Government order to change the timings of Anganwadi centers in Karnataka state.

Government order to change the timings of Anganwadi centers in Karnataka state.

ಕರ್ನಾಟಕ ರಾಜ್ಯದ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆಗೆ ಸರ್ಕಾರದ ಆದೇಶ.

ಬಿಸಿಲಿನ ಬೇಗೆ ಹೆಚ್ಚಳವಾದ ಕಾರಣ: ಅಂಗನವಾಡಿ ಸಮಯ ಬದಲಾವಣೆ.ಮಕ್ಕಳ ಸುರಕ್ಷತೆಗೆ ಸರ್ಕಾರದಿಂದ ಈ ನಿರ್ಧಾರ.

ಕರ್ನಾಟಕ ಬೆಂಗಳೂರು ಏಪ್ರಿಲ್ 7: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಉಗ್ರ ರೂಪ ತಾಳುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಟೇಟ್ಸ್ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣಾ ಅವಧಿಯಲ್ಲಿ ಇದು ತಾತ್ಕಾಲಿಕ ಬದಲಾವಣೆ ಆಗಿದೆ. ಈ ಕ್ರಮವು ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಈ ನಿರ್ಧಾರ ಸರ್ಕಾರ ಮಾಡಿದೆ.

ಇದು ಯಾವ ಯಾವ ಜಿಲ್ಲೆಗಳಲ್ಲಿ ಸಮಯ ಬದಲಾವಣೆಗೆ ಅನ್ವಯವಾಗುತ್ತದೆ.

• ಬಿಜಾಪುರ್

• ಚಿತ್ರದುರ್ಗ

WhatsApp Group Join Now
Telegram Group Join Now       

• ಬಾಗಲಕೋಟೆ

• ಕಲಬುರಗಿ ವಿಭಾಗದಲ್ಲಿ ಬರುವ ಎಲ್ಲಾ ಜಿಲ್ಲೆಗಳು ಯಾದಗಿರಿ, ರಾಯಚೂರ್.

WhatsApp Group Join Now
Telegram Group Join Now       

ಈ ಎಲ್ಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಸಿಗೆ ಹತ್ತಿರ ಆಗುತ್ತಾ ಇದೆ, ಮಕ್ಕಳ ದೇಹವು ಇಂತಹ ಅತಿಯಾದ ಬಿಸಿಲನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಪ್ರಮುಖ ಅಂಶಗಳು

1. ಈ ಸಮಯ ಬದಲಾವಣೆಯ ಕಾಲಘಟ್ಟ: ಏಪ್ರಿಲ್ ಇಂದ ಮೇ ತಿಂಗಳವರೆಗೆ.

2. ಅಂಗನವಾಡಿ ಕೇಂದ್ರದ ಸಮಯವನ್ನು ಬದಲಾವಣೆ ಮಾಡಿದ ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

3. ಸಮಯ ಬದಲಾವಣೆಯ ಉದ್ದೇಶ: ಬಿಸಿಲಿನಿಂದ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವುದಷ್ಟೇ ಅಲ್ಲದೆ ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ.

ಹೊಸ ಮತ್ತು ಹಳೆ ಕಾರ್ಯನಿರ್ವಹಣಾ ಸಮಯ.

ಹಳೆ ಸಮಯ ಬೆಳಿಗ್ಗೆ 9.30 ರಿಂದ ಸಂಜೆ ನಾಲ್ಕು ಗಂಟೆವರೆಗೆ

ಏಪ್ರಿಲ್ ಇಂದ ಮೇ ತಿಂಗಳವರೆಗೆ, ಅಂದರೆ, ಅಂಗನವಾಡಿಯ ಹೊಸ ಟೈಮ್ ಟೇಬಲ್ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30 ರವರೆಗೆ, ಇದು ಬದಲಾಗಿರುವ ಸಮಯ ಏಪ್ರಿಲ್ ಇಂದ ಮೇ ತಿಂಗಳವರೆಗೆ ಮಾತ್ರ ಅನ್ವಯವಾಗುತ್ತದೆ.

ಅಂಗನವಾಡಿ ಸಮಯ ಬದಲಾವಣೆಗೆ ಕಾರಣಗಳೇನು?

