ಗೂಗಲ್ ಪೇ ಮೂಲಕ ಲೋನ್ 10 ಲಕ್ಷದವರೆಗೆ ಸಾಲ ಅಪ್ಲೈ ಮಾಡುವ ಸರಳವಾದ ವಿಧಾನ ಇಲ್ಲಿದೆ.[Google pay]
ಗೂಗಲ್ ಪೇ ಮೂಲಕ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಬಹುದು: ಅರ್ಜಿ ಸಲ್ಲಿಸುವುದು, ನೇಮಗಳು ಮತ್ತು ಮರುಪಾವತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
[Google pay]
ಈಗಿನ ಡಿಜಿಟಲ್ ಯುಗದಲ್ಲಿ ಹಣಕಾಸು ವಹಿವಾಟುಗಳು ಕೇವಲ ಕೆಲವು ಕ್ಲಿಕ್ಗಳಲ್ಲಿ ಸಾಧ್ಯವಾಗುತ್ತವೆ. ಗೂಗಲ್ ಪೇ ಒಂದು ಜನಪ್ರಿಯ ಡಿಜಿಟಲ್ ಆಗಿರುವುದು ಮಾತ್ರವಲ್ಲದೆ, ಈಗ ವೈಯಕ್ತಿಕ ಸಾಲಗಳನ್ನು ಒದಗಿಸುವ ವೇದಿಕೆಯಾಗಿಯೂ ಕೂಡ ಮುನ್ನಡೆಯನ್ನು ಕಾಯ್ದುಕೊಂಡಿದೆ. ಗೂಗಲ್ ಪೇ ಮೂಲಕ 30,000 ರೂಪಾಯಿಯಿಂದ 10 ಲಕ್ಷದವರೆಗೆ ಸಾಲವನ್ನು ಸುಲಭವಾಗಿ ಪಡೆಯಬಹುದು. ಇಲ್ಲಿ ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ನಿಯಮಗಳು, ಅರ್ಜಿಯ ಪ್ರಕ್ರಿಯೆಗಳು, ಬಡ್ಡಿದರ EMI ಕಟ್ಟುವುದು ಮತ್ತು ಇನ್ನಿತರ ಮುಖ್ಯ ಮಾಹಿತಿಗಳನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಗೂಗಲ್ ಪೇ ವೈಯಕ್ತಿಕ ಸಾಲ ಇದರ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ.
[Google pay]
ಗೂಗಲ್ ಪೇ ಭಾರತದಲ್ಲಿ ಹಲವಾರು ಪ್ರಮುಖ ಹಣಕಾಸು ಸಂಸ್ಥೆಗಳಾದ ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್, ಡಿಎಂಐ ಫೈನಾನ್ಸ್ ಹಾಗೂ ಇನ್ನಿತರ ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಹೊಂದಿದ್ದು ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯವನ್ನು ದೊರಕಿಸುತ್ತದೆ. ಈ ಸಾಲವನ್ನು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಮೂಲಕ ಪಡೆಯಬಹುದಾಗಿದೆ. ಯಾವುದೇ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ. ಸಾಲದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೂ ಮರುಪಾವತಿಯು ಸ್ವಯಂ ಚಾಲಿತವಾಗಿ ಇಎಂಐ ರೂಪದಲ್ಲಿ ಪ್ರಕ್ರಿಯೆ ನಡೆಯುತ್ತದೆ.
ಗೂಗಲ್ ಪೇ ಸಾಲದ ಮುಖ್ಯ ಲಕ್ಷಣಗಳಾವುವು?
[Google pay]
• ಸಾಲದ ಅವಧಿ ಆರು ತಿಂಗಳಿಂದ 60 ತಿಂಗಳವರೆಗೆ, ಅಂದರೆ ಐದು ವರ್ಷಗಳವರೆಗೆ.
• ಸಾಲದ ಮೊತ್ತ 30,000 ದಿಂದ 10 ಲಕ್ಷದವರೆಗೆ ದೊರೆಯುತ್ತದೆ.
• ಪ್ರಕ್ರಿಯೆ ಸಂಪೂರ್ಣ ಡಿಜಿಟಲ್, ಅಂದರೆ ಕಾಗದ ರಹಿತ ಪ್ರಕ್ರಿಯೆ ಇರುತ್ತದೆ.
• ಬಡ್ಡಿದರ ವಾರ್ಷಿಕ ಶೇಕಡ 10.5% ಇಂದ 15 ಪರ್ಸೆಂಟ್, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಇರುತ್ತದೆ.
• ಪೂರ್ವ ಪಾವತಿ ಸೌಲಭ್ಯ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಲವನ್ನು ಮುಂಚಿತವಾಗಿ ಮುಚ್ಚಲು ಅವಕಾಶವಿದೆ; ಇದಕ್ಕೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು.
ಗೂಗಲ್ ಪೇ ಸಾಲಕ್ಕೆ ಅರ್ಹತೆ ಮತ್ತು ಮಾನದಂಡಗಳೇನು?
[Google pay]
ಗೂಗಲ್ ಪೇ ಮೂಲಕ ಸಾಲ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
• ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 59 ವರ್ಷ ಆಗಿರಬೇಕು.
• ನಾಗರಿಕತ್ವ ಭಾರತೀಯ ನಾಗರೀಕನಾಗಿರಬೇಕು.
• ಉತ್ತಮ ಕ್ರೆಡಿಟ್ ಸ್ಕೋರ್ ಅಂದರೆ CIBIL ಸ್ಕೋರ್ ಸಾಮಾನ್ಯವಾಗಿ 700, ಅಥವಾ ಅದಕ್ಕಿಂತ ಹೆಚ್ಚು ಇರಬೇಕು.
• ಆದಾಯವು ಸ್ಥಿರ ಮತ್ತು ನಿಯಮಿತ ಆದಾಯದ ಮೂಲಗಳನ್ನು ಹೊಂದಿರಬೇಕು, ಅಂದರೆ, ವೇತನದಾರರು ಅಥವಾ ಸ್ವಯಂ ಉದ್ಯೋಗಿಗಳು.
• ಕೆ ವೈ ಸಿ ದಾಖಲೆಗಳು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿಳಾಸದ ಪುರಾವೆ ಹಾಗೂ ಆದಾಯದ ದಾಖಲೆಗಳು ಹೊಂದಿರಬೇಕು. ಉದಾಹರಣೆಗೆ, ಪೇ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ ಮೆಂಟ್ ಹೊಂದಿರಬೇಕು.
• ಚಾಲ್ತಿಯಲ್ಲಿರುವ ಭಾರತೀಯ ಬ್ಯಾಂಕ್ ಖಾತೆಯನ್ನು ಗೂಗಲ್ ಪೇಗೆ ಲಿಂಕ್ ಮಾಡಿರಬೇಕು.
ಗೂಗಲ್ ಪೇ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
[Google pay]
ಗೂಗಲ್ ಪೇ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸರಳವಾಗಿದೆ. ಈ ಕೆಳಗಿನ ಹಂತಗಳನ್ನು ಓದಿ ತಿಳಿದುಕೊಳ್ಳಿ.
• ಗೂಗಲ್ ಪೇ ಆಪ್ ಓಪನ್ ಮಾಡಿ, ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಆಪ್ ನ ಇತ್ತೀಚಿನ ಆವೃತ್ತಿಯನ್ನು ಓಪನ್ ಮಾಡಿ.
• ಹೋಂ ಪೇಜ್ ಅಲ್ಲಿರುವ money ವಿಭಾಗದ ಮೇಲೆ ಕ್ಲಿಕ್ ಮಾಡಿ.
• ಸಾಲದ ಆಯ್ಕೆಯನ್ನು ಆರಿಸಿ ಲೋನ್ಸ್ ವಿಭಾಗದಲ್ಲಿ ಲಭ್ಯವಿರುವ ಸಾಲದ ಆಫರ್ ಆಫರ್ಗಳನ್ನು ನೋಡಿ ತಿಳಿದುಕೊಳ್ಳಿ.
• ಸಾಲದ ವಿವರಗಳನ್ನು ಆಯ್ಕೆ ಮಾಡಿ, ನಿಮಗೆ ಬೇಕಾದ ಸಾಲದ ಮೊತ್ತ ಮತ್ತು ಅವಧಿಯನ್ನು ಸೆಲೆಕ್ಟ್ ಮಾಡಿ.
• ಕೆ ವೈ ಸಿ ಪೂರ್ಣಗೊಳಿಸಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳು ಡಿಜಿಟಲ್ ಆಗಿ ಅಪ್ಲೋಡ್ ಮಾಡಬೇಕು.
• ಸಾಲ ಒಪ್ಪಂದಕ್ಕೆ ಇ-ಸಹಿ, ಸಾಲದ ಒಪ್ಪಂದವನ್ನು ಪರಿಶೀಲಿಸಿ ಮತ್ತು ಇ-ಸಹಿ ಮಾಡಿ.
• ಇಎಂಐ ಶೆಟ್ಟರ್ ಮೇಲೆ ಕ್ಲಿಕ್ ಮಾಡಿ ಸ್ವಯಂ ಚಾಲಿತ ಇಎಂಐ ಕಡಿತಕ್ಕಾಗಿ ಈ ಮ್ಯಾನಿಡೆಡ್ ಅಥವಾ ಎನ್ ಎ ಸಿ ಎಚ್ ಸೆಟ್ ಮಾಡಿಕೊಳ್ಳಿ.
• ಅನುಮೋದನೆ ಮತ್ತು ವಿವರಣೆ ಅರ್ಹತೆ ಇದ್ದರೆ ಸಾಲವನ್ನು 24 ರಿಂದ 48 ಗಂಟೆಗಳ ಒಳಗಡೆ ಅನುಮೋದಿಸಲಾಗುವುದು ಮತ್ತು ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
ಗೂಗಲ್ ಪೇ ಮೂಲಕ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡುವುದು ಹೇಗೆ?
[Google pay]
ಗೂಗಲ್ ಪೇ ಮೂಲಕ ಪಡೆದ ಸಾಲದ ಮರುಪಾವತಿಯು ಸ್ವಯಂ ಚಾಲಿತವಾಗಿ, ಅಂದರೆ, ಇಎಂಐ ಕಡಿತದ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ.
• ಇಎಂಐ ಕಡಿತ ಅಂದರೆ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಈ ಎಂಐ ಮೊತ್ತವನ್ನು ನೀವು ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಹಣವನ್ನು ಪ್ರತಿ ತಿಂಗಳು ಕಟ್ ಮಾಡಿಕೊಳ್ಳಲಾಗುತ್ತದೆ.
• ಅಕೌಂಟ್ನಲ್ಲಿ ನಲ್ಲಿ ಬ್ಯಾಲೆನ್ಸ್ ಎಷ್ಟು ಇರಬೇಕು ಅಂದರೆ ಇಎಂಐ ಕಡಿತದ ದಿನಾಂಕದಂದು ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಬೇಕು. ಇಲ್ಲದಿದ್ದರೆ ತಡವಾದ ಶುಲ್ಕ, ಅಂದರೆ ಚೆಕ್ ಬೌನ್ಸ್ ಅಥವಾ ತಂಡವನ್ನು ವಿಧಿಸಲಾಗಬಹುದು.
• ಮಾಹಿತಿ ಲಭ್ಯತೆ: ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಮರುಪಾವತಿ ಆರಂಭದ ದಿನಾಂಕ, ಇಎಂಐ ಮತ್ತು ಕೊನೆಯ ದಿನಾಂಕದ ವಿವರಣೆಯನ್ನು ಗೂಗಲ್ ಪೇ ಆಪ್ ನಲ್ಲಿ ಒದಗಿಸಲಾಗುತ್ತದೆ.
• ಕೆಲವರು ಸಾಲವನ್ನು ಮುಂಚಿತವಾಗಿ ಮುಚ್ಚಲು ಅವಕಾಶ ನೀಡುತ್ತಾರೆ, ಆದರೆ ಪೂರ್ವ ಪಾವತಿ ಶುಲ್ಕವನ್ನು ನೋಡಿ ತಿಳಿದುಕೊಳ್ಳಿ.
ಈ ಗೂಗಲ್ ಪೇ ಸಾಲದಿಂದ ಆಗುವ ಪ್ರಯೋಜನಗಳು ಏನು?
[Google pay]
• ಬೇಗ ಅನುಮೋದನೆ, ಕೆಲವೇ ಗಂಟೆಗಳಲ್ಲಿ ಸಾಲದ ಅನುಮೋದನೆ ಆಗುತ್ತದೆ.
• ಕಾಗದರಹಿತ ಪ್ರಕ್ರಿಯೆ ಎಲ್ಲವೂ ಡಿಜಿಟಲ್ ಆಗಿರುತ್ತದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅವಶ್ಯಕತೆ, ಅಗತ್ಯ ಇರುವುದಿಲ್ಲ.
• ಗೂಗಲ್ ಪೇ ಗೌಪ್ಯತೆ ನೀತಿಗೆ ಬದ್ಧವಾಗಿದ್ದು ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ಇಡುತ್ತದೆ.
• ಸಾಲದ ಮೊತ್ತ ಹಾಗೂ ಅವಧಿಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.
ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳು.
[Google pay]
• ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರಕ್ಕೆ ಕಾರಣವಾಗುತ್ತಿದೆ. ಗೂಗಲ್ ಪೇ ಪೇನಲ್ಲಿ ಟ್ರಾನ್ಸ್ಯೂನಿಯನ್ ಯೂನಿಯನ್ ಸಿಬಿಲ್ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರನ್ನು ಉಚಿತವಾಗಿ ಪರಿಶೀಲನೆ ಮಾಡಬಹುದು.
• ದಂಡದ ಶುಲ್ಕ ಇಎಂಐ ಪಾವತಿಯಲ್ಲಿ ವಿಳಂಬವಾದರೆ ಹೆಚ್ಚುವರಿ ಶುಲ್ಕ ಅಥವಾ ದಂಡವನ್ನು ಕಟ್ಟಬೇಕಾಗುತ್ತದೆ.
• ಸಾಲದಾತ ಸಂಪರ್ಕ, ಸಾಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಗೂಗಲ್ ಪೇ ಸಾಲದಾತರ ಡಿಎಂಐ ಫೈನಾನ್ಸ್ ಗಳಂತಹ ಸಂಸ್ಥೆಗಳನ್ನು ಸಂಪರ್ಕಿಸಬಹುದು ಗ್ರಾಹಕ ಸೇವಾ ಈಮೇಲ್ customercare@dmifinance.in.
• ಗೂಗಲ್ ಪೇ ಸಾಲವು ಕೇವಲ ವೈಯಕ್ತಿಕ ಅಗತ್ಯಗಳಿಗೆ ಕೊಡಲಾಗುತ್ತದೆ, ವ್ಯಾಪಾರ ಸಾಲಕ್ಕೆ ಪ್ರತ್ಯೇಕ ಆಯ್ಕೆಗಳಿವೆ.
ಗೂಗಲ್ ಪೇ ಸಾಲದ ಇಎಂಐ ನ ಉದಾಹರಣೆಗಳು.
[Google pay]
ಉದಾಹರಣೆಗೆ, ನೀವು 5 ಲಕ್ಷ ಸಾಲವನ್ನು ಮೂರು ವರ್ಷಗಳ ಅವಧಿಗೆ 12 ಶೇಕಡಾ ವಾರ್ಷಿಕ ಬಡ್ಡಿದರದಲ್ಲಿ ಪಡೆದಿದ್ದರೆ, ತಿಂಗಳಿಗೆ ಇಎಂಐ ಸರಿಸುಮಾರು 16,607 ರೂಪಾಯಿ ಕಟ್ಟಬೇಕಾಗುತ್ತದೆ.
ಒಟ್ಟು ಬಡ್ಡಿ ಸರಿಸುಮಾರು 97,852 ರೂಪಾಯಿಗಳು.
ಅಂದರೆ, ಒಟ್ಟು ಮರುಬಾವತಿಯ ಮೊತ್ತ 5,97,852 ರೂಪಾಯಿ.
ಇದು ಅಂದಾಜಿನ ಲೆಕ್ಕವಾಗಿದ್ದು, ನಿಖರವಾದ ಇಎಂಐ ಮತ್ತು ಬಡ್ಡಿ ದರವು ಸಾಲದಾತರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬದಲಾವಣೆ ಆಗುತ್ತದೆ.
ಇದನ್ನು ಓದಿ: ಎಸ್ ಎಸ್ ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ.
ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಸಿಹಿ ಸುದ್ದಿ. ಮೂರು ಕಂತಿನ ಹಣ ಒಟ್ಟಿಗೆ ಬಿಡುಗಡೆ.
