Here is the information from the Central Agricultural Welfare Office regarding the release of the 20th installment of the PM Kisan Yojana.
ಪಿ ಎಮ್ ಕಿಸಾನ್ ಯೋಜನೆ 20ನೇ ಕಂತು ಬಿಡುಗಡೆ ಆಗುವುದರ ಬಗ್ಗೆ ಇಲ್ಲಿದೆ ಮಾಹಿತಿ ಕೇಂದ್ರ ಕೃಷಿ ಕಲ್ಯಾಣ ಕಚೇರಿಯಿಂದ ಮಾಹಿತಿ.
ಪಿ ಎಮ್ ಕಿಸಾನ್ ಯೋಜನೆ ಪ್ರತಿ ವರ್ಷ ರೈತರಿಗೆ ಆರು ಸಾವಿರ ನೇರ ಸಹಾಯಧನ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಭಾರತ ಸರ್ಕಾರದ ಪ್ರಮುಖ ರೈತ ಕಲ್ಯಾಣ ಯೋಜನೆ ಇದಾಗಿದೆ; ಇದರ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ, ಅಂದರೆ, ಮೂರು ಕಂತುಗಳು, ಎರಡು ಸಾವಿರ ರೂಪಾಯಿಗಳಂತೆ, ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಹಣವನ್ನು ಬೀಜ, ಸಾಲ ತೀರಿಸಲು, ಗೊಬ್ಬರ ಮತ್ತು ಇನ್ನಿತರ ಕಾರ್ಯಗಳಿಗೆ ಬಳಸಲು ರೈತರು ಸ್ವತಂತ್ರರಾಗಿರುತ್ತಾರೆ.
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಪ್ರಮುಖ ದಿನಾಂಕಗಳು.
• ಈಗಾಗಲೇ 19ನೇ ಕಂತು ರೈತರ ಖಾತೆಗೆ ಜಮಾ ಮಾಡಲಾಗಿದೆ.
• 20ನೇ ಕಂತು ರೂ. 2000 ರೂಪಾಯಿ, ಜೂನ್ 2025 ರಲ್ಲಿ ಬಿಡುಗಡೆ ಆಗಲಿದೆ.
• 20ನೇ ಕಂತಿನ ಕಡೆಯ ದಿನಾಂಕ ಏಪ್ರಿಲ್ 30, 2025 ಒಳಗಡೆ ekyc ಹಾಗೂ ಕಿಸಾನ್ ಗುರಿತಿನ ಚೀಟಿ ಪೂರ್ಣಗೊಳಿಸಿರಬೇಕು.
20ನೇ ಕಂತು ನಿಮ್ಮ ಖಾತೆಗೆ ಜಮಾ ಮಾಡಲು ಈ ಕೆಲಸಗಳನ್ನು ಇವಾಗಿಂದಲೇ ಮಾಡಿ.
• ಕಿಸಾನ್ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು.
• ಕೃಷಿ ಇಲಾಖೆಯು ರೈತರಿಗೆ ಡಿಜಿಟಲ್ ಗುರುತಿನ ಚೀಟಿ ಕೊಡುತ್ತಿದೆ.
• ಇದರಲ್ಲಿ ರೈತರ ಹೆಸರು, ಭೂಮಿಯ ವಿವರ, ಬೆಳೆಗಳ ಮಾಹಿತಿ, ಆಧಾರ್ ಕಾರ್ಡ್ ಮತ್ತು ಭೂ ದಾಖಲೆಗಳ ಲಿಂಕ್ ಹಾಗೂ ಸರ್ಕಾರಿ ಯೋಜನೆಗಳಿಗೆ ಸುಗಮ ಪ್ರವೇಶವಿದೆ.
ಈ ರೈತರ ಡಿಜಿಟಲ್ ಗುರುತಿನ ಚೀಟಿಯನ್ನು ಹೇಗೆ ಪಡೆಯುವುದು?
• ಸಮೀಪದ ಕೃಷಿ ಕಚೇರಿ, CSC ಕೇಂದ್ರ, ಅಥವಾ ರೆವಿನ್ಯೂ ಇಲಾಖೆಗೆ ಭೇಟಿ ನೀಡಬೇಕು.
• ಆಧಾರ್ ಕಾರ್ಡ್, bhoomi ದಾಖಲೆಗಳು, ಬ್ಯಾಂಕ್ ಖಾತೆ, ವಿವರ ಸಲ್ಲಿಸಬೇಕು.
• ಏಪ್ರಿಲ್ 30, 2025 ರ ಒಳಗಡೆ ಈ ಪ್ರಕ್ರಿಯೆ ಪೂರ್ಣಗೊಳಿಸಿ.
ekyc ಪೂರ್ಣಗೊಳಿಸುವುದು.
Pm ಕಿಸಾನ್ ಹಣವನ್ನು ಪಡೆಯಲು ekyc ಕಡ್ಡಾಯವಾಗಿದೆ, ಅಂದರೆ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದು.
ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ekyc ಮಾಡುವ ವಿಧಾನ.
• ಪಿಎಂ ಕಿಷನ್ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಮಾಡಬೇಕು. eKYC ಆಪ್ಷನ್ಸ್ ಮೇಲೆ ಕ್ಲಿಕ್ ಮಾಡಬೇಕು.
• ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಬೇಕು.
• ಓಟಿಪಿ ಪಡೆದು ಬಯೋಮೆಟ್ರಿಕ್ ದ್ವಾರ ದೃಢೀಕರಿಸಬೇಕು.
• Submit ಮೇಲೆ ಕ್ಲಿಕ್ ಮಾಡಬೇಕು.
