ಮೃತ ವ್ಯಕ್ತಿಯ ಅಂತಿಮ ದರ್ಶನ ಪಡೆದ ಮಂಗ,

ಮೃತ ವ್ಯಕ್ತಿಯ ಅಂತಿಮ ದರ್ಶನ ಪಡೆದ ಮಂಗ, ಸುಮಾರು ಒಂದು ಗಂಟೆಯವರೆಗೆ ಕುಳಿತ ಮಂಗ ಆ ಮಂಗನ ವರ್ತನೆ ಕಂಡು ಆ ಹಳ್ಳಿಯ ಜನರು ಆಶ್ಚರ್ಯಕ್ಕೆ ಒಳಗಾದರೂ.

ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆತನ ಶವದ ಬಳಿ ಬಂದು ಮಂಗ ಒಂದು ಗಂಟೆಯವರೆಗೆ ಅಲ್ಲೇ ಕುಳಿತು ಎಲ್ಲರನ್ನ ಆಶ್ಚರ್ಯ ಪಡುವಂತೆ ಮಾಡಿತು. ಈ ದೃಶ್ಯ ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಇರುವ ಆಳವಾದ ಪ್ರೀತಿ ತೋರಿಸುತ್ತದೆ. ಸ್ನೇಹಿತರೆ, ಆ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರಿಗೆ ನಿಜವಾಗಲು ಒಂದು ಕ್ಷಣ ಕಣ್ಣಂಚಲಿ ನೀರುಬರುತ್ತೆ.

ಸಾಮಾನ್ಯವಾಗಿ ಮನುಷ್ಯರು ಮನುಷ್ಯರನ್ನ ಮಾತ್ರ ಪ್ರೀತಿಸುತ್ತಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ, ಆದರೆ ಪ್ರಾಣಿಗಳು ಮನುಷ್ಯರನ್ನ ಪ್ರೀತಿಸಿದಾಗ ಅದಕ್ಕೆ ಯಾವುದೇ ಮಿತಿ ಇಲ್ಲ. ಜಾರ್ಖಂಡ್ ದೇವಾಲಗರ್ ಜಿಲ್ಲೆಯ ಬ್ರಾಮ್ಸೋಲಿ ಎಂಬ ಗ್ರಾಮದಲ್ಲಿ ಇದೇ ರೀತಿಯ ಮನಕಲುಕುವ ದೃಶ್ಯವೊಂದು ನಡೆದಿದೆ.

ಬ್ರಾಮ್ಸೋಲಿ, ಈ ಗ್ರಾಮದಲ್ಲಿ ಮುನ್ನಾ ಸಿಂಗ್ ಇದ್ದಕ್ಕಿದ್ದಂತೆ ನಿಧನರಾದರು. ಅವರನ್ನು ನೋಡಲು ಗ್ರಾಮದ ಎಲ್ಲಾ ಜನರು ಅವರ ಮನೆಗೆ ಬಂದಿದ್ದರು, ಮಾಜಿ ಸಚಿವ ಹಾಗೂ ಮಾಜಿ ಶಾಸಕ ರಣಧೀರ್ ಸಿಂಗ್ ಕೂಡ ಮುನ್ನಾ ಸಿಂಗ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದರು.

ಆ ಸಂದರ್ಭದಲ್ಲಿ ಒಂದು ಮಂಗ ಮುನ್ನ ಸಿಂಗ್ ಅವರ ಮೃತದೇಹವನ್ನು ನೋಡಲು ಎಲ್ಲಿಂದಲೂ ಇದ್ದಕ್ಕಿದ್ದಂತೆ ಅಲ್ಲಿಗೆ ಆಗಮಿಸಿತು. ಮೃತ ದೇಹ ವ್ಯಕ್ತಿ ಪಾರ್ತಿವ ಶರೀರದ ಮುಂದೆ ಕುಳಿತು, ಮಂಗ ಅತ್ಯಂತ ಭಾವನಾತ್ಮಕವಾಗಿ ನಡೆದುಕೊಂಡಿತು. ಈ ದೃಶ್ಯ ಎಲ್ಲ ಜನರನ್ನು ಒಂದು ಕ್ಷಣ ಅಚ್ಚರಿಗೆ ಒಳಗಾಗುವಂತೆ ಮಾಡಿತ್ತು. ಅಲ್ಲಿಗೆ ಬಂದ ಮಂಗ ಅಲ್ಲಿ ತುಂಬಾ ಹೊತ್ತು ಅಲ್ಲೇ ಕುಳಿತುಕೊಂಡಿತು. ಮೃತ ಪಟ್ಟಿರುವ ಮುನ್ನ ಸಿಂಗ್ ಅವರನ್ನು ನೋಡಲು ಮಂಗ ಬಂದಾಗ, ಎಲ್ಲಾ ಜನರು ಭಾವುಕರಾಗಿ ಅವರ ವಿಡಿಯೋ ತೆಗೆದು ಕೊಳ್ಳುತ್ತಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.

WhatsApp Group Join Now
Telegram Group Join Now       

ಮುನ್ನಾಸಿಂಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಟ್ಟಾಗ, ಮಂಗ ಬಂದು ಮುನ್ನ ಸಿಂಗ್ ಅವರ ಮೃತ ದೇಹವನ್ನು ಮುತ್ತಿಡಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ಸುಮಾರು ಒಂದು ತಾಸಿನ ವರೆಗೆ ಅಲ್ಲೇ ಕುಳಿತುಕೊಂಡಿತು. ಮುನ್ನ ಸಿಂಗ್ ಬದುಕಿದಾಗ, ಅವರು ತಮ್ಮ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೆ ಮತ್ತು ಮಂಗಗಳೊಂದಿಗೆ ಅವರು ತುಂಬಾ ಒಡನಾಟ ಇಟ್ಟುಕೊಂಡಿದ್ದರು. ಅವುಗಳಿಗೆ ಆಹಾರ ನೀಡುತ್ತಿದ್ದರು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಮಂಗ ಕೂಡ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಭಾಗಿಯಾಗಿತ್ತು, ಅಂತಿಮ ನಮನ ಸಲ್ಲಿಸಿತ್ತು. ಈ ದೃಶ್ಯ ನೋಡಿದ ಸ್ಥಳೀಯರು ಮಂಗನಿಗೆ ಎಲ್ಲರೂ ಭಕ್ತಿಯಿಂದ ನಮಸ್ಕರಿಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಇದು ಗ್ರಾಮದ ಜನರ ಚರ್ಚೆಯ ವಿಷಯವಾಗಿ ಉಳಿಯಿತು.

WhatsApp Group Join Now
Telegram Group Join Now       

ಸ್ನೇಹಿತರೆ, ಇದೇ ರೀತಿಯ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment