ಎಸ್ ಎಸ್ ಎಲ್ ಸಿ ಪಾಸಾದ ಹೆಣ್ಣು ಮಕ್ಕಳಿಗೆ ಅಂಗನವಾಡಿಯಲ್ಲಿ ಉದ್ಯೋಗದ ಅವಕಾಶ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯಾಗಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಶಿಶು ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣ ಇಲಾಖೆಯು ಮಡಿಕೇರಿ ತಾಲೂಕಿನಲ್ಲಿ 13 ಅಂಗನವಾಡಿ ಕಾರ್ಯಕರ್ತೆ ಮತ್ತು 32 ಸಹಾಯಕಿ ಉದ್ಯೋಗಗಳಿಗೆ ಅರ್ಜಿಗೆ ಆಹ್ವಾನಿಸಲಾಗಿದೆ. ಈ ಉದ್ಯೋಗಗಳಿಗೆ ಅರ್ಹತೆ ಹೊಂದಿರುವ ಮಹಿಳೆಯರು www.anganwadirecruit.kar.nic.in ಈ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಯಾರಿಲ್ಲ ಈ ಅರ್ಜಿಯನ್ನು ಸಲ್ಲಿಸಬಹುದು?
ಅಂಗನವಾಡಿ ಕಾರ್ಯಕರ್ತೆ ಉದ್ಯೋಗಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
• ಶೈಕ್ಷಣಿಕ ಅರ್ಹತೆ ಪಿಯುಸಿ ಅಥವಾ ಸಮಾನ ಪದವಿ ಹೊಂದಿದವರು ಈ ಅರ್ಜಿಯನ್ನು ಸಲ್ಲಿಸಬಹುದು.
• ವಯೋಮಿತಿ 18 ರಿಂದ 35 ವರ್ಷ ಆಗಿರಬೇಕು ಮತ್ತು SC, ST, OBC ಹಾಗೂ ವಿಕಲಚೇತನರಿಗೆ ರಿಯಾಯಿತಿ ಲಭ್ಯವಿದೆ.
• ಮೀಸಲಾತಿ: SC, ST, OBC, ವಿಧವೆ ಮತ್ತು ದೇವದಾಸಿ ಸಮುದಾಯದ ಮಹಿಳೆಯರಿಗೆ ಪ್ರಾಮುಖ್ಯತೆ.
ಅಂಗನವಾಡಿ ಸಹಾಯಕಿ ಉದ್ಯೋಗಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
• ಶೈಕ್ಷಣಿಕ ಅರ್ಹತೆ (SSLC) ಅಂದರೆ ಹತ್ತನೇ ತರಗತಿ ಪಾಸ್ ಆಗಿರಬೇಕು.
• ವಯಸ್ಸಿನ ಮಿತಿ 18 ವರ್ಷದಿಂದ 35 ವರ್ಷ ವಯಸ್ಸು ಆಗಿರಬೇಕು; ವಿಶೇಷ ವರ್ಗಗಳಿಗೆ 45 ವರ್ಷದವರೆಗೆ ವಯೋಮಿತಿ ಇರುತ್ತದೆ.
ಈ ಅರ್ಜಿಯನ್ನು ಸಲ್ಲಿಸುವುದು ಹೇಗೆ?
• ಕೊನೆಯ ದಿನಾಂಕ ಜೂನ್ 9, 2025.
• ಅರ್ಜಿಯ ಫಾರ್ಮ್ ಈ ವೆಬ್ ವೆಬ್‌ಸೈಟಿನಲ್ಲಿ ದೊರೆಯುತ್ತದೆ. www.anganwadirecruit.kar.nic.in
• ಅರ್ಜಿಯ ಹಾಕಲು ಬೇಕಾಗುವ ಅಗತ್ಯ ದಾಖಲೆಗಳು.
1. ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್.
2. ಜನ್ಮ ಪ್ರಮಾಣ ಪತ್ರ.
3. ಜಾತಿ, ವಿಧವಾ, ವಿಕಲಚೇತನ, ಪ್ರಮಾಣ ಪತ್ರ.
4. ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ರೇಷನ್ ಕಾರ್ಡ್ ಜೆರಾಕ್ಸ್.
ಇದನ್ನು ಓದಿ: ಬರೋಬ್ಬರಿ 2 ಲಕ್ಷ ರೂಪಾಯಿ ಸಿಗುವ ಕೇಂದ್ರ ಸರ್ಕಾರದ ಈ ಯೋಜನೆ, ಮೇ 31ರ ಒಳಗಡೆ ಈ ಕೆಲಸ ಮಾಡಿ.
ಸಂಬಳ ಮತ್ತು ಆಯ್ಕೆಯ ಪ್ರಕ್ರಿಯೆ ಹೀಗಿದೆ.
• ಕಾರ್ಯಕರ್ತೆಯರಿಗೆ 11,000 ರೂಪಾಯಿ ತಿಂಗಳಿಗೆ.
• ಸಹಾಯಕಿಯರಿಗೆ 6000 ರೂಪಾಯಿ ತಿಂಗಳಿಗೆ.
• ಆಯ್ಕೆ ವಿಧಾನ ಅಂಕಗಳ ಆಧಾರದ ಮೇಲೆ ನಡೆಯುತ್ತದೆ. ಇಲ್ಲಿ ಯಾವುದೇ ಸಂದರ್ಶನ ಇರುವುದಿಲ್ಲ.
ಖಾಲಿ ಉದ್ಯೋಗಗಳ ಸ್ಥಳಗಳು.
ಅಂಗನವಾಡಿ ಕಾರ್ಯಕರ್ತೆಯರ ಖಾಲಿ ಸ್ಥಳಗಳು, ಕಾಲ ಸಸ್ಥಳಗಳು, ಮರಗೋಡು, ಕಡಲದಾಳು, ಮಕ್ಕಂದೂರು, ಕುಂದಚೇರಿ, ಭಾಗಮಂಡಲ ಇನ್ನೂ ಇತರೆ.
ಅಂಗನವಾಡಿ ಸಹಾಯಕಿಯ ಖಾಲಿ ಉದ್ಯೋಗಗಳ ಸ್ಥಳಗಳು.
ಅರ್ಜಿ ಸಲ್ಲಿಸುವವರಿಗೆ ಇರುವ ಮುಖ್ಯ ಸೂಚನೆಗಳು.
• ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
• ಆನ್ಲೈನ್ ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
• ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ.
ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ, ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.
ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪಾಸ್ ಮಹಿಳೆಯರು.
ಗ್ರಾಮೀಣ ಮತ್ತು ನಗರ ಪ್ರದೇಶದ ಉದ್ಯೋಗ ಅವಕಾಶ.
ಸ್ಥಿರವಾದ ಗೌರವಧನ ಹಾಗೂ ಸಾಮಾಜದ ಭದ್ರತೆ.
ಈ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 09, 06 2025.
ಮುಖ್ಯ ಸೂಚನೆ: ಈ ನೇಮಕಾತಿಯ ಪ್ರಕ್ರಿಯೆಯು[ Karnataka] ಸರಕಾರದ ನಿಯಮಗಳಿಗೆ ಅನುಗುಣವಾಗಿ ನಡೆಯಲಿದೆ. ಯಾವುದೇ ವಂಚನೆಯಿಂದ ದೂರವಿರಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.