ಗೂಗಲ್ ಪೇ ಸಾಲಕ್ಕೆ ಸಂಬಂಧಿಸಿದ ಸಲಹೆಗಳು ಇಲ್ಲಿವೆ.
[Google pay]
- ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನೀವು ಗೂಗಲ್ ಪೇನಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಬೇಕು. ಕಡಿಮೆ ಸ್ಕೋರ್ ಇದ್ದರೆ ಅದನ್ನು ಸುಧಾರಿಸಲು ನೀವು ಕ್ರಮವನ್ನು ತೆಗೆದುಕೊಳ್ಳಬೇಕು.
- ಇ ಎಂ ಐ ಪಾವತಿಗಳು ನಿಮ್ಮ ಮಾಸಿಕ ಬಜೆಟ್ಟಿಗೆ ಹೊಂದಿಕೆಯಾಗುವಂತೆ ಸಾಲದ ಮೊತ್ತ ಹಾಗೂ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ಸಾಲದಾತರ ಮಾಹಿತಿ ಕೊಡಬೇಕು. ಸಾಲದ ಒಪ್ಪಂದವನ್ನು ಎಚ್ಚರಿಕೆಯಿಂದ ಓದಿ, ಯಾವುದೇ ಗುಪ್ತ ಶುಲ್ಕಗಳನ್ನು ಪರಿಶೀಲಿಸಿ.
- ತುರ್ತು ಫಂಡ್ ಇ ಎಂ ಐ ಕಡಿತದ ಸಮಯದಲ್ಲಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟಿರಬೇಕು.
ಸ್ನೇಹಿತರೆ, ಇತ್ತೀಚಿನ ವರದಿಗಳ ಪ್ರಕಾರ, ಗೂಗಲ್ ಪೇ ಭಾರತದಲ್ಲಿ ತನ್ನ ಸಾಲದ ಸೇವೆಯನ್ನು ವಿಸ್ತರಣೆ ಮಾಡುತ್ತಿದೆ. 2024ರಲ್ಲಿ, ಗೂಗಲ್ ಆದಿತ್ಯ ಬಿರ್ಲಾ ಫೈನಾನ್ಸ್ ಮತ್ತು ಮುತ್ತೂಟ್ ಫೈನಾನ್ಸ್ ಗಳಂತಹ ಸಂಸ್ಥೆಗಳೊಂದಿಗೆ ಸಹಕರಿಸಿ ವೈಯಕ್ತಿಕ ಹಾಗೂ ಚಿನ್ನದ ಆಧಾರದ ಸಾಲುಗಳನ್ನು ಕೊಡುವ ಯೋಜನೆಯನ್ನು ಘೋಷಿಸಿತು. ಇದು ಗೂಗಲ್ ಪೇ ಹಣಕಾಸು ಸೇವೆಗಳ ವಿಸ್ತರಣೆಯ ಒಂದು ಭಾಗ ಭಾಗವಾಗಿದೆ; ಇದು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ.
ಕೊನೆಯದಾಗಿ ಹೇಳುವುದೇನೆಂದರೆ, ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲವು ತ್ವರಿತ, ಸುರಕ್ಷಿತ ಹಾಗೂ ಸುಲಭವಾದ ಹಣಕಾಸು ಪರಿಹಾರ ಇದಾಗಿದೆ. ಇದರ ಡಿಜಿಟಲ್ ಪ್ರಕ್ರಿಯೆ ಕಡಿಮೆ ದಾಖಲೆಗಳು ಮತ್ತು ವೇಗದ ಅನುಮೋದನೆಯು ತುರ್ತು ಹಣಕಾಸಿನ ಅಗತ್ಯಗಳಿಗೆ ತುಂಬಾ ಉಪಯುಕ್ತವಾಗಿದೆ, ಆದರೆ ಸಾಲವನ್ನು ಜವಾಬ್ದಾರಿತವಾಗಿ ಬಳಸಿ ಹಾಗೂ ಈ ಎಂಐ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರನ್ನು ಉತ್ತಮಗೊಳಿಸಿ, ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗೂಗಲ್ವನ್ನು ಪರಿಶೀಲಿಸಿ ಅಥವಾ ಸಾಲದಾತರ ಗ್ರಾಹಕ ಸೇವೆಯನ್ನು ಸಂಪರ್ಕಿಸಿ.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.