Dr Puneet Rajakumar,
ಕರ್ನಾಟಕ ರಾಜ್ಯ ರತ್ನ,ನೋಟ ಸಾರ್ವಭೌಮ, ಮನಗುವಿನ ವಡೆಯ, ಅಭಿಮಾನಿಗಳ ಪಾಲಿನ ದೇವರು, ನಮ್ಮೆಲ್ಲರ ಮೆಚ್ಚಿನ ಅಪ್ಪು, ಡಾ” ಪುನೀತ್ ರಾಜ್ ಕುಮಾರ್ ಕನ್ನಡ ಚಲನ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ ಅಗಲಿರವ ವಿಚಾರ ಎಲ್ಲರಿಗೂ ಗೊತ್ತು ಆದರೆ ಅಪ್ಪು ಅವರ ಸೋದರತ್ತೆ ನಾಗಮ್ಮನವರಿಗೆ ಇಲ್ಲಿಯವರೆಗೂ ಈ ವಿಷಯ ಗೊತ್ತಿಲ್ಲ.ನಾಗಮ್ಮನವರಿಗೆ ಇವಾಗ 93 ವರ್ಷ ವಯಸ್ಸು, ಅವರಿಗೆ ಈ ಆಘಾತಕಾರಿ ವಿಷಯ ಯಾರು ಹೇಳುವುದು ಬೇಡ ಎಂದು ಕುಟುಂಬಸ್ತರು ನಿರ್ಧರಿಸಿರುವ ಮೂಲಕ ಕಳೆದ ಮೂರು ವರ್ಷಗಳಿಂದ ಈ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದಾರೆ.
ಅಪ್ಪು ಇನ್ನೂ ನಮ್ಮಜೊತೆ ಇದಾನೆ ಎಂದು ನಾಗಮ್ಮ ಇಂದಿಗೂ ಅನ್ಕೊಂಡಿದ್ದಾರೆ, ಮೊನ್ನೆ ತಾನೆ ನಡೆದ ಅಪ್ಪು ಅವರ ಐವತ್ತನೇ ವರ್ಷದ ಬರ್ತ್ ಡೇ ಗೆ ವಿಡಿಯೋ ಮೂಲಕ ಶುಭಾಶಯ ತಿಳಿಸಿದರು. ಅಪ್ಪು ರವರಿಗೆ ವಿಡಿಯೋ ದಲ್ಲಿ ಏನೆಲ್ಲ ಹೆಳಿದ್ದಾರೆ ಎಂದು ತಮಗೆ ತಿಳಿದುಕೊಳ್ಳುವ ಅಂಬಲ ಇದೆಯ ಆಗಾದರೆ ಮುಂದೆ ಓದಿ.
‘ಅಪ್ಪು ಚೆನ್ನಾಗಿದಿಯಾ ಮಗನೇ, ನೀನು ಇನ್ನು ಮಗು ಅಂದುಕೊಂಡಿದ್ದೇನೆ ನಾನು. ಒಂದು ಸಾರಿ ಬಂದು ನನ್ನ ನೋಡಿಕೊಂಡು ಹೋಗು ಕಂದಾ. ನಿನ್ನನ್ನು ನೋಡಿ ಬಿಡುತ್ತೇನೆ’ ಎಂದಿದ್ದರು. ಒಮ್ಮೆ ಯೋಚನೆ ಮಾಡಿ ಸ್ನೇಹಿತರೆ ಇಲ್ಲದಿರುವ ವೆಕ್ತಿಗೆ ಶುಭಾಶಯ ಹೇಳುವುದನ್ನು ನೋಡಿದರೆ ಯಾರಿಗಾದರು ಒಂದು ಕ್ಷಣ ಕಣ್ಚಂಲ್ಲಿ ನೀರು ಬಂದೆ ಬರುತ್ತೆ.
