DC vs SRH: That one catch changed the course of the match! Delhi hid Sunrisers’ ego in Telugu Nadu
DC vs SRH: ಪಂದ್ಯದ ಗತಿಯನ್ನೇ ಬದಲಿಸಿತು ಆ ಒಂದು ಕ್ಯಾಚ್! ತೆಲುಗು ನಾಡಲ್ಲೇ ಸನ್‌ರೈಸರ್ಸ್ ಅಹಂ ಅಡಗಿಸಿದ ಡೆಲ್ಲಿ
IPL 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಸನ್‌ರೈಸರ್ಸ್ ವಿರುದ್ಧ ಸೂಪರ್‌ಮ್ಯಾನ್ ತರ ಕ್ಯಾಚ್ ಹಿಡಿದು ಪಂದ್ಯ ಗೆಲ್ಲಿಸಿದರು. ಈ ಸಾಹಸವು ಡೆಲ್ಲಿ ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು.
ಐಪಿಎಲ್ 2025ರ (IPL 2023) ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಫ್ರೇಸರ್-ಮೆಕ್‌ಗುರ್ಕ್ ಬೌಂಡರಿ ಲೈನ್‌ನಲ್ಲಿ ಸೂಪರ್‌ಮ್ಯಾನ್ ತರ ಕ್ಯಾಚ್ ಹಿಡಿದು ಸಿಕ್ಸರ್ ಆಗಬೇಕಿದ್ದ ಬಾಲ್ ಅನ್ನು ವಿಕೆಟ್‌ಗೆ ಪರಿವರ್ತಿಸಿದರು. ಈ ಕ್ಯಾಚ್ ಪಂದ್ಯಕ್ಕೆ ತಿರುವು ತಂದುಕೊಟ್ಟಿತು, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.
ಈ ಸೀಸನ್‌ನ ಅತ್ಯುತ್ತಮ ಕ್ಯಾಚ್
ಪಂದ್ಯದ 16ನೇ ಓವರ್‌ನಲ್ಲಿ ಈ ಪ್ರದರ್ಶನ ನಡೆಯಿತು. ಕುಲದೀಪ್ ಯಾದವ್ ಬೌಲಿಂಗ್ ಮಾಡಿದ ಮೊದಲ ಓವರ್‌ನ ನಾಲ್ಕನೇ ಬೌಲ್ ನ್ನು ಸನ್‌ರೈಸರ್ಸ್‌ನ ಯುವ ತಾರೆ ಅನಿಕೇತ್ ವರ್ಮಾ ಭರ್ಜರಿ ಸಿಕ್ಸರ್‌ಗೆ ಹೊಡೆದರು. ಆದರೆ ಮುಂದಿನ ಎಸೆತದಲ್ಲಿ ಮಿಡ್-ವಿಕೆಟ್ ಕಡೆಗೆ ಬಿಗ್ ಶಾಟ್ ಆಡಿದಾಗ, ಚೆಂಡು ಸಿಕ್ಸರ್ ಹೋಗುವ ಹಂತದಲ್ಲಿತ್ತು. ಆಗ ಫ್ರೇಸರ್-ಮೆಕ್‌ಗುರ್ಕ್ ಗಾಳಿಯಲ್ಲಿ ಜಿಗಿದು, ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ಕ್ಯಾಚ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು “ಐಪಿಎಲ್ 2025ರ ಸೀಸನ್‌ನ ಅತ್ಯುತ್ತಮ ಕ್ಯಾಚ್” ಎಂದು ಹೇಳಿಕೊಂಡಿದ್ದಾರೆ
ಬೃಹತ್ ಮೊತ್ತ ತಡೆದ ಕ್ಯಾಚ್
ಈ ಕ್ಯಾಚ್ ಸನ್‌ರೈಸರ್ಸ್‌ಗೆ ದೊಡ್ಡ ಆಘಾತವನ್ನು ಮಾಡಿತು. ಅನಿಕೇತ್ ವರ್ಮಾ 41 ಬೌಲ್ ಗಳಲ್ಲಿ 5 ಪೊರ್ ಮತ್ತು 6 ಸಿಕ್ಸರ್‌ಗಳೊಂದಿಗೆ 74 ರನ್ ಗಳಿಸಿ, ಒಳ್ಳೆ ಲಯದಲ್ಲಿದ್ದರು. ಆದರೆ ಫ್ರೇಸರ್‌ರ ಈ ಸಾಹಸದಿಂದ ಅವರು ಪೆವಿಲಿಯನ್‌ಗೆ ಹಿಂತಿರುಗಿದರು. ಅನಿಕೇತ್ ಕೊನೆಯವರೆಗೆ ಆಡಿದ್ದರೆ, ಸನ್‌ರೈಸರ್ಸ್ 200ಕ್ಕೂ ಹೆಚ್ಚು ರನ್ ಗಳಿಸಿ, ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಹುದಿತ್ತು ಎಂದು ವಿಶ್ಲೇಷಕರು ಹೇಳಿದರು.
ಕೈಕೊಟ್ಟ ಸ್ಟಾರ್ ಬ್ಯಾಟರ್ಸ್
ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 18 ಓವರ್ 4 ಬೌಲ್ ಗಳಲ್ಲಿ 163 ರನ್ ಗಳಿಸಿ ಆಲೌಟ್ ಆಯಿತು. ಅನಿಕೇತ್ ವರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ 19 ಬೌಲ್ ಗಳಲ್ಲಿ 32 ರನ್, 2 ಬೌಂಡರಿ, 2 ಸಿಕ್ಸ್ ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ 5/35 ರೊಂದಿಗೆ ಮಿಂಚಿದರೆ, ಕುಲದೀಪ್ ಯಾದವ್ 3/22ರಲ್ಲಿ ಮೂರು ವಿಕೆಟ್ ತೆಗೆದರು. ಮೋಹಿತ್ ಶರ್ಮಾ ಒಂದು ವಿಕೆಟ್ ತೆಗೆದರು.
ಜೇಕ್ ಫ್ರೇಸರ್-ಮೆಕ್‌ಗರ್ಕ್‌ರ ಈ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಅವರ ಈ ಪ್ರದರ್ಶನವು ಯುವ ಆಟಗಾರರಿಗೆ ಕ್ಷೇತ್ರರಕ್ಷಣೆಯ ಮಹತ್ವವನ್ನು ತೋರಿಸಿತು. ಸನ್‌ರೈಸರ್ಸ್ ತಂಡ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದರೂ, ಈ ಕ್ಯಾಚ್‌ನ ನಂತರ ಒತ್ತಡಕ್ಕೆ ಸಿಲುಕಿ ಸೋತಬಿಟ್ಟಿತು.
ಡೆಲ್ಲಿ ಕ್ಯಾಪಿಟಲ್ಸ್ ಈ ಗೆಲುವಿನೊಂದಿಗೆ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಫ್ರೇಸರ್-ಮೆಕ್‌ಗುರ್ಕ್ ಅವರು ತಮ್ಮ ಬ್ಯಾಟಿಂಗ್‌ಗಿಂತಲು ಹೆಚ್ಚಾಗಿ ಫೀಲ್ಡಿಂಗ್‌ನಲ್ಲಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಡೆಲ್ಲಿ ಬಾಲರ್‌ಗಳು ಮತ್ತು ಫೀಲ್ಡರ್‌ಗಳಿಂದ ಗೆಲುವಿಗೆ ಕಾರಣವಾಯಿತು. ಸ್ಟಾರ್ಕ್ ಮತ್ತು ಕುಲದೀಪ್ ಜೊತೆಗೆ ಫ್ರೇಸರ್‌ರ ಈ ಕ್ಯಾಚ್ ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು. ಐಪಿಎಲ್ 2025ರಲ್ಲಿ ಡೆಲ್ಲಿ ತಂಡ ಈ ರೀತಿಯಾದ ಪ್ರದರ್ಶನ ಮುಂದುವರಿಸಿದರೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ.
ಈ ಕ್ಯಾಚ್ ಐಪಿಎಲ್‌ನಲ್ಲಿ ಕ್ಷೇತ್ರರಕ್ಷಣೆಯ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಒತ್ತಿಹೇಳಿದೆ. ಜೇಕ್ ಫ್ರೇಸರ್-ಮೆಕ್‌ಗುರ್ಕ್‌ರ ಈ ಸಾಹಸವು ಈ ಸೀಜನ್ ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.