ಕೃಷಿ ಡಿಪ್ಲೋಮಾ ಕೋರ್ಸ್ 2025 ರೈತರ ಮಕ್ಕಳಿಗೆ 50% ಮೀಸಲಾತಿ, ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕೃಷಿ ಕ್ಷೇತ್ರದಲ್ಲಿ ವೃತ್ತಿಪರ ತರಬೇತಿ ಪಡೆದುಕೊಳ್ಳಲು ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿದ್ಯಾಯ ಶಿವಮೊಗ್ಗ ಇವರಿಂದ ಎರಡು ವರ್ಷದ ಡಿಪ್ಲೋಮಾ ಇನ್ ಅಗ್ರಿಕಲ್ಚರ್ ಕೋರ್ಸ್ ಗೆ ಅರ್ಜಿ ಆಹ್ವಾನವನ್ನು ಹೊರಡಿಸಲಾಗಿದೆ. ಪ್ರವೇಶ ಪ್ರಕ್ರಿಯೆ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮುಖ್ಯ ದಿನಾಂಕಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ; ಇದನ್ನು ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ವಿಷಯಕ್ಕೆ ಸಂಬಂಧಪಟ್ಟ ಪ್ರಮುಖ ಮಾಹಿತಿಗಳು.
• ಈ ಕೋರ್ಸ್ ನ ಹೆಸರು ಡಿಪ್ಲೋಮಾ ಇನ್ ಅಗ್ರಿಕಲ್ಚರ್. ಎರಡು ವರ್ಷದ ಅವಧಿ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 27, 2025.
• ವಿದ್ಯಾಲಯಗಳು ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ.
ಅರ್ಜಿಯ ಶುಲ್ಕವೆಷ್ಟು?
• ಸಾಮಾನ್ಯ ವರ್ಗದವರಿಗೆ 500 ರೂಪಾಯಿಗಳು.
• ಎಸ್ ಸಿ, ಎಸ್ ಟಿ, ಓ ಬಿ ಸಿ ವರ್ಗದವರಿಗೆ 250 ರೂಪಾಯಿಗಳು.
ಇದನ್ನು ಓದಿ: UPI ಬಳಕೆದಾರರಿಗೆ ಗುಡ್ ನ್ಯೂಸ್: ಇವತ್ತಿನಿಂದ ಟೆಕ್ನಿಕಲ್ ಸಮಸ್ಯೆ ಇಲ್ಲದೇನೆ, ಇನ್ನಷ್ಟು ವೇಗವಾಗಲಿದೆ
ಯಾರೆಲ್ಲಾ ಪ್ರವೇಶಕ್ಕೆ ಅರ್ಹತೆ ಹೊಂದಿರುತ್ತಾರೆ?
• 10ನೇ ತರಗತಿ ಉತ್ತೀರ್ಣ ಆದವರು ಅರ್ಹತೆಯನ್ನು ಹೊಂದಿರುತ್ತಾರೆ.
• ಕನಿಷ್ಠ ಎಷ್ಟು ಅಂಕಗಳನ್ನು ಪಡೆದುಕೊಂಡಿರಬೇಕು ಅಂದರೆ ಸಾಮಾನ್ಯ ವರ್ಗದವರು 45% ಅಂಕವನ್ನು ಹೊಂದಿರಬೇಕು ಹಾಗೂ ಎಸ್ ಸಿ, ಎಸ್ ಟಿ, ಓ ಬಿ ಸಿ, ಈ ವರ್ಗದವರು 40% ಅಂಕಗಳನ್ನು ಹೊಂದಿರಬೇಕು.
• ಕನ್ನಡವನ್ನು ಭಾಷೆಯಾಗಿ ಅಧ್ಯಯನ ಮಾಡಿರಲೇಬೇಕು.
ವಯಸ್ಸಿನ ಮಿತಿ ಎಷ್ಟಿರಬೇಕು?
ಅರ್ಜಿದಾರರ ವಯಸ್ಸು 19 ವರ್ಷಕ್ಕಿಂತ ಕಡಿಮೆ ಇರಬೇಕು, 06-06-2025 ಈ ದಿನಾಂಕಕ್ಕೆ.
ಮೀಸಲಾತಿಗಳೇನು?
50% ಸೀಟುಗಳು ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಾಗಿಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಇದರ ಸಂಪೂರ್ಣ ವಿಧಾನ ಇಲ್ಲಿದೆ.
ಅಜ್ಜಿಯನ್ನು ಡೌನ್ಲೋಡ್ ಮಾಡಿ
• ಅಧಿಕೃತ ವೆಬ್ಸೈಟ್ www.uahs.edu.in ಗೆ ಭೇಟಿ ನೀಡಿ.
• ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕ ಡೌನ್ಲೋಡ್ ಮಾಡಿ.
• ದೀಡಿ ಅಂದರೆ ಡಿಮ್ಯಾಂಡ್ ಡ್ರಾಪ್ ತಯಾರಿಸಿ.
• ಫುಲ್ಕಾ ಪಾವತಿಸಿ Comptroller, KSNUAHS, SHIVAMOGGA-577412 ಎಂದು ಬೀಡಿ ಮಾಡಿ.
ಅರ್ಜಿ ಸಲ್ಲಿಸಿ: ಭರ್ತಿ ಮಾಡಿದ ಅರ್ಜಿ ಡಿಡಿ ಅಗತ್ಯ ದಾಖಲೆಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ: ಕುಲಸಚಿವರು ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ 577412.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 27 2025 ಸಂಜೆ ನಾಲ್ಕು ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು.
ಬೇಕಾಗುವ ಅಗತ್ಯ ದಾಖಲೆಗಳು ಯಾವವು?
• ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಜೆರಾಕ್ಸ್.
• ಆಧಾರ್ ಕಾರ್ಡ್
• ರೈತರ ಮಕ್ಕಳಿಗೆ ವ್ಯವಸಾಯ ಪ್ರಮಾಣ ಪತ್ರ.
• ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಎಸ್ ಸಿ, ಎಸ್ ಟಿ, ಒ ಬಿ ಸಿ ಅರ್ಜಿದಾರರಿಗೆ.
ಆಯ್ಕೆಯ ಪ್ರಕ್ರಿಯೆ ನಡೆಯುವುದು ಹೇಗೆ?
• ಮೆರಿಟ್ ಆಧಾರದ ಮೇಲೆ, ಅಂದರೆ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ, ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
• ಜುಲೈ 4 2025 ರಂದು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ದಿನಾಂಕಗಳು ಹಾಗೂ ನಿಯಮಗಳು ಬದಲಾವಣೆ ಆಗಬಹುದು ನವೀಕರಿಸಿದ ಮಾಹಿತಿಗಾಗಿ UAHSS ವೆಬ್ ವೆಬ್‌ಸೈಟಿಗೆ ಭೇಟಿ ನೀಡಿ.
ಸಹಾಯಕ್ಕಾಗಿ: UAHSS ಹೆಲ್ಪ್ ಲೈನ್ ನಂಬರ್-08182-225241
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.