• ಬಿಸಿಲು ಜಾಸ್ತಿ ಆಗಿರುವುದರಿಂದ ಮಕ್ಕಳು ದೈಹಿಕವಾಗಿ ಅಸ್ವಸ್ಥರಾಗುವ ಸಾಧ್ಯತೆಯನ್ನು ತಡೆಗಟ್ಟುವುದು.

• ಅಂಗನವಾಡಿಗಳಲ್ಲಿ ಬಹುತೇಕ ಲೈಟ್ ಮತ್ತು ಸಿಮೆಂಟ್ ಗಳಿಂದ ನಿರ್ಮಿತವಾಗಿರುತ್ತವೆ, ಅವು ಹೆಚ್ಚು ತಾಪಮಾನ ಹೀರಿಕೊಳ್ಳುತ್ತವೆ.

• ಜ್ವರ ಮತ್ತು ಡಿ ಹೈಡ್ರೇಶನ್ ಹಾಗೂ ನೋವುಗಳನ್ನು ತಡೆಗಟ್ಟುವ ಉದ್ದೇಶದಿಂದ.

ಈ ಬದಲಾವಣೆಯ ಮುಖ್ಯ ಉದ್ದೇಶ:

ಆಹಾರ ವಿತರಣೆ, ಆರೋಗ್ಯ ತಪಾಸಣೆ, ಲಸಿಕೆ ಕಾರ್ಯಕ್ರಮಗಳು ಮತ್ತು ಮಕ್ಕಳ ತೂಕ ಕಾಪಾಡಿಕೊಳ್ಳುವುದು ಹೀಗೆ ಮುಂತಾದ ಸೇವೆಗಳಿಗೆ ಯಾವುದೇ ಅಡಚನೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ನೀಡುವ ಮಾರ್ಗಸೂಚನೆಗಳೇನು?

1. ಮಕ್ಕಳಿಗೆ ಆಗಾಗ ಸಾಕಷ್ಟು ನೀರು ಕುಡಿಸುವುದು.

2. ಅಂಗನವಾಡಿ ಕೇಂದ್ರದ ಕೋಣೆಗಳಲ್ಲಿ ಮುಚ್ಚುವ ಮತ್ತು ತೆರೆಯುವ ಪರದೆ; ಆರಾಮದಾಯಕ ಸ್ಥಳಗಳಲ್ಲಿ ಮಕ್ಕಳನ್ನು ಇರಿಸುವುದು.

3. ಮಕ್ಕಳ ಆರೋಗ್ಯವನ್ನು ಪ್ರತಿದಿನ ಪರಿಶೀಲಿಸಿ ತಪಾಸಣೆ ಮಾಡುವುದು.

ಮಕ್ಕಳ ತಂದೆ ತಾಯಿಗೆ ನೀಡುವ ಮಾರ್ಗಸೂಚಿಗಳು.

• ಮಕ್ಕಳಿಗೆ ಹಗಲಿನಲ್ಲಿ ಅತಿಯಾದ ಸೂರ್ಯನ ಕಿರಣ ತಾಗದಂತೆ ಜೋಪಾನ ಮಾಡಿಕೊಳ್ಳುವುದು.

• ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವ ಮುಂಚೆ ಮಕ್ಕಳಿಗೆ ಹಾಲು ಅಥವಾ ಪ್ರೋಟಿನ್‌ ಯುಕ್ತ ಪದಾರ್ಥವನ್ನು ನೀಡುವುದು.

• ಮಕ್ಕಳಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಬೇಕು.

ಈ ಕ್ರಮವು ತಾತ್ಕಾಲಿಕವಾಗಿದೆ ಆದರೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇದು ಗಂಭೀರ ಹಾಗೂ ಮಾನವೀಯ ನಿರ್ಧಾರವಾಗಿದೆ. ಶಾಲಾ ಮಕ್ಕಳಿಗೆ ಸಹ ಇಂಥ ತಾತ್ಕಾಲಿಕ ಸಮಯ ಬದಲಾವಣೆಯ ಅಗತ್ಯವಿದೆ ಎಂದು ಮಾತು ಸಹ ಕೇಳಿ ಬರುತ್ತಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳ ಬಗ್ಗೆ ಇದೇ ತರಹ ಸಮಯ ಬದಲಾವಣೆಗೆ ಪರಿಗಣನೆಗೆ ತೆಗೆದುಕೊಂಳ್ಳುವ ಸಾಧ್ಯತೆ ಇದೆ.

 

Leave a Comment