New disease people beware: This disease is affecting a lot of people. Here is the complete details about this disease.
ಹೊಸ ರೋಗ ಜನರೇ ಹುಷಾರ್: ಈ ರೋಗವು ಬಹಳಷ್ಟು ಜನರ ಮೇಲೆ ಪರಿಣಾಮ ಬೀರುತ್ತಿದೆ. ಈ ರೋಗದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ವರಂಗಣ ಆಹಾರದ ಬಳಕೆ ಹೆಚ್ಚಾಗುತ್ತಿದೆ, ವಿವಿಧ ರೋಗಗಳು ಬೆಳವಣಿಗೆ ಆಗುತ್ತಿವೆ, ವಿಶ್ವದಾದ್ಯಂತ ರಕ್ತದ ಸಕ್ಕರೆ ಪ್ರಮಾಣಗಳು ಹೆಚ್ಚಾಗುತ್ತಿರುವಾಗ ಈಗ ಹೊಸದಾಗಿ ಗುರುತಿಸಲಾದ ಟೈಪ್-5 ಮಧುಮೇಹ ಕೂಡ ಗಮನ ಸೆಳೆಯುತ್ತಿದೆ. ಈ ರೋಗವು ವಿಶೇಷವಾಗಿ ಸಣ್ಣಗಿರುವ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಯುವಕರಲ್ಲಿ ತುಂಬಾ ಕಂಡುಬರುತ್ತಿದೆ.
ಈ ಟೈಪ್ 5 ಮಧುಮೇಹ ಎಂದರೆ ಏನು?
ಟೈಪ್ -5, ಮಧುಮೇಹ ಎಂದರೆ ಅಪೌಷ್ಟಿಕತೆಗೆ ಸಂಬಂಧಿಸಿದ ಮಧುಮೇಹ. ಇದು ಮುಖ್ಯವಾಗಿ ದೇಹದ ತೂಕ ಕಡಿಮೆ ಇರುವವರಿಗೆ ಮತ್ತು ಪೋಷಕಾಂಶದ ಕೊರತೆ ಇರುವ ವ್ಯಕ್ತಿಗಳಿಗೆ ತುಂಬಾ ಜನರಲ್ಲಿ ಕಂಡುಬರುತ್ತದೆ. ಇದನ್ನು ಮೊದಲು 145 ರಲ್ಲಿ ಜಮೈಕಾದಲ್ಲಿ ಗುರುತಿಸಲಾಗಿತ್ತು. ನಂತರ ಪಾಕಿಸ್ತಾನ, ಆಫ್ರಿಕಾ, ಭಾರತ ಮತ್ತು ಇನ್ನೂ ಕೆಲವು ಭಾಗಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಈ ರೋಗ ಬೆಳಕಿಗೆ ಬಂದಿತ್ತು.
ಈ ರೋಗದ ಪ್ರಮುಖ ಗುಣಲಕ್ಷಣಗಳು ಯಾವವು?
• ರೋಗಿಗಳು ತೀವ್ರವಾಗಿ ತೆಳ್ಳಗೆ ಇರುತ್ತಾರೆ.
• ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಸರಿಯಾಗಿ ಆಗಿರುವುದಿಲ್ಲ.
• ರಕ್ತದ ಸಕ್ಕರೆ ಹೆಚ್ಚಿರುತ್ತದೆ, ಆದರೆ ಇನ್ಸುಲಿನ್ ಪ್ರತಿರೋಧ ಇರುವುದಿಲ್ಲ.
• ಚಿಕಿತ್ಸೆ ನೀಡದಿದ್ದರೆ, ರೋಗಿಗಳು ಒಂದು ವರ್ಷದ ಒಳಗಡೆ ಸಾವನ್ನಪ್ಪ ಬಹುದು.
ಮಧುಮೇಹ ಟೈಪ್-5, ಈ ರೋಗ ಬರಲು ಕಾರಣಗಳೇನು?
• ದಾರಿದ್ರೆ ಮತ್ತು ಆರೋಗ್ಯಕರ ಆಹಾರದ ಅಭಾವ.
• ಶಿಶು ಮತ್ತು ಕೌಮಾರದಲ್ಲಿನ ಪೋಷಣೆಯ ಅಭಾವ.
• ಪ್ರೋಟಿನ್ ಮತ್ತು ಅಗತ್ಯ ವಿಟಮಿನ್ಗಳ ಗಳ ಕೊರತೆ.
• ದೀರ್ಘಕಾಲದ ಅಪೌಷ್ಟಿಕತೆ, ಸರಿಯಾದ ಪೋಷಕಾಂಶಗಳ ಕೊರತೆ.
ಈ ರೋಗವನ್ನು ತಡೆಗಟ್ಟುವ ಮಾರ್ಗಗಳು ಏನು?
ಸದ್ಯಕ್ಕೆ ಈಗ ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಕಂಡು ಹಿಡಿದಿಲ್ಲ ಆದರೆ ಕೆಲವು ಮುಖ್ಯ ಹಂತಗಳು ಇಲ್ಲಿವೆ.
1. ಪೋಷಕಾಂಶ ಸಮೃದ್ಧ ಆಹಾರ ಪ್ರೋಟಿನ್, ವಿಟಮಿನ್ಸ್ ಮತ್ತು ಖನಿಜಗಳನ್ನು ಉಪಯೋಗಿಸಬೇಕು.
2. ರೋಗದ ಆರಂಭಿಕ ಗುರುತಿಸುವಿಕೆ ಮತ್ತು ತಡೆಗಟ್ಟುವ ಕ್ರಮಗಳು.
3. ಇನ್ಸುಲಿನ್ ಥೆರಪಿ ಕೆಲವು ಸಂದರ್ಭಗಳಲ್ಲಿ ಮಾತ್ರ.
ಪ್ರಪಂಚದ ಪರಿಸ್ಥಿತಿ.
1. ಇಡೀ ವಿಶ್ವದಾದ್ಯಂತ ಈ ರೋಗದಿಂದ ಎರಡರಿಂದ ಎರಡುವರೆ ಕೋಟಿ ಜನರು ಈ ರೋಗದಿಂದ ತತ್ತರಿಸುತ್ತಿದ್ದಾರೆ.
2. ಏಷಿಯಾ ಮತ್ತು ಆಫ್ರಿಕಾ ಖಂಡ ದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ರೋಗ ಕಂಡುಬರುತ್ತಿದೆ.
3. IDF ಈ ರೋಗವನ್ನು ಗುರುತಿಸಿ ಎರಡು ವರ್ಷದ ಒಳಗಡೆ ಚಿಕಿತ್ಸಾ ಮಾರ್ಗಸೂಚಿಯನ್ನು ತಯಾರಿಸಲು ನಿರ್ಧಾರ ಮಾಡಿದೆ.
ಟೈಪ್-5 ಮಧುಮೇಹವು ತೆಳ್ಳಗಿನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಯುವ ಜನರಿಗೆ ಗಂಭೀರವಾದ ಅಪಾಯವನ್ನು ಉಂಟು ಮಾಡುತ್ತಿದೆ. ಇದಕ್ಕೆ ಸರಿಯಾದ ಪೋಷಣೆ, ಆರೋಗ್ಯಕರ ಜೀವನ ಶೈಲಿ ಮತ್ತು ವೈದ್ಯಕೀಯ ಮೇಲ್ವಿಚಾರಣೆಯಿಂದ ಈ ರೋಗವನ್ನು ತಡೆಗಟ್ಟಬಹುದು.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.