ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ: ಕರ್ನಾಟಕ ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು, ಸಂಪೂರ್ಣ ವಿವರ ಇಲ್ಲಿದೆ.
ಆಶಾ ಕಾರ್ಯಕರ್ತರಿಗೆ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ, ಕರ್ನಾಟಕ ಸರ್ಕಾರದ ಹೊಸ ತೀರ್ಮಾನಗಳು.
ಕರ್ನಾಟಕ ಸಚಿವ ಸಂಪುಟವು ಇಂದು ಹಲವಾರು ಪ್ರಮುಖ ತೀರ್ಮಾನಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ಆಶಾ ಕಾರ್ಯಕರ್ತರಿಗೆ ತಂಡ ಆಧಾರಿತ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪವು ಇಲ್ಲಿ ಸೇರಿದೆ. ಈ ಯೋಜನೆಗೆ 18 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಚರ್ಚಿಸಿ ತೀರ್ಮಾನ ಮಾಡಿದೆ.
ವೈದ್ಯಕೀಯ ಸೇವೆಗಳಿಗೆ ಹೊಸ ನಿಯಮಗಳು.
ಸಚಿವ ಸಂಪುಟವು ಕರ್ನಾಟಕದ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕಡ್ಡಾಯ ಸೇವಾ ಮಸೂದೆ 2025 ಹಾಗೂ ಕರ್ನಾಟಕ ಕಾರ್ಮಿಕ ರಾಜ್ಯ ವಿಮಾ ಯೋಜನೆ ನಿಯಮಗಳು 2025 ಕ್ಕೆ ಅನುಮೋದನೆ ನೀಡಬಹುದು. ಇಂದಿನಿಂದ ರಾಜ್ಯದ ಆರೋಗ್ಯ ಸೇವೆಗಳು ಹೆಚ್ಚು ಸುಧಾರಣೆ ಆಗಲು ನೆರವಾಗುತ್ತದೆ.
ಕಾರವಾರದ ಹೊಸ ಆಸ್ಪತ್ರೆಗೆ 27 ಕೋಟಿ ಮಂಜೂರು.
ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗಿರುವ 450 ಹಾಸಿಗೆಗಳ ಹೊಸ ಆಸ್ಪತ್ರೆಗೆ ಅಗತ್ಯವಾದ ಯಂತ್ರೋಪಕರಣಗಳು ಹಾಗೂ ಪೀತೋಪಕರಣಗಳಿಗಾಗಿ 27 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ. ಇದು ಆ ಪ್ರದೇಶದ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡಲು ಸಹಾಯಕವಾಗಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ಜಾರಿಗೆ.
ಇನ್ನೊಂದು ಪ್ರಮುಖ ವಿಷಯ ಏನೆಂದರೆ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2025 ಅನ್ನು ಜಾರಿಗೆ ತರುವ ದಿನಾಂಕ ಹಾಗೂ ಈಗಿನ ಬಿಬಿಎಂಪಿ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪರದೇಶವಾಗಿ ಘೋಷಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದು ಬೆಂಗಳೂರು ಮಹಾನಗರ ಆಡಳಿತಾತ್ಮಕ ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ.
ತೀರ್ಮಾನಗಳ ಪ್ರಭಾವಗಳೇನು?
ಈ ನಿರ್ಧಾರಗಳು ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಪ್ರೋತ್ಸಾಹ, ರಾಜ್ಯದ ಆರೋಗ್ಯ ಸೇವೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಬೆಂಗಳೂರು ನಗರದ ವಿಸ್ತೃತ ಆಡಳಿತಕ್ಕೆ ಸಚಿವ ಸಂಪುಟದ ಅಂತಿಮ ತೀರ್ಮಾನಗಳು ರಾಜ್ಯದ ನಾಗರಿಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಬಹುದು.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.