The young man who won three crores in Dream11.
ಡ್ರೀಮ್ 11ನಲ್ಲಿ ಮೂರು ಕೋಟಿ ಗೆದ್ದ ಯುವಕ.
ಇವತ್ತಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಫ್ಯಾಂಟಸಿ ಗೇಮ್ ಅಪ್ಲಿಕೇಶನ್ಗಳು ಗಳು ಭಾರತದಲ್ಲಿ ಯುವಕರ ದಿನಾಚರಣೆಯಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಬೆಳೆದಿವೆ.
ಕ್ರಿಕೆಟ್, ಕಬ್ಬಡ್ಡಿ, ಫುಟ್ಬಾಲ್ ಇನ್ನು ಮುಂತಾದ ಕ್ರೀಡೆಗಳ ಆಧಾರವಾಗಿ ನಡೆದ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ತಾವು ಇಷ್ಟ ಪಡುವ ಆಟಗಾರರನ್ನು ತಾವೇ ಆಯ್ಕೆ ಮಾಡಿ ತಮ್ಮದೇ ಆದ ಒಂದು ತಂಡವನ್ನು ರಚಿಸಿ ಆಡುವ ಜನರು ಲಕ್ಷಾಂತರ, ಕೋಟ್ಯಾಂತರ ಜನರನ್ನು ಆಕರ್ಷಿಸುತ್ತಿವೆ ಆದರೆ ಇದರ ಹಿಂದಿನ ವಿಷಯದ ಚಿತ್ರವು ಅಷ್ಟು ಸುಲಭದ ಮಾತಲ್ಲ ಕನಿಷ್ಠ ಏನಿಲ್ಲ ಅಂದರು ಹಣವನ್ನು ಹೂಡಿಕೆ ಮಾಡುತ್ತಾರೆ ಮತ್ತು ಇದರಿಂದ ಲಾಭ ಪಡೆಯುವುದು ಕೇವಲ ಒಬ್ಬ ಅಥವಾ ಇಬ್ಬರು, ಹೌದು ಸ್ನೇಹಿತರೆ, ಅದೃಷ್ಟವಶಾತ ಮಾತ್ರ ಅದರಿಂದ ಲಾಭ ದೊರೆಯುತ್ತಾರೆ, ಇಂತಹ ಭವ್ಯ ಅದೃಷ್ಟದ ಹೆಸರಿನಲ್ಲಿ ಇತ್ತೀಚಿಗೆ ಸುದ್ದಿ ಆಗಿರುವ ವ್ಯಕ್ತಿ ಜಾರ್ಖಂಡ್ ನಲ್ಲಿ ಪಲ್ಲಮು ಜಿಲ್ಲೆಯ ರವಿ ಕುಮಾರ್ ಎಂಬುವರು ಹೌದು ಇದು ನಿಜ ಜಾರ್ಕಂಡ್ ನ ಜಿಲ್ಲೆಯಿಂದ ಬಂದಿರುವ ಮಹೇಂದ್ರಮೇಧ ಅವರ ಮಗ ರವಿ ಕುಮಾರ್ ಎಂಬಾತನ ಕಥೆ ಇವಾಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರವಿಕುಮಾರ್ ಅವರು ಡ್ರೀಮ್ 11 ಫ್ಯಾಂಟಸಿ ಗೇಮ್ ಆಪ್ನಲ್ಲಿ ಒಂದೇ ರಾತ್ರಿ 3 ಕೋಟಿ ಹಣ ಗಳಿಕೆ.
ಸಾಮಾನ್ಯ ಕುಟುಂಬದ ಯುವಕ ಅಸಾಧಾರಣ ಜಯಗಳಿಸಿದ ರವಿಕುಮಾರ್.
ಪಲಮು ಜಿಲ್ಲೆಯ ಶಿಯಾಂಗಿ ರೈಲ್ವೆ ನಿಲ್ದಾಣದ ಬಳಿ ತೇಲಿಯ ಬಂದ್ ಗ್ರಾಮದಲ್ಲಿ ಒಂದು ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡುತಿರುವ ಕುಟುಂಬದಿಂದ ಬಂದ ಈ ರವಿಕುಮಾರ್ ಕ್ರಿಕೆಟ್ ಆಪ್ ಡ್ರಿಮ್ 11 ನಲ್ಲಿ ಮೂರು ಕೋಟಿ ರೂಪಾಯಿ ಬಹುಮಾನ ಗೆದ್ದು ರಾಷ್ಟ್ರದಲ್ಲಿ ಗಮನ ಸೆಳೆದಿದ್ದಾರೆ. ಏಪ್ರಿಲ್ ಒಂಬತ್ತರಂದು ನಡೆದ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಇವೆರಡರ ನಡುವಿನ ಐಪಿಎಲ್ ಪಂದ್ಯದಲ್ಲಿ ಕೇವಲ 49 ರೂಪಾಯಿ ಹೂಡಿಕೆ ಮಾಡಿ ಬಳಸಿಕೊಂಡು ತಂಡ ಒಂದನ್ನು ತಾವೇ ರಚಿಸಿದ ರವಿಯವರು ಈಗ ಕೋಟ್ಯಾಧಿಪತಿಯಾಗಿ ರಾಷ್ಟ್ರದಲ್ಲಿ ಗ್ರಾಸವಾಗಿದ್ದಾರೆ. ಈ ತಂಡವು ಅದೇ ದಿನದ ಟಾಪ್ ರಾಂಕ್ ಪಡೆಯುವ ಮೂಲಕ ರವಿಯವರ ಖಾತೆಗೆ ಮೂರು ಕೋಟಿ ರೂಪಾಯಿ ಜಮಾ ಆಗಿದೆ.
ತಂತ್ರಜ್ಞಾನಪುರಿತ ಆಯ್ಕೆ: ನಾಯಕ ಮತ್ತು ಉಪನಾಯಕನ ಆಯ್ಕೆ ಮುಖ್ಯ ಪಾತ್ರ ವಹಿಸುತ್ತದೆ.
ರವಿಯವರು ತಮ್ಮ ತಂಡದಲ್ಲಿ ಸಾಯಿ ಸುದರ್ಶನ್ ರವರನ್ನು ನಾಯಕನಾಗಿ ಆಯ್ಕೆ ಮಾಡಿದರು ಮತ್ತು ರಶೀದ್ ಖಾನ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿದರು. ಈ ತಂತ್ರಜ್ಞಾನಪುರಿತ ಆಯ್ಕೆ ಮತ್ತು ಆಟಗಾರರ ಒಳ್ಳೆಯ ಪ್ರದರ್ಶನವೇ ಅವರಿಗೆ ಈ ಜಯವನ್ನು ತಂದುಕೊಟ್ಟಿದೆ.
5 ಲಕ್ಷ ನಷ್ಟದ ಹಳೆಯ ಯಶೋಗಾಥೆ:
ಈ ರವಿ 2018ರಿಂದ ಡ್ರೀಮ್ 11ನಲ್ಲಿ ಆಟವಾಡುತ್ತಿದ್ದರು; ಅವರಿಗೆ ಹಣ ಬಂದಿರಲಿಲ್ಲ, ಎರಡು ಐಡಿಗಳ ಮೂಲಕ ಆಡುತ್ತಿದ್ದ ಆಟ ರವಿಯವರಿಗೆ ಇದುವರೆಗೆ ಸುಮಾರು ಐದು ಲಕ್ಷ ರೂಪಾಯಿ ನಷ್ಟವಾಗಿದೆಯಂತೆ, ಅವರು ತಮ್ಮ ಅಂಗಡಿಗೆ ಬೇಕಾದ ಸಾಮಾನುಗಳನ್ನು ತರಲು ಮನೆಯವರು ಕೊಡುವ ಹಣದಿಂದ ಅರ್ಧದಷ್ಟು ಹಣವನ್ನು ಆಟಕ್ಕೆ ಬಳಸುತ್ತಿದ್ದರು ಎಂಬ ವಿಷಯವನ್ನು ಅವರು ಮನೆಯವರಿಗೆ ತಿಳಿದಿರಲಿಲ್ಲವಂತೆ.
ಈ ಗೆಲುವಿನ ನಂತರ ಕುಟುಂಬದ ಭಾಗ್ಯ ಭವಿಷ್ಯ ಬದಲಾವಣೆ.
ಈ ಸಾರಿ ಕೋಟಿಗೆದ್ದ ನಂತರ, ರವಿ ತಮ್ಮ ತಾಯಿ ಖಾತೆಗೆ ಹಣವನ್ನು ವರ್ಗಾಯಿಸಿ, ಮನೆಯ ಕಟ್ಟಡದ ಕೆಲಸಕ್ಕೆ ಹಣ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆ ಉಳಿದ ಹಣವನ್ನು ಮುಂದಿನ ಭವಿಷ್ಯಕ್ಕಾಗಿ ಮತ್ತು ಸಾಲ ಕಟ್ಟುವುದಕ್ಕಾಗಿ ಹಾಗೂ ಅಗತ್ಯಗಳಿಗೆ ಬಳಸುವುದಕ್ಕಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಪ್ಯಾಂಟಸಿ ಗೇಮ್ ಡ್ರೀಮ್ 11 ಕನಸು ಕಾಣಿದರೆ ದೋಷ.
ಈ ಡ್ರೀಮ್ 11, ಒಂದು ಜನಪ್ರಿಯ ಫ್ಯಾಂಟಸಿ ಆಟವಾಗಿದೆ, ಇದರಲ್ಲಿ ದಿನಕ್ಕೆ ಮೂರು ಮಂದಿ ಕೋಟ್ಯಾಧಿಪತಿಗಳಾಗುತ್ತಾರೆ, ಆಮಿಷವನ್ನು ಒಡ್ಡುತ್ತಾರೆ. ಆದ್ರೆ ಈ ಡ್ರೀಮ್ ಇಲೆವೆನ್ ಅಥವಾ ಇದೇ ತರ ಫ್ಯಾಂಟಮಾಡುತ್ತಾರೆ, ಪ್ಲಾಟ್ಫಾರ್ಮ್ ನಲ್ಲಿ ವಿಜಯದ ಸಾಧ್ಯತೆ ಬಹಳ ಕಡಿಮೆ, ಲಕ್ಷಾಂತರ ಮಂದಿ ಕೇವಲ 49 ಇಲ್ಲ ಅಂದ್ರೆ 59 ರೂಪಾಯಿ entry amount ಕಟ್ಟಿ team ಮಾಡುತ್ತಾರೆ. ತಂಡ ತಮಗೆ ಇಷ್ಟವಿರುವ ಚೆನ್ನಾಗಿ ಆಡುವವರನ್ನು ನೋಡಿ, ತಾವೇ ಒಂದು ತಂಡವನ್ನು ಕಟ್ಟುತ್ತಾರೆ. ಅತಿ ನಿರ್ದಿಷ್ಟ ಹೆಸರು ಆಟಗಾರರ ಪ್ರದರ್ಶನ ಹಾಗೂ ಮಿಚ್ ಮಾಡಿಂಗ್ ನಲ್ಲಿ ಮಾತ್ರ ಮೊದಲ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ.
ಸ್ನೆಹಿತರೆ, ಆರ್ ರವಿಕುಮಾರ್ ಅವರಿಗೆ 3 ಕೋಟಿ ಹಣ ಬಂದಿದೆ ಎಂದು ನೀವು ಕೂಡ ರೊಚ್ಚಿಗೆದ್ದಿದ್ದೀರಾ. ಹಾಗಾದರೆ ಎಚ್ಚರಿಕೆಯಿಂದ ಮುಂದೆ ಜೇಡಿ ಹಾಕಿ.
ಸ್ನೇಹಿತರೆ, ಫ್ಯಾಂಟಸಿ ಗೇಮುಗಳ ಹಿಂದೆ ಬೀಳುವ ಮುಂಚೆ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಇತ್ತೀಚಿನ ದಿನಗಳಲ್ಲಿ ಫ್ಯಾಂಟಸ್ ಗೇಮಿಂಗ್ ಆಪ್ಗಳ ಗಳ ಬಗ್ಗೆ ತಪ್ಪು ಕಲ್ಪನೆ ಬರುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯ. ನಾವು ಇತ್ತೀಚಿಗೆ 50 ರೂಪಾಯಿ ಅಥವಾ ಬೇರೆ ತರದ ಮೊತ್ತವನ್ನು ಹೂಡಿಕೆ ಮಾಡಿ ಕೋಟಿಗೆ ಪಡೆಯಲು ಕನಸು ಕಾಣುತ್ತೇವೆ. ಇದು ಭ್ರಮೆಯಲ್ಲಿ ಆಡುವ ಆಟವಾಗಿದೆ. ಅದೇ ಆಟ ನಿಮ್ಮ ಹಣಕಾಸಿನ ಸ್ಥಿತಿಯನ್ನು ಪಾತಾಳಕ್ಕೆ ತುಳಿಯಬಹುದು. ಈ ರೀತಿಯ ಆಟಗಳು ಆಸೆಗಿಂತ ಹೆಚ್ಚು ಎಚ್ಚರಿಕೆಯನ್ನು ಉಂಟುಮಾಡುತ್ತವೆ. ರವಿಕುಮಾರ್ ಅವರ ವಿಜಯಗಾತಿ ಒಂದೆಡೆ ಆದರೆ ಮತ್ತೊಂದು ಕಡೆ ಎಚ್ಚರಿಕೆಯ ಕಥೆಗಳು ತುಂಬಾ ಇವೆ. ಭವಿಷ್ಯವನ್ನು ಬದಲಾಯಿಸಬಲ್ಲ ತಂತ್ರಜ್ಞಾನವಿರುವ ಈ ಕಾಲದಲ್ಲಿ ವಿವೇಚನೆಯಿಂದ ಮಾಡಿದ ಆಯ್ಕೆಮಾತ್ರ ಗೆಲ್ಲಲು ಸಾಧ್ಯವಾಗಬಹುದು. ಕನಸು ಕಾಣುವುದು ತಪ್ಪಲ್ಲ, ಆದರೆ ಆ ಕನಸು ಕಾಣುವ ಭ್ರಮೆಯಿಂದ ನಿಮ್ಮ ಜೀವನವನ್ನೇ ಹಾಳು ಆಗುವ ಪರಿಸ್ಥಿತಿಗೆ ಕಾರಣವಾಗಬಹುದು.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ Kannadatrending.com ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ.