ಗ್ರಾಮ ಪಂಚಾಯಿತಿ ಎಲೆಕ್ಷನ್ ದಿನಾಂಕ ಫಿಕ್ಸ್ 265 ಸ್ಥಾನಗಳಿಗೆ ಮತದಾನ.

ಗ್ರಾಮ ಪಂಚಾಯಿತಿ ಎಲೆಕ್ಷನ್ ದಿನಾಂಕ ಫಿಕ್ಸ್ 265 ಸ್ಥಾನಗಳಿಗೆ ಮತದಾನ.

ಗ್ರಾಮ ಪಂಚಾಯಿತಿ ಚುನಾವಣೆ ಮೇ 25ಕ್ಕೆ 265 ಸ್ಥಾನಗಳಿಗೆ ಮತದಾನ ಫಲಿತಾಂಶ ಮೇ 28ಕ್ಕೆ ತಿಳಿಯುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ಗ್ರಾಮೀಣ ಮಟ್ಟದ ಆಡಳಿತ ವ್ಯವಸ್ಥೆಗೆ ಮತ್ತೊಮ್ಮೆ ಹೊಸ ರೂಪ ನೀಡಲು ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇದ್ದಿರುವ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡುವ ಉದ್ದೇಶಗಳಿಂದ ಚುನಾವಣೆಯು ನಡೆಯಲಿದೆ. ಈ ಪ್ರಕ್ರಿಯೆ ಗ್ರಾಮೀಣ ಆಡಳಿತವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಲು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಅಲ್ಲೇ ಸ್ಥಳದಲ್ಲಿಯೇ ಪರಿಹಾರ ಪಡೆಯಲು ಸಹಾಯವಾಗಲಿದೆ. ಚುನಾವಣೆ ಆಯೋಗವು ಈ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ಈ ಸಾರಿ ರಾಜ್ಯದಲ್ಲಿ 31 ಜಿಲ್ಲೆಗಳ 135 ತಾಲೂಕುಗಳಲ್ಲಿ ವ್ಯಾಪಕವಾಗಿ ಚುನಾವಣಾ ಕಾರ್ಯ ಚುರುಕಾಗಲಿದೆ. ಒಟ್ಟು 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ (Voting) ಮತದಾನ ನಡೆಯಲಿದೆ ಮೇ 25 2025 ರಂದು ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5:00 ವರೆಗೆ (Voting) ಮತದಾನ ನಡೆಯಲಿದೆ ಮೇ 28 2025 ರಂದು ಬುಧವಾರ ಫಲಿತಾಂಶ ಹೊರಬರಲಿದೆ.

ಇದನ್ನು ಒಮ್ಮೆ ಓದಿ: ಪಡಿತರ ಬಿಪಿಎಲ್ ರೇಷನ ಕಾರ್ಡ್ ಇದ್ದವರಿಗೆ ಶಾಕ್

ಮತದಾರರು ತಮ್ಮ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕಾಗಿದ್ದು, ಈ ಬಾರಿ ಚುನಾವಣೆಯಲ್ಲಿ NOTA ಆಯ್ಕೆಗೆ ಅವಕಾಶವಿಲ್ಲ ಎಂಬುದನ್ನು ಚುನಾವಣಾ ಆಯೋಗವು ಸ್ಪಷ್ಟವಾಗಿ ಹೇಳಿದೆ. ಇದು ಪ್ರಜಾಪ್ರಭುತ್ವದ ದಿಕ್ಕಿನಲ್ಲಿ ಗ್ರಾಮೀಣ ಕಡೆಯಿಂದ ನಡೆಯುತ್ತಿರುವ ಮಹತ್ವದ ಹೆಜ್ಜೆ ಇದಾಗಿದೆ. ಜನತೆ ಪಾಲ್ಗೊಳ್ಳುವಿಕೆ ಹೆಚ್ಚು ಇದ್ದರೆ ಪರಿಣಾಮಕಾರಿ ಮತ್ತು ಪ್ರತಿನಿಧಿತ್ವದ ಆಡಳಿತ ನಡೆಸಬಹುದು ಎಂಬ ನಿರೀಕ್ಷೆ ಇದೆ.

ಉಪಚುನಾವಣೆಯ ಫಲಿತಾಂಶಗಳು ಸ್ಥಳೀಯ ರಾಜಕೀಯ ಸಮೀಕರಣಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯದ ರಾಜಕೀಯ ಪಕ್ಷಗಳು ಕೂಡ ಚುನಾವಣೆಗೆ ತಕ್ಕಮಟ್ಟಿಗೆ ಗಮನ ಹರಿಸುತ್ತಿವೆ.

WhatsApp Group Join Now
Telegram Group Join Now       

ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಿ, ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment