Kohli warns CSK player ahead of Dhoni!
ಧೋನಿ ಮುಂದೆಯೇ CSK ತಂಡದ ಆಟಗಾರನಿಗೆ ಕೊಹ್ಲಿ ವಾರ್ನಿಂಗ್!
RCB vs CSK: ವಿರಾಟ್ ಕೊಹ್ಲಿ ಆರ್ಭಟಕ್ಕೆ ಸಿಕ್ಕಿ ಕೊಂಡ ಅದೆಷ್ಟೋ ಪ್ಲೇಯರ್ಸ ಸೈಲೆಂಟ್ ಆಗಿದ್ದಾರೆ. ಸಿಎಸ್‌ಕೆ ಬೌಲರ್ ಖಲೀಲ್ ಅಹ್ಮದ್ ಕೊಹ್ಲಿಯನ್ನು ಕೆಣಕಿರುವ ಪರಿಣಾಮ, ಕೊಹ್ಲಿ ಪಂದ್ಯ ಗೆದ್ದ ನಂತರ ಖಡಕ್ ವಾರ್ನಿಂಗ್ ಮಾಡಿದರು.
ಕ್ರಿಕೆಟ್ ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಾರು, ಅನ್ನೊ ಮಾತು ಎಲ್ಲರಿಗೂ ತಿಳಿದಿರುವ ವಿಷಯ. ವಿರಾಟ್ ಕೊಹ್ಲಿ ಆರ್ಭಟಕ್ಕೆ ಸಿಲುಕಿ ಅದೆಷ್ಟೋ ಆಟಗಾರರು ಸೈಲೆಂಟ್ ಆಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಕೊಹ್ಲಿಯ ಯ ಆರ್ಭಟ ಏನೆಂದು ತಂದವರು ಕೊಹ್ಲನ ಕೆಣಕೋದಿಲ್ಲ.
ಯಾಕಂದ್ರೆ ಕೊಹ್ಲಿನ ಕೆಣಕಿದವರ ಹಣೆ ಬರಹ ಏನಾಗಿದೆ ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆ CSK ಬೌಲರ್ ತಿಳಿದು, ಗೊತ್ತಿದ್ದು ಕೊಹ್ಲಿಯವರನ್ನು ಕೆಣಕಿದ್ದಾರೆ. ಕೊಹ್ಲಿ ಸುಮ್ನೆ ಬಿಡ್ತಾರಾ. ಯಾರಾದ್ರೆ ನನಗೆನು ಎಲ್ಲಿದ್ರೆ ಏನು ಸರಿಯಾಗಿ ವಾಪಸ್ ಕೊಡೊದು ಪಕ್ಕ.
ಹೌದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಖಲೀಲ್ ಅಹ್ಮದ್ ಗುರಾಯಿಸಿ ಕೆಣಕುತಿದ್ದರು. ಎಲ್‌ಬಿಡಬ್ಲೂ ಆಯ್ತು ಅಂತ ಸೆಲೆಬ್ರೇಷನ್ ಕೂಡ ಮಾಡಿದ್ರು. ಔಟ್ ಇಲ್ಲ ಅಂತ ಗೊತಿದ್ದರು ಡಿಆರ್‌ಎಸ್ ತೆಗೆದುಕೊಳ್ಳಬೇಕು ಎಂದು ಖಲೀಲ್ ಒತ್ತಡ ಮಾಡಿದರು. ಆದ್ರೆ ಬಾಲ್ ಲೆಗ್ ಹೊರಗೆ ಬಿದ್ದಿತ್ತು.
