FD ಯೋಜನೆಗಿಂತ ಅತಿ ಹೆಚ್ಚು ಬಡ್ಡಿ ನೀಡುವ 5 ಅತ್ಯುತ್ತಮ ಸುರಕ್ಷಿತ ಹೂಡಿಕೆಯ ಸರ್ಕಾರಿ ಉಳಿತಾಯ ಯೋಜನೆಗಳು

FD ಯೋಜನೆಗಿಂತ ಅತಿ ಹೆಚ್ಚು ಬಡ್ಡಿ ನೀಡುವ 5 ಅತ್ಯುತ್ತಮ ಸುರಕ್ಷಿತ ಹೂಡಿಕೆಯ ಸರ್ಕಾರಿ ಉಳಿತಾಯ ಯೋಜನೆಗಳು ಇಲ್ಲಿವೆ. ಓದಿ ತಿಳಿದುಕೊಳ್ಳಿ.

ಸುರಕ್ಷಿತ ಹೂಡಿಕೆಗೆ ಸರ್ಕಾರಿ ಸ್ಕೀಮ್‌ಗಳು ಗಳು ಹೆಚ್ಚಿನ ಬಡ್ಡಿ ರಿಟರ್ನ್, ಕಡಿಮೆ ಅಪಾಯ.

ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್ಗಳು ಇತ್ತೀಚಿಗೆ ಬಡ್ಡಿ ದರವನ್ನು ಕಡಿಮೆ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಅಪಾಯ ರಹಿತ ಹಾಗೂ ಹೆಚ್ಚಿಗೆ ಬಡ್ಡಿ ನೀಡುವ ಸರ್ಕಾರಿ ಉಳಿತಾಯ ಯೋಜನೆಗಳು ಉತ್ತಮ ಎಂದು ಹೇಳಬಹುದು. ಇಲ್ಲಿ ಎಫ್ ಡಿ ಗಿಂತ ಹೆಚ್ಚು ಬಡ್ಡಿ ನೀಡುವ 5 ಅಂಚೆ ಕಚೇರಿ ಹಾಗೂ ಸರ್ಕಾರಿ ಸ್ಕೀಮ್‌ಗಳ ಬಗ್ಗೆ ವಿವರ ಕೊಡಲಾಗಿದೆ. ಇದನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು, ನೀವು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆ ವಾರ್ಷಿಕ 8.2% ಬಡ್ಡಿ.

ಹಿರಿಯ ನಾಗರಿಕರಿಗಾಗಿ ಆಯೋಜಿಸಲಾದ ಈ ಯೋಜನೆಯು 8.2% ವಾರ್ಷಿಕ ಬಡ್ಡಿ ಕೊಡುತ್ತದೆ.

• ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು ಮಾತ್ರ.

• ಗರಿಷ್ಠ ಮಿತಿ 30 ಲಕ್ಷ, ಅದು ಒಬ್ಬರಿಗೆ ಮಾತ್ರ.

WhatsApp Group Join Now
Telegram Group Join Now       

• ಹೆರಿಗೆಯ ಪ್ರಯೋಜನಗಳು.

• ಹೆರಿಗೆ ಪ್ರಯೋಜನ ಐಟಿ ಕಾಯ್ದೆ 80C ಅಡಿಯಲ್ಲಿ ಒಂದುವರೆ ಲಕ್ಷ ರೂಪಾಯಿವರೆಗೆ ವಿನಾಯಿತಿ.

WhatsApp Group Join Now
Telegram Group Join Now       

ಈ ಯೋಜನೆ ಅರವತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮತ್ತು 58 ವರ್ಷದ ನಿವೃತ್ತಿ ಪಡೆದವರಿಗೂ ಕೂಡ ಇರುತ್ತದೆ.

ಮಾಸಿಕ ಆದಾಯದ ಯೋಜನೆ ವಾರ್ಷಿಕ ಬಡ್ಡಿ.

ಈ ಯೋಜನೆಯು ಮಾಸಿಕ ಆದಾಯವನ್ನು ಕೊಡುತ್ತದೆ ಹಾಗೂ 7.4% ವಾರ್ಷಿಕ ಬಡ್ಡಿದರವನ್ನು ಹೊಂದಿರುತ್ತದೆ.

• ಇದರಲ್ಲಿ ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು.

• ಗರಿಷ್ಠ ಹೂಡಿಕೆಯ ಮಿತಿ 9 ಲಕ್ಷ ರೂಪಾಯಿ ಒಬ್ಬ ವ್ಯಕ್ತಿಗೆ ಮತ್ತು 15 ಲಕ್ಷ ರೂಪಾಯಿ ಇದು ಸಂಯುಕ್ತ ಖಾತೆಗೆ.

• ಬಡ್ಡಿ ಪಾವತಿ ಪ್ರತಿ ತಿಂಗಳು ಇರುತ್ತದೆ.

• ಇದು ಐದು ವರ್ಷದ ಅವಧಿವರೆಗೆ ಇರುತ್ತದೆ.

ಇದು ಯಾರಿಗೆಲ್ಲ ಇರುತ್ತದೆ ಅಂದರೆ ನಿಯಮಿತ ಆದಾಯ ಬಯಸುವ ವೃದ್ಧರು ಹಾಗೂ ಪಿಂಚಣಿ ದಾರರಿಗೆ.

ಕಿಸಾನ್ ವಿಕಾಸ್ ಪತ್ರ ವಾರ್ಷಿಕ 7.5% ಬಡ್ಡಿ.

ಈ ಯೋಜನೆಯು 7.5% ಬಡ್ಡಿ ಕೊಡುತ್ತದೆ ಹಾಗೂ 155 ತಿಂಗಳಲ್ಲಿ 9.5 ವರ್ಷಗಳಲ್ಲಿ ಹಣವನ್ನು ಡಬ್ಬಲ್ ಆಗಿ ನೀಡುತ್ತದೆ.

• ಇದರಲ್ಲಿ ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು.

• ಮತ್ತು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ.

• ಬಡ್ಡಿಯ ಮೇಲೆ ತೆರಿಗೆ ಅನ್ವಯ ಅನ್ವಯವಾಗುತ್ತದೆ.

ಈ ಯೋಜನೆ ಯಾರಿಗೆಲ್ಲ ಇರುತ್ತದೆ ಅಂದರೆ ದೀರ್ಘ ಅವಧಿಯ ಸುರಕ್ಷಿತ ಹೂಡಿಕೆ ಬಯಸುವವರಿಗೆ.

ಇದನ್ನು ಓದಿ: ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ರೇಷನ್ ಹಣದ ಬದಲು ಬೇಳೆ, ಸಕ್ಕರೆ, ಎಣ್ಣೆ ಕಿಟ್ ವಿತರಿಸಲು ಸರ್ಕಾರದ ನಿರ್ಧಾರ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ವಾರ್ಷಿಕ ಬಡ್ಡಿ 7.7%.

ಎನ್ ಎಸ್ ಸಿ ಯೋಜನೆಯು 7.7% ಬಡ್ಡಿ ನೀಡುತ್ತದೆ ಹಾಗೂ ತೆರಿಗೆ ಉಳಿತಾಯದ ಅವಕಾಶವನ್ನು ಒದಗಿಸುತ್ತದೆ.

• ಇದರಲ್ಲಿ ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು.

• ಮತ್ತು ಗರಿಷ್ಠ ಹೂಡಿಕೆ ಮಾಡಲು ಯಾವುದೇ ಮಿತಿ ಇಲ್ಲ.

• ಇದರ ಅವಧಿ ಐದು ವರ್ಷಗಳವರೆಗೆ.

• ತೆರಿಗೆಯ ಪ್ರಯೋಜನ ಅಂದರೆ ಐಟಿ ಕಾಯ್ದೆ 80C ಅಡಿಯಲ್ಲಿ ಒಂದುವರೆ ಲಕ್ಷದವರೆಗೆ ವಿನಾಯಿತಿ ಇರುತ್ತದೆ.

ಮಧ್ಯಮ ಅವಧಿಯ ಹೂಡಿಕೆದಾರರು ಹಾಗೂ ತೆರಿಗೆ ಉಳಿತಾಯ ಬಯಸುವವರು ಈ ಯೋಜನೆ ಪಡೆಯಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ವಾರ್ಷಿಕ 7.5% ಬಡ್ಡಿ.

ಈ ಯೋಜನೆಯು ಮಹಿಳೆಯರು ಹಾಗೂ ಅವರ ಮಕ್ಕಳಿಗೆ 7.5% ಬಡ್ಡಿ ನೀಡುತ್ತದೆ.

• ಇದರಲ್ಲಿ ಕನಿಷ್ಠ ಹೂಡಿಕೆ ಸಾವಿರ ರೂಪಾಯಿಗಳು.

• ಮತ್ತು ಗರಿಷ್ಠ ಹೂಡಿಕೆ ಎರಡು ಲಕ್ಷ ರೂಪಾಯಿಗಳು.

• ಈ ಯೋಜನೆಯ ಅವಧಿ ಐದು ವರ್ಷಗಳವರೆಗೆ.

• ಈ ಯೋಜನೆಯಲ್ಲಿ ಬಡ್ಡಿಯ ಮೇಲೆ ತೆರಿಗೆ ಅನ್ವಯಿಸುತ್ತದೆ.

ಇದು ಮಹಿಳೆಯರು ಮತ್ತು ಅವರ ಮಕ್ಕಳ ಭವಿಷ್ಯದ ಉಳಿತಾಯಕ್ಕಾಗಿ ಈ ಯೋಜನೆಯನ್ನು ಮಾಡಬಹುದು.

FD ಗಿಂತ ಹೆಚ್ಚಿನ ಬಡ್ಡಿ ಹಾಗೂ ಸರ್ಕಾರದ ಗ್ಯಾರಂಟಿ ಬಯಸುವವರಿಗೆ ಈ ಯೋಜನೆಗಳು ಅತ್ಯುತ್ತಮ ಆಯ್ಕೆ, ಹೂಡಿಕೆದಾರರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಎಸ್ಸಿಎಸ್ಎಸ್, ಎಂಐಎಸ್, KVP, NSC ಅಥವಾ ಎಂ ಎಸ್ ಎಸ್ ಸಿ ಯೋಜನೆಗಳನ್ನು ಆಯ್ಕೆ ಮಾಡಬಹುದು.

ಸೂಚನೆಗಳು: ಬಡ್ಡಿ ದರಗಳು ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತಾ ಇರುತ್ತದೆ, ಆದ್ದರಿಂದ ಹೂಡಿಕೆ ಮಾಡುವ ಮೊದಲು ನವೀಕರಿಸಿದ ದರಗಳನ್ನು ಪರಿಶೀಲನೆ ಮಾಡಿಕೊಳ್ಳಿ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment