44,664 ವರೆಗೆ ಗ್ಯಾರಂಟಿ ಬಡ್ಡಿ ಪಡೆಯಿರಿ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆ, ಇದರ ಸಂಪೂರ್ಣ ವಿವರ ಇಲ್ಲಿದೆ.
ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (ಟಿಡಿ) ಈ ಯೋಜನೆ ಭಾರತದ ಸರ್ಕಾರದ ನೇರ ಬೆಂಬಲಿತ ಉಳಿತಾಯ ಯೋಜನೆ ಇದಾಗಿದೆ. ಇದರಲ್ಲಿ ಹೂಡಿಕೆ ಮಾಡಿದವರು ಹಣಕ್ಕೆ ಸಂಪೂರ್ಣ ಸುರಕ್ಷತೆ ಇದೆ. ಬ್ಯಾಂಕ್ ಠೇವಣಿಗೆ ಹೋಲಿಸಿದರೆ ಪೋಸ್ಟ್ ಆಫೀಸ್ ಟಿಡಿ ಹೆಚ್ಚಿನ ಬಡ್ಡಿ ದರ ಮತ್ತು ರಿಸ್ಕ್ ಫ್ರೀ ಹೂಡಿಕೆ ಅವಕಾಶ ಕೊಡುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಓದಿ ತಿಳಿದುಕೊಳ್ಳಿ.
ಪೋಸ್ಟ್ ಆಫೀಸ್ ಯೋಜನೆಯ ಪ್ರಾಮುಖ್ಯತೆಗಳು ಏನು?
ಈ ವರ್ಷ ಆರ್ ಬಿ ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ರೇಪ್ ದರವನ್ನು ಎರಡು ಬಾರಿ ಕಡಿತ ಮಾಡಿದೆ. ಇದರ ಪರಿಣಾಮವಾಗಿ ಬ್ಯಾಂಕುಗಳು FD ಬಡ್ಡಿದರವನ್ನು ಕಡಿಮೆ ಮಾಡಿವೆ, ಆದರೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಇಂದಿನಂತೆಯೇ ಹೆಚ್ಚಿನ ಬಡ್ಡಿ ನೀಡಿಸುತ್ತವೆ ಹಾಗೂ ಸರ್ಕಾರ ಗ್ಯಾರಂಟಿ ಇರುತ್ತದೆ. ಹೂಡಿಕೆದಾರರ ನಂಬಿಕೆಗೆ ಇದು ಪಾತ್ರವಾಗಿದೆ.
ನೀವು ಮೂರು ಲಕ್ಷ ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ ಹೂಡಿಕೆ ಮಾಡಿದರೆ ಬಡ್ಡಿ ಎಷ್ಟು ದೊರೆಯುತ್ತದೆ, ಇಲ್ಲಿ ಕೊಡಲಾಗಿದೆ ನೋಡಿ.
ಪ್ರಸ್ತುತ ಬಡ್ಡಿದರಗಳು,
ಒಂದು ವರ್ಷಕ್ಕೆ 6.9%,
ಎರಡು ವರ್ಷಕ್ಕೆ 7.0%,
3 ವರ್ಷಕ್ಕೆ 7.1%,
5 ವರ್ಷಕ್ಕೆ 7.5%
ಇದನ್ನು ಒಮ್ಮೆ ಓದಿ: CET 2025 ಫಲಿತಾಂಶ ಪ್ರಕಟಣೆ: ಇಲ್ಲಿವೆ ಮುಖ್ಯ ಮಾಹಿತಿಗಳು
ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಈ ಯೋಜನೆಯ ವಿಶೇಷತೆಗಳೇನು?
ಸಂಪೂರ್ಣವಾಗಿ ಸುರಕ್ಷಿತ ಮತ್ತು ಗ್ಯಾರಂಟಿ.
ಇದು ಸರ್ಕಾರಿ ಯೋಜನೆ ಆಗಿರುವುದರಿಂದ ಹೂಡಿಕೆ ಮಾಡಿರುವವರ ಹಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಬಡ್ಡಿ ಹಾಗೂ ಅಸಲು ಹಣ ಹಂಡ್ರೆಡ್ ಪರ್ಸೆಂಟ್ ಸುರಕ್ಷಿತವಾಗಿರುತ್ತದೆ.
ಇಲ್ಲಿ ಎಲ್ಲಾ ವಯಸ್ಸಿನವರಿಗೆ ಒಂದೇ ಬಡ್ಡಿ ದರ ಇರುತ್ತದೆ.
ಬ್ಯಾಂಕ್ ವ್ಯಕ್ತಿಗಳಂತೆ, ಸೀನಿಯರ್ ಸಿಟಿ ಜನರಿಗೆ ಮಾತ್ರ ಹೆಚ್ಚಿಗೆ ದರ ಇರುವುದಿಲ್ಲ; ಎಲ್ಲರಿಗೂ ಒಂದೇ ಬಡ್ಡಿದರ ಇರುತ್ತದೆ.
FD ಅಕೌಂಟ್ ತೆರೆದ ಮೇಲೆ ಕನಿಷ್ಠ 200 ರೂಪಾಯಿಗಳಿಂದ ಪ್ರಾರಂಭಿಸಬಹುದು.
ನೀವು ತೆರೆದ ಕಾತೆಯನ್ನು ಯಾವುದೇ ಪೋಸ್ಟ್ ಆಫೀಸಿಗೆ ವರ್ಗಾಯಿಸಲು ಅವಕಾಶವಿದೆ.
ನೀವು ನೀವು ಸ್ಥಳ ಬದಲಾಯಿಸಿದರೆ ಬೇರೆ ಊರಿಗೆ ವಲಸೆ ಹೋದರೆ ನಿಮ್ಮ ಟಿಡಿ ಖಾತೆಯನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
ಐದು ವರ್ಷದ ಠೇವಣಿಗೆ ತೆರಿಗೆ ವಿನಾಯಿತಿ ಇರುತ್ತದೆ.
5 ವರ್ಷಗಳ ಟಿಡಿ ಮಾಡಿದರೆ ವಾರ್ಷಿಕ ಒಂದುವರೆ ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಅಗತ್ಯವಿದ್ದರೆ, ಸಮಯಕ್ಕೆ ಮುಂಚಿತವಾಗಿ ಹಣವನ್ನು ತೆಗೆದುಕೊಳ್ಳಬಹುದು.
ತುರ್ತು ಸಮಯದಲ್ಲಿ ಅಗತ್ಯ ಇದ್ದಾಗ ನಿಯಮಗಳಿಗೆ ಅನುಸಾರವಾಗಿ ಮುಂಚಿತವಾಗಿ ಹಣ ಹಿಂಪಡೆಯಬಹುದು.
ನಾಮನಿರ್ದೇಶನ ಹಾಗೂ ಜಂಟಿ ಖಾತೆ ಸೌಲಭ್ಯ,
ನೀವು ಬಯಸಿದ ವ್ಯಕ್ತಿಗೆ ನಾಮನಿರ್ದೇಶನ ಮಾಡಬಹುದು.
ಇಬ್ಬರು ಅಥವಾ ಹೆಚ್ಚಿನ ಜನ ಜಂಟಿಯಾಗಿ ಖಾತೆ ಓಪನ್ ಮಾಡಿ ನಡೆಸಿಕೊಳ್ಳಬಹುದು.
ಪೋಸ್ಟ್ ಆಫೀಸ್ TD ಮತ್ತು ಬ್ಯಾಂಕುಗಳ ಮಧ್ಯೆ ಇರುವ ವ್ಯತ್ಯಾಸವೇನು?
ಪೋಸ್ಟ್ ಆಫೀಸ್ನಲ್ಲಿ ಇರುವ TD ಗೆ ಸರ್ಕಾರ ಗ್ಯಾರಂಟಿ ಆಗಿರುತ್ತದೆ. ಬ್ಯಾಂಕುಗಳಲ್ಲಿ ಇರುವ TD ಗೆ ಬ್ಯಾಂಕ್ ಡಿಐಸಿಜಿಐ 5 ಲಕ್ಷದ ವರೆಗೆ.
ಪೋಸ್ಟ್ ಆಫೀಸ್ನಲ್ಲಿ ಬಡ್ಡಿಯ ದರ ಹೆಚ್ಚಿರುತ್ತದೆ; ಇದು ಎರಡು ವರ್ಷಕ್ಕೆ 7.0% ಹಾಗೂ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
ಪೋಸ್ಟ್ ಆಫೀಸ್ನಲ್ಲಿ ಐದು ವರ್ಷದ ಯೋಜನೆ ಇರುತ್ತದೆ. ಬ್ಯಾಂಕುಗಳಲ್ಲಿ ಐದು ವರ್ಷದ ಟ್ಯಾಕ್ಸ್ ಸೇವಿಂಗ್ fd ಲಭ್ಯ.
ಪೋಸ್ಟ್ ಆಫೀಸ್ನಲ್ಲಿ ಅತಿ ಕಡಿಮೆ ಎಂದರೆ 200 ರೂಪಾಯಿವರೆಗೆ ಟಿಡಿಯನ್ನು ಕಟ್ಟಬಹುದು. ಅದೇ ಬ್ಯಾಂಕ್ಗಳಲ್ಲಿ ಸಾಮಾನ್ಯವಾಗಿ ಸಾವಿರ ರೂಪಾಯಿಗಳಿಗಿಂತ ಹೆಚ್ಚುಇರುತ್ತದೆ.
ಬಡ್ಡಿ ದರ ಮತ್ತು ಸುರಕ್ಷತೆಯ ದೃಷ್ಟಿಗಳಿಂದ ಪೋಸ್ಟ್ ಆಫೀಸ್ ಟಿಡಿ ಒಂದು ಉತ್ತಮ ಎಫ್ ಡಿ ಎಂದು ಹೇಳಬಹುದು.
ಹೂಡಿಕೆ ಮಾಡುವುದು ಹೇಗೆ?
ನಿಮ್ಮ ಹತ್ತಿರದ ಪೋಸ್ಟ್ ಆಫೀಸಿಗೆ ಭೇಟಿ ನೀಡಿ, ಕೆ ವೈ ಸಿ ದಾಖಲೆಗಳನ್ನು ಸಲ್ಲಿಸಿ, ದಾಖಲೆಗಳು, ಅರ್ಜಿ ಫಾರಂ ಅನ್ನು ನಿಭಾಯಿಸಿ, ನೀವು ಆಯ್ಕೆ ಮಾಡಿದ ಅವರಿಗೆ ಹಣ ಠೇವಣಿ ಮಾಡಿ, ಠೇವಣಿ ರಶೀದಿ ಮತ್ತು ಪಾಸ್ ಬುಕ್ ಪಡೆಯಿರಿ.
ಸ್ನೇಹಿತರೆ, ಇಲ್ಲಿ ಗಮನಿಸಿ, ಎಫ್, ಡಿ ಬಡ್ಡಿ ದರಗಳು ಸರಕಾರದ ನೀತಿಗೆ ಅನುಗುಣವಾಗಿ ಬದಲಾವಣೆ ಆಗಬಹುದು. ಹೂಡಿಕೆ ಮಾಡುವ ಮೊದಲು ಆಗಿನ ದರವನ್ನು ಖಚಿತ ಮಾಡಿಕೊಳ್ಳಿ.
ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ದಿನನಿತ್ಯ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನೆಲ್ ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.