ಅದಷ್ಟೇ ಅಲ್ಲದೆ, ಫೀಲ್ ಸಾಲ್ಟ್ ಅವರನ್ನು ಕೂಡ ಮೊದಲನೇ ಓವರ್ ಓವರ್‌ನಲ್ಲಿ ಬೌಲ್ ಮಾಡುವಾಗ ಕೆಣಕಲು ಪ್ರಯತ್ನಿ ಮಾಡುತ್ತಿದ್ದರು. ಕೊಹ್ಲಿ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿಕೊಂಡೇ ಬಂದ್ರು. ಪಂದ್ಯ ಗೆದ್ದಾದ ಮೇಲೆ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಹೌದು, ಪಂದ್ಯ ಮುಗಿದ ನಂತರ ಖಲೀಲ್ ಅಹ್ಮದ್ ವಿರಾಟ್ ಕೊಹ್ಲಿಗೆ ಶೇಕ್‌ಹ್ಯಾಂಡ್ ಮಾಡೋಕೆ ಬಂದಿದ್ದಾರೆ. ಹಾಗ ಕೊಹ್ಲಿ ಅಷ್ಟೋತ್ತಿಗಾಗಲೇ ಗರಂ ಆಗಿದ್ದರು. ಗೆದ್ದ ಮೇಲೆ ಕೊಹ್ಲಿ ಕೋಪ ಡಬಲ್ ಆಗಿರುತ್ತೆ ಅಂತ ಎಲ್ರಿಗೂ ಗೊತ್ತಿದೆ ವಿಷಯ. ಸ್ಮೈಲ್ ಮಾಡುತ್ತ ಶೇಕ್ ಹ್ಯಾಂಡ್ ಮಾಡೋಕೆ ಬಂದ ಖಲೀಲ್‌ಗೆ ಕೈ ಹಿಡಿದ ಕೊಹ್ಲಿ ನೀನು ಮಾಡಿದ್ದು ಸರಿ ಇರ್ಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ನಗುತ್ತಲೇ ಉತ್ತರ ಕೊಡುತ್ತಿದ್ದ ಖಲೀಲ್ ಅಹ್ಮದ್‌ರನ್ನು ಲೈಟ್ ಆಗಿ ತಳ್ಳಿ ವಿರಾಟ್ ಕೊಹ್ಲಿ ಮುಂದೆ ನಡೆದು ಬಂದಿದರು. ಇದನ್ನೆಲ್ಲಾ ಧೋನಿ ಕೊಹ್ಲಿ ಹಿಂದೆ ನಿಂತು ನೋಡುತ್ತಿದ್ದರು. ಧೋನಿ ಕೂಡ ಸುಮ್ಮನಾಗಿದ್ದಾರೆ. ಆದ್ರೆ ಇದನ್ನು ಕಂಡ ಅಭಿಮಾನಿಗಳು ಮಾತ್ರ ಕೊಹ್ಲಿ ಮಾಡಿದ್ದು ಸರಿ ಇದೆ ಎಂದಿದ್ದಾರೆ. ಸುಮ್ನೆ ಯಾಕೆ ಅವರನ್ನು ಕೆಣಕಬೇಕಿತ್ತು, ಇಂಥ ಪರಿಸ್ಥಿತಿ ಬರ್ತಿತ್ತಾ ಅಂತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ತಂಡ ಖಲೀಲ್ ಅವರನ್ನು 4.8 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಮುಂಬೈ ಇಂಡಿಯನ್ಸ್ ಎಂಐ ವಿರುದ್ಧದ ಮೊದಲನೆಯ ಪಂದ್ಯದಲ್ಲಿ, ಎಡಗೈ ಸೀಮರ್ ನಾಲ್ಕು ಓವರ್‌ಗಳಲ್ಲಿ 3/29 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು.
ಖಲೀಲ್ ಎಂಐ ವಿರುದ್ಧ ಎರಡು ವಿಕೆಟ್ ಪಡೆದರು, ಆದರೆ ಆರ್‌ಸಿಬಿ ವಿರುದ್ಧದ ಪವರ್‌ಪ್ಲೇನಲ್ಲಿ ಎರಡು ಓವರ್ ಬಾಲಿಂಗ್ ಮಾಡಿದರು, ಆದರೆ ಒಂದು ವಿಕೆಟ್ ಕೂಡ ತೆಗೆಯಲು ಸಾಧ್ಯವಾಗಲಿಲ್ಲ. ಒಟ್ಟಾರೆ, ಕೊಹ್ಲಿನ ಕೆಣಕಿದ್ರೆ ಏನಾಗುತ್ತೆ ಅಂತ ಮತ್ತೊಮ್ಮೆ ಖಚಿತಪಡಿಸಿದರು.