GOLD RATE:
ಆರ್ಥಿಕ ತಜ್ಞ ಆನಂದ ಶ್ರೀನಿವಾಸನ್ ಬಂಗಾರದ (ಚಿನ್ನ) ಬೆಲೆಯ ಬಗ್ಗೆ ಹೇಳಿದ ಮಾತು.
ಬಂಗಾರದ ಬೆಲೆ ಆಕಾಶಕ್ಕೇರಿದೆ. 10 ಗ್ರಾಂ 24 ಕ್ಯಾರೆಟ್ ಬಂಗಾರದ ರೂ. 90 ಸಾವಿರಕಿಂತ ಜಾಸ್ತಿ ಆಗಿದೆ. ಆದರಿಂದ ಚಿನ್ನದ ಹೆಸರು ಜನರ ಮಧ್ಯ ಕೇಳಿಬಂದರೆ ಏನು ಮಾತನಾಡದೆ ಸುಮ್ಮನೇ ಬಾಯಿ ಬಿಡದೆ ಇರುವ ಪ್ರಸಂಗ ನಿರ್ಮಾಣವಾಗಿದೆ. ಆದರೂ ಇವಾಗ ಎರಡು ದಿನಗಳಿಂದ ಬಂಗಾರದ ಮೌಲ್ಯ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ.2025 ರಲ್ಲಿ ಇಲ್ಲಿಯವರೆಗೆ ಮೂರು ತಿಂಗಳ ಕಡಿಮೆ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು 17% ರಷ್ಟು ಜಾಸ್ತಿಯಾಗಿದೆ. ಆಗಸ್ಟ್ 2024 ರಿಂದ ಚಿನ್ನದ ಬೆಲೆ ಸುಮಾರು 70,000 ಮಟ್ಟದಿಂದ ಏರಿಕೆಯಾಗಿದೆ.
ಕೇವಲ ಏಳು ತಿಂಗಳಲ್ಲಿ ಸರಿಸುಮಾರು 30% ರಷ್ಟು ಜಾಸ್ತಿ ಆಗಿದೆ. ಬಂಗಾರ ಮತ್ತು ನಮ್ಮ ಭಾರತೀಯರನ್ನು ದೂರ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯರ ಮನೆಯಲ್ಲಿ ಬಂಗಾರವಿದ್ದರೆ ಧೈರ್ಯ, ಒಂದು ಲೆವೆಲ್, ಮತ್ತು ಭಾರತೀಯ ಹೆಣ್ಣು ಮಕ್ಕಳಿಗೆ ಖುಷಿ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದ್ದರಿಂದ ಕಚೇರಿಯಲ್ಲಿ ಬೋನಸ್ ಬಂದರೂ, ಬೇರೆ ಯಾವುದೇ ರೂಪದಲ್ಲಿ ಹಣ ಸಿಕ್ಕರೂ ಸ್ವಲ್ಪ ಚಿನ್ನವನ್ನು ಖರೀದಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದ್ದರಿಂದ ಚಿನ್ನಕ್ಕೆ ಇಷ್ಟು ಬೇಡಿಕೆ ಇದೆ. ಇವಾಗ ಬಂಗಾರದ ಬೆಲೆ ಜಾಸ್ತಿ ಆಗುತ್ತಿದೆ.
ಈ ಹಿಂದೆಂದೂ ಇಲ್ಲದ ರೀತಿಯಲ್ಲಿ ಒಂದು ಪವನ್ (ತೊಲಿ) ಬಂಗಾರದ ಬೆಲೆ ರೂ. 90 ಸಾವಿರ ದಾಟಿದೆ.ಅಂದರೆ ರೂ. 1 ಲಕ್ಷ ತಲುಪುವುದು ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಸದ್ಯ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ. ಸದ್ಯ ಇವಾಗ ಒಂದು ಔನ್ಸ್ ಚಿನ್ನ (31.10) ಗ್ರಾಂ 3023 ಡಾಲರ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಈ ಬೆಲೆ 3050 ಡಾಲರ್ ಆಗಿತ್ತು. ಆದರೆ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗುತ್ತಿರುವ ಕಾರಣ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಗಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆ ಕ್ರಮೇಣ ರೂ. 400 ರವರೆಗೆ ಕಡಿಮೆಯಾಗಿದೆ.