ನಟ ಶಿವರಾಜ್ ಕುಮಾರ್ ರವರು ನಮ್ಮ ಅತ್ತೆಗೆ ಅಪ್ಪು ಇಲ್ಲದಿರುವ ವಿಷಯ ಗೊತ್ತಿಲ್ಲ ಎಂದು ಮಾತನಾಡಿದರು. ನಮ್ಮ ಅತ್ತೆಗೆ 93 ವರ್ಷ. ಅದ್ದರಿಂದ ಅವರಿಗೆ ಅಪ್ಪು ಇಲ್ಲದಿರುವ ವಿಚಾರ ಗೊತ್ತಾಗುವುದೂ ಬೇಡ. ಅಪ್ಪು ನಮನ್ನ ಅಗಲಿ ಇಲ್ಲಿಗೆ ಮೂರಿಂದ ನಾಲ್ಕು ವರ್ಷ ಆಗುತ್ತಾ ಬಂತು ನಾಗಮ್ಮನವರಿಗೆ ಇನ್ನೂ ಈ ವಿಷಯ ಗೊತ್ತಾಗಿಲ್ಲ. ಅವರಿಗೆ ಗೊತ್ತಾಗುವುದು ಬೇಡ ಎಂದು ಹೇಳಿದರು, ನಮ್ಮ ಅತ್ತೆ ನಮಗೆ ಆಶೀರ್ವಾದ ಮಾಡುತ್ತಲೇ ಇರಬೇಕು. ಅವರಿಗೆ ಈ ವಿಷಯ ಗೊತ್ತಾದರೆ ತುಂಬಾ ಕಷ್ಟ ಇದೆ’ ಎಂದು ಶಿವಣ್ಣ ಹೇಳಿದರು.
‘ನಾವು ಅತ್ತೆ ಮನೆಗೆ ಹೋದಾಗ ಆ ವಿಷಯ ಬರುವುದೇ ಇಲ್ಲ. ನನಗೂ ಒಂದೊಂದು ಸಲ ಅನಿಸುತ್ತೆ ಅತ್ತೆಗೆ ಈ ವಿಷಯ ಗೊತ್ತರಬಹುದಾ? ಅಂತಾ. ಗೊತ್ತಿದ್ದರೂ ಮನೆಯಲ್ಲಿ ಎಲ್ಲರೂ ನನಗೆ ಗೊತ್ತಿಲ್ಲ ಅಂತ ಅಂದುಕೊಳ್ಳಲಿ ಅಂತಾ ಹಾಗೇ ಇದ್ದಿರಬಹುದು ಅಂತ ಅನಿಸುತ್ತದೆ. ಅತ್ತೆಗೆ ಗೊತ್ತಿದ್ದರೂ ಇರಬಹುದು, ಅಥವ ಇಲ್ಲದೆನು ಇರಬಹುದು. ಅತ್ತೆಗೆ ನಾನು ಅಪ್ಪು ಇಲ್ಲದನ್ನು ನೋಡಿಲ್ಲ, ನನ್ನ ಪಾಲಿಗೆ ಅಪ್ಪು ಇದ್ದಾನೆ ಎನ್ನುವ ಭಾವನೆ ಇದ್ದರೂ ಇರಬಹುದು’ ಎಂದು ಶಿವಣ್ಣ ಹೇಳಿದ್ದರು.
ಅದೆ ರೀತಿ ಗೀತಾ ಶಿವ ರಾಜ್‌ಕುಮಾರ್ ಅವರು ಸಹ ಇದರ ಬಗ್ಗೆ ಮಾತನಾಡಿದರು, ‘ಅವರಿಗೆ ಎರಡು ಮೂರು ವರ್ಷದಿಂದ ಬಹಳ ಹುಷಾರಿಲ್ಲ. ನಾಗಮ್ಮನವರಿಗೆ ಅಪ್ಪು ಇಲ್ಲ ಅಂತ ಗೊತ್ತಾದರೆ ತಡೆಯುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ ಅದರಿಂದ ಮನೆಯವರು ಯಾರು ಹೇಳೊದು ಬೇಡ ಅಂತಾ ಹೇಳಿಲ್ಲ, ಎಂದು ಗೀತಾ ಶಿವರಾಜ್ ಕುಮಾರ್ ರವರು ಹೇಳಿದರು.