ಸೂಚನೆ:
ಇ-ಕೆವೈಸಿ ಮಾಡಲು ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದು ತುಂಬಾ ಅಗತ್ಯವಾಗಿದೆ.
CSC ಕೇಂದ್ರದಲ್ಲೂ ಕೂಡ ಇ-ಕೆವೈಸಿ ಮಾಡಿಸಬಹುದು.
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಸ್ಥಿತಿಯನ್ನು ಪರಿಚಯಿಸುವುದು ಹೇಗೆ?
• Pmkisan.gov.in ಗೆ ಓಪನ್ ಮಾಡಿ.
• Beneficiary ಸ್ಟೇಟಸ್ ಅನ್ನು ಕ್ಲಿಕ್ ಮಾಡಿ.
• ಆಧಾರ್ ಕಾರ್ಡ್ ನಂಬರ್, ಖಾತೆ ನಂಬರ್ ಹಾಗೂ ಮೊಬೈಲ್ ನಂಬರ್ ಅನ್ನು enter ಮಾಡಿ.
• ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ, ಆಗ ನಿಮ್ಮ ಪಾವತಿ ಸ್ಥಿತಿ ಓಪನ್ ಆಗುತ್ತದೆ.
ಪಿ ಎಮ್ ಕಿಸಾನ್ ಯೋಜನೆ ಪಡೆಯುವ ಅರ್ಹತೆ ಯಾರಿಗಿದೆ?
1. ಸ್ವಂತ ಮನೆ ಉಳ್ಳ ರೈತರು 5 ಎಕರೆ ಒಳಗಡೆ ಇರುವವರು ಪಡೆಯಬಹುದು.
2. SC, ST, ಸಣ್ಣ ರೈತರು, ಬಂಜಾರ್ ಭೂಮಿ, ಹೊಂದಿದವರು ಈ ಯೋಜನೆಯನ್ನು ಪಡೆಯಬಹುದು.
3. ಆಧಾರ್ ತೆರಿಗೆ ದಾಖಲೆ ಇಲ್ಲದವರು ಈ ಯೋಜನೆ ಪಡೆಯಬಹುದು.
ಯಾರು ಈ ಯೋಜನೆಯನ್ನು ಪಡೆಯಲು ಅನರ್ಹ?
• ನಗರ ಪ್ರದೇಶದಲ್ಲಿ ಐದು ಎಕ್ಟರಿಗಿಂತ ಹೆಚ್ಚು ಭೂಮಿ ಉಳ್ಳವರು ಈ ಯೋಜನೆಯನ್ನು ಪಡೆಯಲು ಆಗುವದಿಲ್ಲ.
• ಪ್ರೊಫೆಷನಲ್ ಡಾಕ್ಟರ ಇಂಜಿನಿಯರ್ ಹಾಗೂ ಸರ್ಕಾರಿ ನೌಕರರು ಈ ಯೋಜನೆಯನ್ನು ಪಡೆಯಲು ಅರ್ಹರು.
ನಿಮ್ಮಲ್ಲಿ ಕಾಡು ಪ್ರಶ್ನೆಗೆ ನಮ್ಮ ಉತ್ತರ.
ಪ್ರಶ್ನೆ 1: ಹೊಸ ರೈತರು ಹೇಗೆ ಈ ಕಿಸಾನ್ ಯೋಜನೆಯನ್ನು ಪಡೆಯಲು ನೋಂದಾಯಿಸಬಹುದು?
ಉತ್ತರ: ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ.
ಪ್ರಶ್ನೆ 2: ನನ್ನ PM ಕಿಸಾನ್ ಹಣ ಏಕೆ ತಡವಾಗಿದೆ?
ಉತ್ತರ: [KYC] ಆಗದೇ ಇರುವುದು,[ bank account] ವಿವರ ತಪ್ಪಾಗಿರಬಹುದು, ಅಥವಾ ಭೂ ದಾಖಲೆಗಳನ್ನೂ ಪರಿಶೀಲನೆ ಮಾಡುತಿರಬಹುದು.
ಪ್ರಶ್ನೆ 3: ಪಿ ಎಮ್ ಕಿಸಾನ್ ಹೆಲ್ಪ್‌ಲೈನ್ ಲೈನ್ ಸಂಖ್ಯೆ ಯಾವುದು?
ಉತ್ತರ: 011-24300606/155261.
ರೈತರಿಗೆ ಕೊಡುವ ಸಲಹೆ ಮತ್ತು ಸುಚನೆಗಳು.
ದಿನಾಂಕ ಏಪ್ರಿಲ್ 30 ರ ಒಳಗಡೆ ಕೆ ವೈ ಸಿ ಮತ್ತು ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು.
20ನೇ ಕಂತು ತಪ್ಪಿಸಿಕೊಳ್ಳಬೇಡಿ. ಈಗಲೇ CSC ಕೇಂದ್ರ ಅಥವಾ ಪಿಎಂ ಕಿಸಾನ್ ವೆಬ್ಸೈಟ್ ಮೂಲಕ KYC ಮಾಡಿ.
ಹೆಚ್ಚಿನ ಮಾಹಿತಿಗೆ ನಿಮ್ಮ ಸ್ಥಳೀಯ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ.
ರೈತರ ಗಮನಕ್ಕೆ: ನೋಡಿ ಈ ಮಾಹಿತಿ ಸರ್ಕಾರಿ ಅಧಿಸೂಚನೆಯನ್ನು ಆದರಿಸಿದೆ. ಯಾವುದೇ ಬದಲಾವಣೆಗಳಿಗೆ pmkisan.gov.in ನಲ್ಲಿ ಪರಿಶೀಲಿಸಿನೆ ಮಾಡಿ ತಿಳಿದುಕೊಳ್ಳಿ.
ಸ್ನೇಹಿತರೆ, ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ.