ಮನಸ್ಸು ಮಾಡಿ ಮೇಲೆದ್ದ ಬಿಎಸ್‌ಎನ್‌ಎಲ್, BSNL ಅಬ್ಬರಕ್ಕೆ ಅಂಬಾನಿ, ಏರ್‌ಟೆಲ್ ಫುಲ್ ನಡುಕ!

ಮನಸ್ಸು ಮಾಡಿ ಮೇಲೆದ್ದ ಬಿಎಸ್‌ಎನ್‌ಎಲ್, BSNL ಅಬ್ಬರಕ್ಕೆ ಅಂಬಾನಿ, ಏರ್‌ಟೆಲ್ ಫುಲ್ ನಡುಕ!

BSNL 4G Roll Out: ಬಿಎಸ್‌ಎನ್‌ಎಲ್ ತನ್ನ 4G ನೆಟ್‌ವರ್ಕ್ ವಿಸ್ತರಣೆಗಾಗಿ ₹2,900 ಕೋಟಿ ಮೌಲ್ಯದ ಆರ್ಡರ್ ಕೊಟ್ಟಿದೆ. ಇದರಿಂದ ಖಾಸಗಿ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್, ಐಡಿಯಾಗೆ ಕಾಂಪಿಟೇಶನ್ ಕೊಡಲು {BSNL] ಸಿದ್ಧವಾಗಿದೆ.

ಭಾರತದಲ್ಲಿ ಅತಿದೊಡ್ಡ ತಂತ್ರಜ್ಞಾನ ಸೇವಾ ಪೂರೈಕೆ ಮಾಡುವದರಲ್ಲಿ ಒಂದಾದ TCS ಗೆ (TATA consultancy Service) ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL) TCS ಗೆ  ಬಹುದೊಡ್ಡ ಆರ್ಡರ್ ಸಿಕ್ಕಿದೆ. ಬಿಎಸ್‌ಎನ್‌ಎಲ್‌ನಿಂದ ಆರ್ಡರ್ ಸಿಕ್ಕಿರುವ ಮಾಹಿತಿಯನ್ನು ಶೇರು ಮಾರುಕಟ್ಟೆಗೆ ಟಿಸಿಎಸ್ ತಿಳಿಸಿದೆ. 4G ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನ ಅಭಿವೃದ್ಧಿಗಾಗಿ ಬಿಎಸ್‌ಎನ್ಎಲ್ ಈ ಆರ್ಡರ್ ನೀಡಿದೆ ಎಂದು ಟಿಸಿಎಸ್ ಮಾಹಿತಿ ಕೊಟ್ಟಿದೆ.

ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಟಿಸಿಎಸ್ ನೀಡಿರುವ ಮಾಹಿತಿ ಪ್ರಕಾರ, ಈ ಆದೇಶದ ಅಡಿಯಲ್ಲಿ ದೇಶದ 18,685 ಸ್ಥಳಗಳಲ್ಲಿ 4G ಮೊಬೈಲ್ ನೆಟ್‌ವರ್ಕ್ ಯೋಜನೆಗೆ ಸಂಬಂಧಿಸಿದ ಇಂಜಿನಿಯರಿಂಗ್, ಇನ್‌ಸ್ಟಾಲೇಷನ್, ಟವರ್ ಅಳವಡಿಕೆ, ಪರಿಶೀಲನೆ, ಕಮಿಷನಿಂಗ್ ಮತ್ತು ವಾರ್ಷಿಕ ನಿರ್ವಹಣೆಗಾಗಿ ಟಿಸಿಎಸ್‌ ದೊಡ್ಡ ಮೊತ್ತದ ಆರ್ಡರ್ ತೆಗೆದುಕೊಂಡಿದೆ. ಹಾಗಾದರೆ ಬಿಎಸ್‌ಎನ್ಎಲ್ ನೀಡುತ್ತಿರುವ ಆರ್ಡರ್ ಮೊತ್ತ ಎಷ್ಟು ಇರಬಹುದು ಎಂಬುದನ್ನು ತಿಳಿದುಕೊಳ್ಳೊಣ ಬನ್ನಿ.

ಇದನ್ನು ಒಮ್ಮೆ ಓದಿ: ಮನೆ ಕಟ್ಟಲು ಸಾಲ ಬೇಕಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತೆ ಹೋಮ್ ಲೋನ್.

2,900 ಕೋಟಿ ರೂಪಾಯಿ ಆರ್ಡರ್
ಬಿಎಸ್‌ಎನ್ಎಲ್ ಟಿಸಿಎಸ್‌ಗಗೆ 2,900 ಕೋಟಿ ರೂಪಾಯಿ ಆರ್ಡರ್ ನೀಡಿದೆ. ಈ ಆರ್ಡರ್ ಮೂಲಕ ಬಿಎಸ್‌ಎನ್‌ಎಲ್ ತನ್ನ 4G ಮೊಬೈಲ್ ನೆಟ್‌ವರ್ಕ್ ರೋಲ್‌ ಔಟ್ ಸಂಬಂಧ ಕ್ಷಿಪ್ರವಾಗಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. 4G ನೆಟ್‌ವರ್ಕ್ ಕಾರ್ಯಗತಗೊಳಿಸುವಿಕೆಯಲ್ಲಿ TCS ಮುಖ್ಯ ಪಾತ್ರ ವಹಿಸುತ್ತಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಪೈಪೊಟಿ ಕೊಡಲು ಬಿಎಸ್‌ಎನ್ಎಲ್ ಮುಂದಾಗಿದೆ.

WhatsApp Group Join Now
Telegram Group Join Now       

APO ನಲ್ಲಿ ಉಲ್ಲೇಖಿಸಲಾದ  ಮಾಹಿತಿಗಳ ಪ್ರಕಾರ, ಈ ಒಪ್ಪಂದ ಕೆಲವು  ಷರತ್ತು ಮತ್ತು ದಾಖಲೆಗಳನ್ನು ಒಡಂಬಡಿಕೆಯನ್ನು ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಈ ಆರ್ಡರ್ ಕುರಿತು ಸುದೀರ್ಘವಾದ ಮಾಹಿತಿಯನ್ನು ನೀಡಲು ಇಚ್ಚಿಸಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇವಾಗಿನ ಸದ್ಯದ ಮಾಹಿತಿ ಪ್ರಕಾರ, ಟಿಸಿಎಸ್‌ಗೆ 2,900 ಕೋಟಿ ರೂಪಾಯಿ ಆರ್ಡರ್ ಸಿಕ್ಕಿರೋದು ಮಾತ್ರ ಖಚಿತವಾಗಿದೆ.

ಬಿಎಸ್‌ಎನ್‌ಎಲ್ ತನ್ನ 4G network ದೇಶದ ಎಲ್ಲಾ ಕಡೆ ವಿಸ್ತರಣೆಗಾಗಿ ಟಿಸಿಎಸ್ ನೇತೃತ್ವದ ಒಕ್ಕೂಟಕ್ಕೆ ₹15,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮುಂಗಡ ಖರೀದಿ ಆದೇಶ ಕೊಟ್ಟಿದೆ. ಈ ಆದೇಶದ ಭಾಗವಾಗಿ ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಹಾಗೂ ಐಟಿಐ ಲಿಮಿಟೆಡ್  APO ಪಡೆದುಕೊಂಡಿವೆ. ಈ ಆರ್ಡರ್ ಸಿಕ್ಕ ನಂತರ ತೇಜಸ್ network ಷೇರುಗಳ ಬೆಲೆ ಶೇ.2.8ರಷ್ಟು ಏರಿಕೆಯಾಗಿದೆ.

WhatsApp Group Join Now
Telegram Group Join Now       

ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment