ಬ್ಯಾಂಕ್ ಲೋನ್ ಕ್ಲೋಸ್ ಮಾಡುವುದು ಹೇಗೆ ಎಂಬುದು 90% ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ.

ಬ್ಯಾಂಕ್ ಲೋನ್ ಕ್ಲೋಸ್ ಮಾಡುವುದು ಹೇಗೆ ಎಂಬುದು 90% ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ.

ಬ್ಯಾಂಕ್ ಲೋನ್ ಕ್ಲೋಸಿಂಗ್ ಮಾಡುವ ವೇಳೆಯಲ್ಲಿ ಸರಿಯಾದ ದಾಖಲೆಗಳನ್ನು ಪಡೆಯದೆ ಇದ್ದರೆ ನಿಮ್ಮ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸಬಹುದು. ಶಿಕ್ಷಣ, ವ್ಯಾಪಾರ, ವಾಹನ, ಅಥವಾ ಮನೆ ಖರೀದಿಸುವಂತಹ ವಿವಿಧ ಅಗತ್ಯಗಳಿಗಾಗಿ ನಾವೆಲ್ಲರೂ ಬ್ಯಾಂಕುಗಳಿಂದ ಸಾಲ ಪಡೆಯುತ್ತೇವೆ. ಸಾಲವನ್ನು ಪೂರ್ಣವಾಗಿ ತೀರಿಸಿದ ಬಳಿಕ ಕೆಲವು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ದಾಖಲೆಗಳಿಲ್ಲದಿದ್ದರೆ ಭವಿಷ್ಯದಲ್ಲಿ ಆಸ್ತಿ ಹಕ್ಕು, ಕ್ರೆಡಿಟ್ ಸ್ಕೋರ್, ಸಿವಿಲ್ ಸ್ಕೋರ್ ಅಥವಾ ಇತರ ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು; ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಓದಿ ತಿಳಿದುಕೊಳ್ಳಿ.

ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC)

ಸಾಲವನ್ನು ಪೂರ್ಣವಾಗಿ ತೀರಿಸಿದ ಬಳಿಕ ಬ್ಯಾಂಕ್ ನೀಡುವ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಅಂದರೆ NOC ಪ್ರಮಾಣ ಪತ್ರ ಅತ್ಯಂತ ಪ್ರಮುಖವಾದ ದಾಖಲೆ. ಇದು ನೀವು ಬ್ಯಾಂಕಿಗೆ ಯಾವುದೇ ಬಾಕಿ ಬಡ್ಡಿ ಅಥವಾ ಮೂಲ ಹಣವನ್ನು ಬಾಕಿ ಇಲ್ಲದೆ ಸಂಪೂರ್ಣವಾಗಿ ತೀರಿಸಿದ್ದೀವಿ ಎಂಬುದರ ಔಪಚಾರಿಕ ದಾಖಲೆ ಇದಾಗಿದೆ. ಭವಿಷ್ಯದಲ್ಲಿ ಆಸ್ತಿ ವಹಿವಾಟು ಅಥವಾ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಈ ದಾಖಲೆಯ ಅಗತ್ಯ ತುಂಬಾ ಇದೆ. ಇದನ್ನು ಮರೆಯದೆ ಸಾಲ ತೀರಿದ ಬಳಿಕ ಬ್ಯಾಂಕ್ ಗೆ ಭೇಟಿ ನೀಡಿ ಎನ್ ಓ ಸಿ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುವುದು ಬಹು ಮುಖ್ಯವಾಗಿದೆ.

ಅಂತಿಮ ಪಾವತಿ ಹೇಳಿಕೆ, ಅಂದರೆ (ಫೈನಲ್ ಸೆಟಲ್ಮೆಂಟ್ ಸ್ಟೇಟ್ಮೆಂಟ್).

ಸಾಲದ ಕೊನೆಯ ಪಾವತಿಯ ವಿವರವನ್ನು ಒಳಗೊಂಡಿರುವ ಈ ಹೇಳಿಕೆಯು ನೀವು ಕಟ್ಟಿರುವ ಎಲ್ಲಾ ಇಎಂಐ ಪಾವತಿಗಳು ಹಾಗೂ ಕೊನೆಯ ಬಾಕಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಲದ ಬಗ್ಗೆ ಯಾವುದೇ ವಿವಾದ ಉಂಟಾದಾಗ ಈ ದಾಖಲೆಯು ನಿಮ್ಮ ಪಾವತಿ ಪುರಾವೆಗಾಗಿ ಕಾರ್ಯ ನಿರ್ವಹಿಸುತ್ತದೆ.

 

WhatsApp Group Join Now
Telegram Group Join Now       
ಇದನ್ನು ಓದಿ: ಇಂತಹ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ಹಣ ಹಂಚಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ.

 

ಮೂಲ ದಾಖಲೆಗಳ ಬಿಡುಗಡೆ (ವರ್ಜಿನಲ್ ಡಾಕ್ಯುಮೆಂಟ್ ರಿಲೀಸ್).

ಸಾಲ ತೆಗೆದುಕೊಳ್ಳುವಾಗ ಭದ್ರತೆಗಾಗಿ ನೀವು ನೀಡಿದ ಮೂಲ ದಾಖಲೆಗಳು, ಅಂದರೆ, ಜಮೀನು ದಾಖಲೆಗಳು, ಮನೆ ದಸ್ತಾವೇಜುಗಳು, ವಾಹನ ಆರ್ ಸಿ ಬುಕ್ ಇತ್ಯಾದಿ, ನೀವು ಸಾಲ ಮುಕ್ತಾಯದ ಬಳಿಕ ಬ್ಯಾಂಕ್ ನಿಂದ ಹಿಂಪಡೆಯುವುದನ್ನು ಮರೆಯದಿರಿ. ಯಾಕೆಂದರೆ ಇದು ಮುಖ್ಯವಾಗಿದೆ. ಇವುಗಳು ಇಲ್ಲದೆ ಭವಿಷ್ಯದಲ್ಲಿ ಆಸ್ತಿ ವೈವಾಟುಗಳಲ್ಲಿ ತೊಂದರೆಗಳು ಉಂಟಾಗಬಹುದು.

WhatsApp Group Join Now
Telegram Group Join Now       

ಕ್ರೆಡಿಟ್ ಬ್ಯೂರೋ ನವೀಕರಣ.

ಬ್ಯಾಂಕಿನ ಸಾಲದ ಮುಕ್ತಾಯದ ಬಳಿಕ ನಿಮ್ಮ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಿದೆಯಾ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಿ. ಕೆಲವು ಬ್ಯಾಂಕುಗಳು ಸ್ವಯಂ ಚಾಲಿತವಾಗಿ ಇದನ್ನು ನವೀಕರಿಸುತ್ತವೆ; ನೀವು ನೇರವಾಗಿ ಸಿಬಿಲ್ ಅಥವಾ ಇತರ ಕ್ರೆಡಿಟ್ ಬ್ಯೂರೋಗಳಿಗೆ ಪರಿಶೀಲಿಸಬೇಕು.

 

ಇದನ್ನು ಓದಿ: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ, ‘ಗುಡ್ ನ್ಯೂಸ್ ಮೆಚುರಿಟಿಯ’ ಹಣ ಪಡೆಯಲು ಸರ್ಕಾರದಿಂದ ಸೂಚನೆ.

 

ಗ್ರಾಹಕರ ಗಮನಕ್ಕೆ:

• ಸಾಲ ಮುಕ್ತಾಯದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಭದ್ರವಾಗಿ ಇಡಿ.

• ದಾಖಲೆಗಳನ್ನು ಪಡೆಯುವಾಗ ಬ್ಯಾಂಕ್ ಅಧಿಕಾರಿಯ ಸಹಿ ಹಾಗೂ ಸೀಲ್ ಅನ್ನು ಖಚಿತಪಡಿಸಿಕೊಳ್ಳಿ.

• ಬ್ಯಾಂಕ್ ಸಾಲ ಮುಕ್ತಾಯದ ಶುಲ್ಕ ಅಥವಾ ಇತರ ಶುಲ್ಕಗಳ ಬಗ್ಗೆ ಮುಂಚಿತವಾಗಿ ವಿವರವನ್ನು ತಿಳಿದುಕೊಳ್ಳಿ.

ಸಾಲ ಮುಕ್ತಾಯದ ವೇಳೆಯಲ್ಲಿ ಈ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡರೆ ಭವಿಷ್ಯದ ಆರ್ಥಿಕ ವೈವಾಟುಗಳಲ್ಲಿ ಯಾವುದೇ ತೊಂದರೆಗಳನ್ನು ನೀವು ಎದುರಿಸುವಂತಿಲ್ಲ. ಬ್ಯಾಂಕ್ ಅಧಿಕಾರಿಗಳೊಂದಿಗೆ ಸರಿಯಾದ ಸಂವಹನ ನಡೆಸಿ ಹಾಗೂ ಎಲ್ಲಾ ಫಾರ್ಮಲಿಟಿಗಳನ್ನು ಪೂರ್ಣಗೊಳಿಸುವುದು ಬಹುಮುಖ್ಯವಾಗಿದೆ.

ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment