ಭರಿಸಲು ಸಹಾಯಕವಾಗುತ್ತದೆ.
ಯಾರಿಗೆ ಅರ್ಹತೆ ಇದೆ?
• ಮದುವೆಗೆ ಕನಿಷ್ಠ 18 ವರ್ಷ ವಯಸ್ಸು, ಅದು ಹುಡುಗಿಯರಿಗೆ ಪೂರ್ಣವಾಗಿರಬೇಕು, ಮತ್ತು 21 ವರ್ಷ, ಅದು ಹುಡುಗರಿಗೆ ಪೂರ್ಣವಾಗಿರಬೇಕು.
• ನೊಂದಾಯಿತ ಕಾರ್ಮಿಕರು ಅಥವಾ ಅವರ ಮಕ್ಕಳು.
• ಮದುವೆಯಾದ ದಿನಾಂಕದಿಂದ 6 ತಿಂಗಳ ಒಳಗಡೆ ಅರ್ಜಿ ಸಲ್ಲಿಸಬೇಕು.
• ಕಾರ್ಮಿಕ ಸಂಘದ ಸದಸ್ಯತ್ವ ಕನಿಷ್ಠ ಒಂದು ವರ್ಷ ಪೂರ್ಣ ಆಗಿರಬೇಕು.
• ಒಂದು ಕುಟುಂಬಕ್ಕೆ ಗರಿಷ್ಠ ಎರಡು ಬಾರಿ ಮಾತ್ರ ಈ ಸಹಾಯಧನ ದೊರೆಯುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
• ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ವೆಬ್ಸೈಟ್ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ.
• ನೊಂದಾಯಿತ ಬಳಕೆದಾರರು ಆಗಿದ್ದರೆ ಲಾಗಿನ್ ಮಾಡಿ.
• ರಿಜಿಸ್ಟ್ರೇಷನ್ ಅನ್ನು ಆಯ್ಕೆ ಮಾಡಿ.
• ಸ್ಕೀಮ್ ಅಂದರೆ ಯೋಜನೆಗಳು ವಿಭಾಗದಲ್ಲಿ ಮದುವೆಯ ಸಹಾಯಧನವನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
• ಅಗತ್ಯವಿರುವ ಮಾಹಿತಿಯನ್ನು ನೊಂದಾಯಿಸಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಎಲ್ಲ ಸರಿಯಾಗಿದೆಯಾ ಎಂದು ಒಂದು ಸಾರಿ ಪರಿಶೀಲನೆ ಮಾಡಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ: ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಇಂದಿನಿಂದ ಕಾಲಾವಕಾಶ
ಇದನ್ನು ಓದಿ: ಇಂಡಿಯನ್ ಆಯಿಲ್ ಕಂಪನಿಯ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ. ಅಪ್ಲೈ ಮಾಡಿ.
ಅಗತ್ಯ ದಾಖಲೆಗಳು ಯಾವವು?
• ಬ್ಯಾಂಕ್ ಖಾತೆ ವಿವರ ಐ ಎಫ್ ಎಸ್ ಸಿ ಕೋಡ್ ಸಹಿತ.
• ಆಧಾರ್ ಕಾರ್ಡ್, ಕಾರ್ಮಿಕ ಮತ್ತು ವರ, ವಧುವಿನ ಆಧಾರ್ ಕಾರ್ಡ್.
• ಮದುವೆ ಪ್ರಮಾಣ ಪತ್ರ, ಮ್ಯಾರೇಜ್ ಸರ್ಟಿಫಿಕೇಟ್.
• ಕಾರ್ಮಿಕ ಸಂಘದ ಸದಸ್ಯತ್ವದ ಪುರಾವೆ.
• ಕರ್ನಾಟಕದ ಹೊರಗಡೆ ಮದುವೆ ಆಗಿದ್ದರೆ ಅಫಿಡವಿಟ್ ಸಲ್ಲಿಸಬೇಕು.
ಕಾರ್ಮಿಕರು ಗಮನಿಸಬೇಕಾದ ಅಂಶಗಳು.
• ಅರ್ಜಿ ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳನ್ನು ರೆಡಿ ಮಾಡಿಕೊಳ್ಳಬೇಕು.
• ಮದುವೆ ನೊಂದಣಿ ಕಡ್ಡಾಯ.
• ಸಹಾಯಧನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗುತ್ತದೆ.
ಈ ಯೋಜನೆಯಿಂದ ಕಾರ್ಮಿಕರ ಮದುವೆ ವೆಚ್ಚ ಕಡಿಮೆ ಮಾಡಲು ಸರ್ಕಾರ ನೆರವಾಗುತ್ತದೆ. ನೀವು ಅರ್ಹರಾಗಿದ್ದರೆ, ತಕ್ಷಣ ಅರ್ಜಿ ಸಲ್ಲಿಸಿ ಹಾಗೂ ಈ ಸಹಾಯಧನವನ್ನು ಸದುಪಯೋಗ ಮಾಡಿಕೊಳ್ಳಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.