ಗೃಹಲಕ್ಷ್ಮಿ ಪೆಂಡಿಂಗ್ ಹಣ ರೂ.6,000 ರೂಪಾಯಿ ಒಟ್ಟಿಗೆ ಜಮಾ ಮತ್ತು ಹೊಸ ಅರ್ಜಿಗೂ ಕೂಡ ಅವಕಾಶವಿದೆ.

ಗೃಹಲಕ್ಷ್ಮಿ ಪೆಂಡಿಂಗ್ ಹಣ ರೂ.6,000 ರೂಪಾಯಿ ಒಟ್ಟಿಗೆ ಜಮಾ ಮತ್ತು ಹೊಸ ಅರ್ಜಿಗೂ ಕೂಡ ಅವಕಾಶವಿದೆ.

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬಾಕಿ ಉಳಿದ ಮೂರು ತಿಂಗಳ ಹಣವನ್ನು ಮೇ 31ರ ಒಳಗಡೆ ಮನೆಯ ಒಡತಿಗೆ ಅವರ, ಅವರವರ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ ಒಂದರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದರು. ಈ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿ ಕೊಡಲಾಗಿದೆ; ಬನ್ನಿ ಓದಿ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ 1.2 ಕೋಟಿ ಮಹಿಳೆಯರು ಪ್ರತಿ ತಿಂಗಳು 2000 ಯಂತೆ ನೆರವು ಪಡೆಯುತ್ತಿದ್ದಾರೆ, ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ನಿಧಿ ವಿತರಣೆಯ ವಿಳಂಬದಿಂದಾಗಿ ಕಳೆದ ಮೂರು ತಿಂಗಳ ವರ್ಗಾವಣೆ ತಡವಾಗಿತ್ತು. ಸಚಿವೆಯವರ ಪ್ರಕಾರ, ಈಗ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಮೇ ತಿಂಗಳು ಕಳಿಯುದರೊಳಗಡೆ ಎಲ್ಲಾ ಲಾಭಾರ್ತಿಗಳ ಖಾತೆಗೆ ಒಟ್ಟು 6,000 ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವವರಿಗೆ ಮುಂಬರುವ ದಿನಗಳು ಸಂತಸ ತರಲಿವೆ

ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲಿಸಲು ಲಾಭಾತಿಗಳು ಡಿವಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಬಳಸಿ ನೋಡಬಹುದು. ಅಪ್ಲಿಕೇಶನ್ ಅಲ್ಲಿ ಆದರ್ ಸಂಖ್ಯೆ ಮತ್ತು ನೋಂದಣಿ ಇರುವ ಮೊಬೈಲ್ ನಂಬರ್ ನಮೂದಿಸಿ, ಓಟಿಪಿ ಮೂಲಕ ಲಾಗಿನ್ ಮಾಡಿಕೊಳ್ಳಿ, ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ ವಿವರವನ್ನು ಪರಿಶೀಲಿಸಿ. ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಅರ್ಜಿಯನ್ನು ಸಲ್ಲಿಸಬಹುದು.

ಸಚಿವೆ ಹೆಬ್ಬಾಳ್ಕರ್ ಅವರು ಯೋಜನೆಯ ಅಡಿಯಲ್ಲಿ ಬಾಕಿ ಉಳಿದ ಹಣವನ್ನು ಮೇ 31ರ ಒಳಗಡೆ ವರ್ಗಾವಣೆ ಮಾಡಲಾಗುವುದು ವಿಳಂಬ ಆಗಿರುವುದಕ್ಕೆ ನಾವು ಕ್ಷಮೆ ಕೇಳುತಿದ್ದೆವೆ ಎಂದು ಕೇಳಿಕೊಂಡರು. ಯಾವುದೇ ಸಮಸ್ಯೆ ಉಂಟಾದರೆ 1902 ಗೆ ಸಂಪರ್ಕಿಸಲು ಲಾಭಾತಿಗಳಿಗೆ ಸಚಿವೆಯರು ವಿನಂತಿಸಿದ್ದಾರೆ.

WhatsApp Group Join Now
Telegram Group Join Now       

ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ 2023ರ ಆಗಸ್ಟ್ ಆಗಸ್ಟ್‌ನಲ್ಲಿ ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಹಿಳಾ ಯಜಮಾನಿಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ಕೊಡಲಾಗುತ್ತಿದೆ. ಈಗಾಗಲೇ 1.2 ಕೋಟಿ ಇದು ಹೆಚ್ಚು ಹೆಣ್ಣು ಮಕ್ಕಳಿಗೆ ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now       

 

Leave a Comment