ಕರ್ನಾಟಕ ರಾಜ್ಯ ಸರ್ಕಾರದಿಂದ ವಾಹನ ಖರೀದಿ ಮಾಡಲು ಸಿಗಲಿದೆ ಮೂರು ಲಕ್ಷ ರೂಪಾಯಿ ಸಹಾಯಧನ.

ಕರ್ನಾಟಕ ರಾಜ್ಯ ಸರ್ಕಾರದಿಂದ ವಾಹನ ಖರೀದಿ ಮಾಡಲು ಸಿಗಲಿದೆ ಮೂರು ಲಕ್ಷ ರೂಪಾಯಿ ಸಹಾಯಧನ.

ಇವಾಗಲೇ ಅಪ್ಲೈ ಮಾಡಿ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಕೊಡಲಾಗಿದೆ ಓದಿ ತಿಳಿದುಕೊಳ್ಳಿ ಮತ್ತು ಅರ್ಹರಾಗಿದ್ದರೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಸ್ವಾವಲಂಬಿ ಸಾರಥಿ ಯೋಜನೆ, ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಹಾಯಧನ.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ 2025-26ನೇ ನೇ ಸಾಲಿಗೆ ಹಲವು ಯೋಜನೆಗಳ ಅಡಿ, ಎಲ್ಲ ಸಾಲ ಹಾಗೂ ಸಹಾಯಕ್ಕಾಗಿ, ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಆವನಿಸಲಾಗಿದೆ. ಸ್ವಾವಲಂಬಿಯತ್ತ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿದೆ.

ಈ “ಸ್ವಾವಲಂಬಿ ಸಾರಥಿ ಯೋಜನೆ”ಯ ವಿವರಗಳು.

ಈ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಹಾಯಧನ ಕೊಡಲಾಗುತ್ತಿದೆ. ಈ ಯೋಜನೆಯ ಉದ್ದೇಶ ಆರ್ಥಿಕವಾಗಿ ಸದೃಢವಾಗಲು ಆಸಕ್ತಿ ಇರುವವರಿಗೆ ವಾಹನ ಖರೀದಿಸಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಹಾಯವಾಗುವುದು.

ಇದನ್ನು ಓದಿ: ಕರ್ನಾಟಕ ಬ್ಯಾಂಕ್‌ ಬ್ಯಾಂಕ್‌ನಲ್ಲಿ ಕೃಷಿಮಾಡಲು ಭೂಮಿ ಖರೀದಿ ಮಾಡಲು ಸಾಲ ಸೌಲಭ್ಯ

ಅರ್ಹತೆಯ ಮಾನದಂಡಗಳೇನು?

• ಅರ್ಜಿದಾರರ ವಯಸ್ಸು 21ರಿಂದ 45 ವರ್ಷದ ಒಳಗೆ ಇರಬೇಕು.

WhatsApp Group Join Now
Telegram Group Join Now       

• ಗ್ರಾಮೀಣ ಪ್ರದೇಶದ ಅರ್ಜಿದಾರರಿಗೆ ವಾರ್ಷಿಕ ಆದಾಯ 98,000 ಕ್ಕಿಂತ ಕಡಿಮೆ ಇರಬೇಕು.

• ನಗರ ಪ್ರದೇಶದವರು ಆಗಿದ್ದರೆ ವಾರ್ಷಿಕ ಆದಾಯ 1,20,000ಗಳಿಗಿಂತ ಕಡಿಮೆ ಇರಬೇಕು.

WhatsApp Group Join Now
Telegram Group Join Now       

• ಚಾಲನ ಪರವನಿಗಿ ಹೊಂದಿರಬೇಕು. ಲಘು ವಾಹನ ಚಾಲನ ಪರವನಿಗೆ ಡಿ.ಎಲ್ ಕಡ್ಡಾಯವಾಗಿ ಹೊಂದಿರಬೇಕು.

• ಮುಖ್ಯವಾಗಿ ಇದಕ್ಕಿಂತ ಮುಂಚೆ ಯಾವುದೇ ಸರಕಾರಿ ಯೋಜನೆಗಳಿಂದ ಲಾಭ ಪಡೆದಿರಬಾರದು.

ಈ ಅರ್ಜಿಗೆ ಗೆ ಬೇಕಾಗುವ ಮುಖ್ಯ ದಾಖಲೆಗಳೇನು?

• ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.

• ಆಧಾರ್ ಕಾರ್ಡ್.

• ಚಾಲನಾ ಪರವಾನಿಗೆ ಜೆರಾಕ್ಸ್.

• ವಾಹನದ ಅಂದಾಜು ಖರೀದಿ ವೆಚ್ಚ ಕೊಟೇಶನ್ ತೆಗೆಸಿಕೊಂಡಿರಬೇಕು.

• ಸ್ವಯಂ ಘೋಷಣಾ ಪತ್ರ ಹೊಂದಿರಬೇಕು

ಇದನ್ನು ಓದಿ: ಖಾಲಿ ಇರುವ ಎಂಟು ಸಾವಿರ ಕಾನ್ಸ್ಟೇಬಲ್ ಹಾಗೂ 1,000 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸುವುದು ಹೇಗೆ? ಇದರ ವಿಧಾನ ಇಲ್ಲಿದೆ.

ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನಲ್ಲೇ ಸಲ್ಲಿಸಬಹುದಾಗಿದೆ. ಅಥವಾ ಗ್ರಾಮ್ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌, ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿಗಾಗಿ 080 22374832 ಅಥವಾ 8050770004 ಅಥವಾ 8050770005 ಈ ಸಂಖ್ಯೆಗಳಿಗೆ ಸಂಪರ್ಕ ಮಾಡಿ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, 2025.

ಇತರ ಯೋಜನೆಗಳು ಈ ಕೆಳಗಡೆ ಓದಿ.

ನಿಗಮವು ಸ್ವಾವಲಂಬಿಸಾರಥಿ ಯೋಜನೆಗೆ ಈ ಕೆಳಗಿನ ಯೋಜನೆಗಳನ್ನು ಒದಗಿಸುತ್ತಿದೆ.

• ಗಂಗಾ ಕಲ್ಯಾಣ ನೀರಾವರಿ ಯೋಜನೆ,

• ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸಾಲ.

• ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ.

• ಹೊಲಿಗೆ ಯಂತ್ರ ವಿತರಣೆ.

• ಅರಿವು ಶೈಕ್ಷಣಿಕ ಸಾಲ.

• ಸ್ವಯಂ ಉದ್ಯೋಗ ವಯಕ್ತಿಕ ಸಾಲ.

 

ಎಂತವರಿಗೆ ಈ ಯೋಜನೆಗಳು ಅನ್ವಯವಾಗುತ್ತವೆ?

ಈ ಯೋಜನೆಗಳು ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 1, 2a, 3a, ಹಾಗೂ 3b ಗೆ ಸೀಮಿತವಾಗಿವೆ. ಕೆಲವು ಸಮುದಾಯಗಳು ವಿಶ್ವಕರ್ಮ, ಉಪ್ಪಾರ್, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ಇನ್ನು ಮುಂತಾದ ಸಮುದಾಯದವರಿಗೆ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಅರ್ಜಿದಾರರು ಗಮನಿಸಬೇಕಾದ ಪ್ರಮುಖವಾದ ಅಂಶಗಳು.

• ಅರ್ಜಿದಾರರು ಆಧಾರ್ ಕಾರ್ಡ್ ಲಿಂಕ್ ಆಗಿರುವ ಚಾಲ್ತಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

• ಆಧಾರ್ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿನ ವಿವರಗಳು ಒಂದೇ ರೀತಿಯಾಗಿರಬೇಕು.

• ಇದಕ್ಕಿಂತ ಮುಂಚೆ ಯಾವುದೇ ನಿಗಮದ ಯೋಜನೆಗಳಿಂದ ಲಾಭ ಪಡೆದವರು ಅಥವಾ ಅವರ ಕುಟುಂಬದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

• 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದರು. ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಸ್ನೇಹಿತರೆ, ಪ್ರತಿದಿನ ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment