ಕರ್ನಾಟಕ ಬ್ಯಾಂಕ್ ಬ್ಯಾಂಕ್‌ನಲ್ಲಿ ಕೃಷಿಮಾಡಲು ಭೂಮಿ ಖರೀದಿ ಮಾಡಲು ಸಾಲ ಸೌಲಭ್ಯ.
ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿಯನ್ನು ತೊಗಳಲು ಯೋಜನೆಯನ್ನು ಹಾಕಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ತಕ್ಷಣ ಕೃಷಿ ಸಾಲವನ್ನು ಕೊಡಲು ಅರ್ಜಿಯನ್ನು ಸಲ್ಲಿಸಲು ಅವಕಾಶ ಕೊಡಲಾಗಿದೆ.
ಕರ್ನಾಟಕ ಬ್ಯಾಂಕ್ ನಿಂದ ಕೆಬಿಎಲ್ ಕೃಷಿ ಭೂಮಿ ಯೋಜನೆಯ ಅಡಿಯಲ್ಲಿ ಅಗ್ರಿಕಲ್ಚರ್ ಲೋನ್ ಅಂದರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ಸಂಸ್ಥೆ ಅಥವಾ ಕಂಪನಿ ಹಾಗೂ ಅವಿಭಕ್ತ ಕುಟುಂಬದವರು ಕೃಷಿ ಭೂಮಿಯನ್ನು ಖರೀದಿ ಮಾಡಲು ತಕ್ಷಣ ಸಾಲವನ್ನು ಕೊಡಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬ್ಯಾಂಕ್ ಗೆ ಕೊಡಬೇಕಾದ ದಾಖಲೆಗಳು ಯಾವ್ಯಾವು? ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಕೊಡಲಾಗಿದೆ, ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ಇದನ್ನು ಓದಿ: ರೇಷನ್ ಮತ್ತು ಗೃಹಲಕ್ಷ್ಮಿ ಲಾಭ ಇಂತವರಿಗೆ ಸಿಗೋದಿಲ್ಲ. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರಾಗಿರುತ್ತಾರೆ?
• ಅರ್ಜಿದಾರರು ಇತರೆ ಬ್ಯಾಂಕಿನಲ್ಲಿ ಸಾಲ ಪಾವತಿ ಬಾಕಿ ಇರಬಾರದು. ಇದ್ದಲ್ಲಿ ಅದನ್ನು ಮರುಪಾವತಿ ಮಾಡಲು ಸಿದ್ಧವಿರಬೇಕು.
• ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
• ಅರ್ಜಿದಾರರಿಗೆ 18 ವರ್ಷ ವಯಸ್ಸು ಆಗಿರಬೇಕು.
ಸಾಲವನ್ನು ಪಡೆಯಲು ಬ್ಯಾಂಕ್ ನೇಮಗಳು: ಖರೀದಿ ಮಾಡಲು ಉದ್ದೇಶಿಸಲಾದ ಕೃಷಿ ಭೂಮಿಯನ್ನು ಕಡ್ಡಾಯವಾಗಿ ಬ್ಯಾಂಕ್ ನಲ್ಲಿ ಒತ್ತಿ ಇರಿಸಬೇಕಾಗುತ್ತದೆ. ಸಾಲವನ್ನು ಪಡೆಯಲು ಸ್ಯೂರಿಟಿ ಕೊಡುವದು ಇದು ಕಡ್ಡಾಯವಾಗಿದೆ.
ಸಾಲದ ಮರುಪಾವತಿ ವಿಧಾನಗಳೆನು?
• ತ್ರೈಮಾಸಿಕ ವವಿಧಾನ: ಒಮ್ಮೆ ಸಾಲವನ್ನು ಪಡೆದ ಬಳಿಕ ಕಂತುಗಳನ್ನು ಬ್ಯಾಂಕಿಗೆ ಕಟ್ಟಲು ಗ್ರಾಹಕರು ಅಂತಹಂತವಾಗಿ ಮೂರು ತಿಂಗಳಿಗೆ ಒಮ್ಮೆ ಮರುಪಾವತಿಯ ಸಾಲವನ್ನು ಪಾವತಿಸಲು ಅವಕಾಶ ಇರುತ್ತದೆ.
• ಅರ್ಧವಾರ್ಷಿಕ ವಿಧಾನ: ಈ ಆಯ್ಕೆಯನ್ನು ಮಾಡಿಕೊಳ್ಳುವುದರ ಮೂಲಕ ಸಾಲವನ್ನು ಪಡೆದ ಬಳಿಕ ಕಂತುಗಳನ್ನು ಬ್ಯಾಂಕಿಗೆ ಕಟ್ಟಲು ಗ್ರಾಹಕರು ಆರು ಆರು ತಿಂಗಳಿಗೊಮ್ಮೆ ಪಾವತಿಯನ್ನು ಪಾವತಿಸಲು ಅವಕಾಶಗಳು ಇರುತ್ತವೆ.
• ವಾರ್ಷಿಕ ವಿಧಾನ ಸಾಲವನ್ನು ಪಡೆದ ನಂತರ ಕಂತುಗಳನ್ನು ಬ್ಯಾಂಕಿಗೆ ಕಟ್ಟಲು ಗ್ರಾಹಕರಿಗೆ 12 ತಿಂಗಳಿಗೆ ಒಮ್ಮೆ ಹಣವನ್ನು ಪಾವತಿಸಲು ಅವಕಾಶ ಇರುತ್ತದೆ.
ಸಾಲದ ಮಿತಿ ಎಷ್ಟು?
ಕನಿಷ್ಠ ಸಾಲದ ಮಿತಿ 50,000 ರೂಪಾಯಿ.
ಗರಿಷ್ಠ ಸಾಲದ ಮಿತಿ 750 ಲಕ್ಷ ರೂಪಾಯಿಗಳು.
ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕ ಬ್ಯಾಂಕ್ ಯಿಂದ ಕೃಷಿ ಭೂಮಿಯನ್ನು ಖರೀದಿ ಮಾಡಲು ಸಾಲವನ್ನು ಪಡೆಯಲು ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ನೇರವಾಗಿ ಅವಶ್ಯ ದಾಖಲೆಗಳನ್ನು ತೆಗೆದುಕೊಂಡು ಅವುಗಳ ಸಮೇತ ಭೇಟಿ ಮಾಡಿ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸುವ ಅವಕಾಶ ಇದೆ. ಅದು ಹೇಗೆ?
ಗ್ರಾಹಕರು ಕರ್ನಾಟಕ ಬ್ಯಾಂಕಿನ ಅಧಿಕೃತ ಜಾಲತಾಣವನ್ನು, ಅಂದರೆ, ವೆಬ್ಸೈಟ್ ಅನ್ನು ಬೇಟಿಮಾಡಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ.
• ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಬ್ಯಾಂಕಿನ ವೆಬ್ಸೈಟ್ ಅನ್ನು ಒಪನ್ ಮಾಡಬೇಕು.
• ಅಧಿಕೃತ ವೆಬ್‌ಸೈಟಿನ ಒಪನ್ ಮಾಡಿದ ನಂತರ ಮುಖಪುಟದಲ್ಲಿ ಅಲ್ಲಿ loan ಗಳು ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಅಂದರೆ ಅವಶ್ಯವಿರುವ ಸಾಲದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
• ಈ ಪೇಜ್ ಪೇಜ್‌ನಲ್ಲಿ ಈಗಲೇ ಅರ್ಜಿ ಸಲ್ಲಿಸಿ appy now ಎಂದು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಸಾಲದ ವಿಧಾನವನ್ನು ಆಯ್ಕೆ ಮಾಡಿ ಆ ಬಳಿಕ ಕೆಳಗೆ ಅಪ್ಲೈ ನೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಕರ್ನಾಟಕ ಬ್ಯಾಂಕ್ ಸಾಲದ ವಿಶೇಷತೆಗಳು ಏನು?
• ಇಲ್ಲಿ ಸರಳ ಪ್ರಕ್ರಿಯೆ ಇರುತ್ತದೆ.
• ತ್ವರಿತವಾಗಿ ಮಂಜೂರಾತಿ ಇರುತ್ತದೆ.
• OD ಸೌಲಭ್ಯದೊಂದಿಗೆ ಅಲ್ಪಾವಧಿ ಹಣದ ಅಗತ್ಯವನ್ನು ಪೂರೈಕೆ ಇರುತ್ತದೆ.
• ಅವಧಿ ಸಾಲದೊಂದಿಗೆ ದೀರ್ಘ ಸಮಯದ ಹಣದ ಅಗತ್ಯತೆಗಳನ್ನು ಪೂರೈಸಬಹುದುಮಾಡಿಕೊಳ್ಳಬಹುದು.
ಇದನ್ನು ಓದಿ: ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ₹3 ಲಕ್ಷದವರೆಗೆ ಸಾಲ ಸೌಲಭ್ಯ,
ಲೋನ್ ಪಡೆಯಲು ದಾಖಲೆಗಳು ಯಾವುವು?
ಗ್ರಾಹಕರು ಕರ್ನಾಟಕ ಬ್ಯಾಂಕ್‌ನಲ್ಲಿ ನಲ್ಲಿ ಸಾಲವನ್ನು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿ ಇರುತ್ತದೆ.
• ಅರ್ಜಿದಾರರ ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಪಾಸ್‌ಪೋರ್ಟ್ ಫೋಟೋ ಸೈಜ್ ಫೋಟೋ.
• ಪ್ಯಾನ್ ಕಾರ್ಡ್.
• ಆದಾಯ ತೆರಿಗೆ ಪಾವತಿ ಅದು ನಿಮ್ಮ ಹತ್ತಿರವಿದ್ದರೆ.
• ಜಮೀನಿನ ಅಧಿಕೃತ ದಾಖಲೆಗಳು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರ ಇರುವ ಕರ್ನಾಟಕ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ.
ಕರ್ನಾಟಕ ಬ್ಯಾಂಕ್ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ: 1800-425-1444 & 1800-572-8031.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.