ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ₹3 ಲಕ್ಷದವರೆಗೆ ಸಾಲ ಸೌಲಭ್ಯ,
ಬೀಜ, ಗೊಬ್ಬರ ಖರೀದಿ ಸೇರಿದಂತೆ ಇನ್ನೂ ಮುಂತಾದ ಕೃಷಿಗೆ ಅಗತ್ಯ ಹಣಕ್ಕಾಗಿ ಕೇವಲ 4% ಬಡ್ಡಿದರದಲ್ಲಿ ₹3 ಲಕ್ಷ ರೂಪಾಯಿ ವರೆಗೆ ಸಾಲ ದೊರೆಯಲಿದೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಇದು ರೈತರ ಆರ್ಥಿಕ ಸಮಸ್ಯೆ ಕಡಿಮೆ ಮಾಡಲಿದೆ.
• ಕೇವಲ 4% ಬಡ್ಡಿದರದಲ್ಲಿ ₹3 ಲಕ್ಷ ರೂಪಾಯಿ ವರೆಗೆ ಸಾಲ ಸಿಗುತ್ತದೆ.
• ಆನ್ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ
• ಬಿತ್ತನೆ ಬೀಜ, ರಸಗೊಬ್ಬರ, ಕೃಷಿಯ ಉಪಕರಣಗಳನ್ನು ಖರೀದಿ ಮಾಡಲು ರೈತರಿಗೆ ಸಬ್ಸಿಡಿ ದೊರೆಯಲಿದೆ.
ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲು ಕೇಂದ್ರ ಸರ್ಕಾರ ಆರಂಭಿಸಿದ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card – KCC) ಯೋಜನೆಯು ಇವಾಗ ಹಲವಾರು ರೈತರಿಗೆ ಇದು ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯ ಅಡಿಯಲ್ಲಿ ರೈತರು ಕೇವಲ 4% ಬಡ್ಡಿದರದಲ್ಲಿ ₹3 ಲಕ್ಷ ರೂಪಾಯಿ ವರೆಗೆ ಸಾಲ (Subsidy Loan) ಪಡೆಯಬಹುದು.
ಹವಾಮಾನ ವ್ಯತ್ಯಾಸ, ಬೆಲೆ ಏರಿಕೆ,ಹಾಗೂ ಆರ್ಥಿಕ ಸಮಸ್ಯೆಗಳು (finance availability) ರೈತರಿಗೆ ಬೆಂಬಲವಿಲ್ಲದೇ ಬಿಟ್ಟಿರುವ ಈ ದಿನಮಾನಗಳಲ್ಲಿ, ಇಂತಹ ಯೋಜನೆಗಳು ನಿಜವಾಗಿಯೂ ಇದು ರೈತರಿಗೆ ಆರ್ಥಿಕ ಶಕ್ತಿ ಒದಗಿಸುತ್ತದೆ. ರೈತರು ಬೀಜ, ರಸಗೊಬ್ಬರ, ಕೀಟನಾಶಕಗಳು, ಪಂಪ್ ಸೆಟ್ ಅಥವಾ ಕೃಷಿಗೆ ಬೇಕಾಗುವ ಉಪಕರಣಗಳ ಖರೀದಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದು.
ಇದನ್ನು ಓದಿ: ಕೃಷಿ ಡಿಪ್ಲೋಮಾ ಕೋರ್ಸ್ 2025 ರೈತರ ಮಕ್ಕಳಿಗೆ 50% ಮೀಸಲಾತಿ
ಯೋಜನೆಯು 1998ರಲ್ಲಿಯೇ ಆರಂಭವಾದರೂ, ಇತ್ತೀಚೆಗಿನ ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ (online application) ಲಾಭದಿಂದಾಗಿ ಈಗ ಇದು ಹೆಚ್ಚು ಸಹಾಯವಾಗುವಂತೆ ಇದೆ. ರೈತರು ತಮ್ಮ ಮನೆಯಿಂದಲೇ ತಮ್ಮ ಮೊಬೈಲ್ ಮುಖಾಂತರ SBI YONO App ಬಳಸಿ ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಅಥವಾ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಆಫ್‌ಲೈನ್ ಮೂಲಕ ಕೂಡ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು Aadhaar card, PAN card, bank passbook ಹಾಗೂ ತಮ್ಮ ಜಮೀನಿಗೆ ಸಂಬಂಧಿತ ದಾಖಲೆಗಳು ಅಗತ್ಯವಾಗಿ ಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕ್ರಮಗಳು ತುಂಬಾ ಸುಲಭವಾಗಿದೆ, ಗ್ರಾಮಾಂತರ ಪ್ರದೇಶದ ರೈತರಿಗೆ ಸಹ ಸುಲಭವಾಗಿ ದೊರೆಯುವಂತೆ ಇದೆ.
ಇನ್ನೊಂದು ಮುಖ್ಯವಾದ ಅಪರೂಪದ ಮಾಹಿತಿ ಏನೆಂದರೆ – ಕೇಂದ್ರ ಸರ್ಕಾರವು ಈ ಸಾಲದ (Loan) ಮಿತಿಯನ್ನು ₹5 ಲಕ್ಷ ರೂಪಾಯಿ ವರೆಗೆ ಜಾಸ್ತಿ ಮಾಡುವ ಯೋಚನೆದಲ್ಲಿ ಇದೆ, ಅಧಿಕೃತ ಘೋಷಣೆಗೆ ನಿರೀಕ್ಷೆಯಿದೆ. ಇದರಿಂದ ಹೆಚ್ಚಿನ ರೈತರಿಗೆ ಹೆಚ್ಚಿನ ನೆರವು ದೊರೆಯಬಹುದಾಗಿದೆ.
ಇದನ್ನು ಓದಿ: UPI ಬಳಕೆದಾರರಿಗೆ ಗುಡ್ ನ್ಯೂಸ್: ಇವತ್ತಿನಿಂದ ಟೆಕ್ನಿಕಲ್ ಸಮಸ್ಯೆ ಇಲ್ಲದೇನೆ, ಇನ್ನಷ್ಟು ವೇಗವಾಗಲಿದೆ
ಈ ಯೋಜನೆಯ ಮುಖ್ಯ ಲಕ್ಷಣಗಳು ಏನು?
• ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾಮಾಡುವುದಿಲ್ಲ.
• ರೈತರಿಗೆ ಹಣವನ್ನು ಕ್ರೆಡಿಟ್ ರೂಪದಲ್ಲಿ (credit facility) ದೊರೆಯುತ್ತದೆ
• ರೈತರು ಖರ್ಚು ಮಾಡಿದ ಹಣವನ್ನು ಮಾತ್ರ ನಿಯಮಿತ ಸಮಯದಲ್ಲಿ ಕಟ್ಟಬೇಕು ಅಂದರೆ ಮರುಪಾವತಿಸಬೇಕು.
• ರೈತರಿಗೆ ಬಡ್ಡಿದರವು ಇತರೆ ಸಾಲಗಳಿಗೆ (Loan Interest) ಹೋಲಿಸಿದರೆ ಇದು ಬಹಳ ಕಡಿಮೆ ಇದೆ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ರೈತರ ಬದುಕಿಗೆ ಬದಲಾವಣೆಯ ಶಕ್ತಿಯನ್ನು ತಂದಿದೆ. ಇದು ಕೃಷಿ ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ಮತ್ತು ಆರ್ಥಿಕ ಸ್ಥಿರತೆ ಕಲ್ಪಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪರಿಣಮಿಸುತ್ತಿದೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.