Don’t make mistakes, especially don’t make the mistake of going to jail: Vinay Gowda reveals what a hell it is to be in jail,
ತಪ್ಪು ಮಾಡಬೇಡಿ, ಅದರಲ್ಲೂ ಜೈಲಿಗೆ ಹೋಗುವ ತಪ್ಪು ಮಾಡಬೇಡಿ: ಜೈಲಿನಲ್ಲಿ ಇರುವುದು ಎಂತಹ ನರಕ, ಅನುಭವ ಬಿಚ್ಚಿಟ್ಟ ವಿನಯ್ ಗೌಡ,
ಮನರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕನ್ನಡದ ಬಿಗ್ ಭಾಸ್ಯ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಜೈಲು ಸೇರಿದ್ದರು. ಪರಪ್ಪನ ಅಗ್ರಹಾರದಲ್ಲಿ ಎರಡು ದಿನಗಳ ಜೈಲುವಾಸ ಅನುಭವಿಸಿದರು, ರಜತ್ ಮತ್ತು ವಿನಯ್ ಗೌಡಗೆ ಈ ಪ್ರಕರಣದಲ್ಲಿ ಸದ್ಯ ಇವಾಗ ರಿಲೀಫ್ ದೊರೆತಿದೆ. ಸೆಲೆಬ್ರೆಟಿಯಾಗಿದ್ದವರಿಗೆ ಜೈಲಿನ ಅನುಭವ ಹೇಗಿತ್ತು ಎಂಬುದನ್ನು ವಿನಯ್ ಗೌಡ ಹೇಳಿದರು.
ಪರಪ್ಪನ ಅಗ್ರಹಾರದಲ್ಲಿ ಅವರು ಎರಡೇ ದಿನಗಳಲ್ಲಿ ಆಗಿರುವ ಅನುಭವವನ್ನು ಒಂದು ಚಾನೆಲ್ ಮೂಲಕ ಹಂಚಿಕೊಂಡಿದ್ದಾರೆ. ‘ನಾನು ರಜತ್ ಒಟ್ಟಿಗೆ ಇದ್ದರೂ ಮಾತನಾಡಲು ಅಂತಹದ್ದೇನು ಇರುತ್ತಿರಲಿಲ್ಲ; ಸುಮ್ಮನೆ ಇರುತಿದ್ದೆವು. ನಮ್ಮಿಬ್ಬರಿಗೂ ಇದು ಹೊಸ ವಾತಾವರಣ. ಅಲ್ಲಿರುವ ಕೈದಿಗಳದ್ದು ಒಬ್ಬೊಬ್ಬರದು; ಒಂದೊಂದು ಕಥೆ ಇದೆ. ಬೇರೆ ಬೇರೆ ಕಷ್ಟಡಿಯ ಒಳಗಡೆ ಬೇರೆ ಬೇರೆ ಕಥೆ ಇದೆ, ಹೇಳಿದರು.
ಅಲ್ಲಿರುವ ಹಳುಬರನ್ನು ಮಾತನಾಡಿಸಿದೆ, ಯಾಕೆ ಇಲ್ಲಿದ್ದಿರಾ? ಏನು ನಿಮ್ಮ ಕಥೆ? ನಿಮ್ಮ ಪರಿಸ್ಥಿತಿ ಏನು? ಮಾಡಿರುವ ಅಪರಾಧವಾದರು ಏನು? ವಿಚಾರಿಸಿದೆ ಎಂತೆಥಹ ಅಪರಾಧಿಗಳಿದ್ದಾರೆ ಎಂದೆಲ್ಲಾ ಚರ್ಚೆ ಮಾಡಿದೆವು. ಮುಂದೆ ನಾನು ಅಭಿನಯಿಸುವ ಸಿನಿಮಾಗಳಲ್ಲಿ ಯಾವತ್ತಾದರೂ ಅಲ್ಲಿನ ಪಾತ್ರ ಮಾಡಬೇಕು ಅಂದರೆ ಅಲ್ಲಿನ ಕೆಲವು ಮಾಹಿತಿಗಳನ್ನು ಪಡೆದಿದ್ದೆನೆ. ಆ ಜಾಗಕ್ಕೆ ನನ್ನ ಜೀವನದಲ್ಲಿ ಮತ್ತಿನ್ನೆಂದು ಯಾವತ್ತೂ ಹೋಗಲು ಇಷ್ಟಪಡುವುದಿಲ್ಲ. ಇಷ್ಟಪಡುವುದಿಲ್ಲ.ನನಗೆ ಸಿಕ್ಕ ಸಮಯದಲ್ಲಿ, ಅಲ್ಲಿನ ಅನುಭವ ಏನು ಮತ್ತು ಅಲ್ಲಿ ಏನು ಕಲಿಯಬಹುದು? ಅದನ್ನು ಕಲಿತಿದ್ದೇನೆ’ ಎಂದು ಹೇಳಿದರು.
ನಾನು ಮತ್ತು ರಜೆ ಕಿಶನ್ ಇಬ್ಬರು ಸೇರಿ ಮಾಡಿದ ರೀಲ್ಸ್ ಯಾವಾಗ ತಪ್ಪು ಅಂತಾ ಅನಿಸಿತು ಅಂದರೆ ಅಲ್ಲಿಗೆ ಹೋದಾಗ ನನಗೆ ಅರಿವಾಯ್ತು. ಯಾಕಪ್ಪ ಅಂತ ಅಂದ್ರೆ ಅಲ್ಲಿ ಹದಿನೆಂಟು-ಹತ್ತೊಂಬತ್ತು ವರ್ಷದ ಹುಡುಗರು ತುಂಬಾ ಇದ್ದಾರೆ. ಈ ವಯಸ್ಸಿನ ಹುಡುಗರು ನಮ್ಮಂತ ಸೆಲೆಬ್ರಿಟಿಗಳನ್ನು ಫಾಲೋ ಮಾಡುತ್ತಾರೆ. ಸೆಲೆಬ್ರಿಟಿಗಳಾದ ನಾವು ಇಂಥ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದು ತುಂಬಾ ದೊಡ್ಡ ತಪ್ಪು, ಯಾಕಂದರೆ ಚಿಕ್ಕ ಚಿಕ್ಕ ವಯಸ್ಸಿನ ಹುಡುಗರು ಸೆಲೆಬ್ರಿಟಿಗಳಾದ ನಮ್ಮನ್ನು ಫಾಲೋ ಮಾಡುತ್ತಾರೆ.
ಪರಪ್ಪನ ಅಗ್ರಹಾರದಲ್ಲಿ ಚಿಕ್ಕ ವಯಸ್ಸಿನ ಹುಡುಗರನ್ನು ತುಂಬಾ ನೋಡಿದೆ. ಜಾಸ್ತಿ ದಿನ ಉಳಿಯೊದು ತುಂಬ ಕಷ್ಟ. ಅವರು ಅಷ್ಟು ಸಣ್ಣ ಆಗಿದ್ದಾರೆ. ಅವರೆಲ್ಲಾ ಡ್ರಗ್ ಕೈಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದ್ದಾರೆ. ಅವರ ಕೈಗಳ ಎಲ್ಲಾ ಕಡೆ ಕಪ್ಪು ಕಲೆ ಇದೆ. ಒಬ್ಬ ಹುಡುಗ ಹೇಳಿದನು, ಅವನ ಮೂರು ಸೂಜಿಗಳು ಅವನ ಕೈಯಲ್ಲೇ ಮುರಿದು ಹೋಗಿದೆ ಅಂತೆ. ಆದರೂ, ಅವನಿಗೆ ಡ್ರಗ್ ತೆಗೆದುಕೊಂಡಿಲ್ಲ, ಅಂದ್ರೆ ನಿದ್ದೆ ಬರುವುದಿಲ್ಲ, ಅಂತಾ ಅವರು ಹೇಳುತ್ತಾರೆ. ಇದನೆಲ್ಲ ಯಾಕೆ ಹೇಳುತ್ತಿದ್ದೇನೆ ಅಂದರೆ, ಇವಾಗಿನ ಯುವಕರಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಕ್ಷಣಿಕ ಸುಖಕ್ಕಾಗಿ ಅಂತಾ ಶುರು ಮಾಡಿದ ಈ ದುಷ್ಟ ಚಟ ವ್ಯಸನವಾಗಿ ಉಡುಗರ ಅಥವಾ ಹುಡುಗಿಯರ ಜೀವನವನ್ನೇ ತುಂಬಾ ಕಷ್ಟ ಕೀಡು ಮಾಡುತ್ತದೆ, ಹಾಳು ಮಾಡುತ್ತದೆ.’
ಜೈಲಿನ ಸೆಲ್‌ಗಳಿಂದ ಕಿರುಚಾಡುವ ಸದ್ದು ಕೇಳಿ ಬರುತ್ತದೆ. ನನಗೆ ಆ ಜಾಗಾನೂ ಹೊಸದು, ಆ ಅನುಭವನೂ ಹೊಸದು. ಅದನೆಲ್ಲಾ ನೋಡಿ ಅನುಭವಾಯ್ತು. ಜೊತೆ ಅರಿವು ಕೂಡ ಆಯ್ತು. ಇಂದಿನ ಯುವಕರು ಏನೆಲ್ಲಾ ತಪ್ಪು ದಾರಿ ಹಿಡಿಯುತ್ತಿದ್ದಾರೆ. ನಾನು ಕೇಳಿಕೊಳ್ಳುವುದು ಏನು ಎಂದರೆ ತಪ್ಪೇ ಮಾಡಬೇಡಿ, ಅದರಲ್ಲೂ ಜೈಲಿಗೆ ಹೋಗುವ ತಪ್ಪು ಮಾಡಬೇಡಿ. ಜೊತೆಗೆ ಈ ಡ್ರಗ್ಸ್ ಎನ್ನುವುದು ಸಮಾಜವನ್ನು ತುಂಬಾ ಕೆಡಿಸುತ್ತಿದ್ದೆ. ಇದರಿಂದ ದೂರ ಇರಿ’ ಎಂದು ವಿನಯ್ ಗೌಡ ಮನವಿ ಮಾಡಿಕೊಂಡರು.