In today’s digital age, it’s in your hands to see the details of your land.

In today’s digital age, it’s in your hands to see the details of your land.

ಈಗಿನ ಡಿಜಿಟಲ್ ಯುಗದಲ್ಲಿ ನಿಮ್ಮ ಭೂಮಿಯ ವಿವರ ನೋಡುವುದು ನಿಮ್ಮ ಕೈಯಲ್ಲೇ ಇದೆ.

ಮೊಬೈಲಿನಲ್ಲೇ ಗ್ರಾಮ ನಕ್ಷೆ ಮತ್ತು ಸರ್ವೆ ನಂಬರ್ ನೋಡಬಹುದು,

ಹೌದು, ಇದು ನಿಜ. ಈಗ ನಿಮ್ಮ ಮನೆಯಲ್ಲಿ ಕುಳಿತು ನಿಮ್ಮ ಭೂಮಿಯ ನಕ್ಷೆಯನ್ನು ನೋಡಬಹುದು. ಇಲ್ಲಿದೆ ಸರಳ ವಿಧಾನ.

ನಿಮ್ಮ ಭೂಮಿ ಎಲ್ಲಿದೆ? ಸರ್ವೇ ನಂಬರ್ ಯಾರದಾಗಿದೆ ಎಂಬ ಪ್ರಶ್ನೆಗಳು ಈಗ ಸಾಮಾನ್ಯವಾಗಿ ಕೇಳು ಬರುತ್ತಿವೆ. ಅಂತಹ ಅನುಮಾನಗಳನ್ನು ಈಗ ಸುಲಭವಾಗಿ ದೂರ ಮಾಡಬಹುದು.

ಈಗಿನ ಡಿಜಿಟಲ್ ಯುಗದಲ್ಲಿ ಕಚೇರಿಗಳಿಗೆ ಅಲಿಯುವುದು ಕೊನೆಗೊಳ್ಳುವ ದಿನಗಳು ಹತ್ತಿರದಲ್ಲೇ ಇದೆ. ಕರ್ನಾಟಕ ಸರ್ಕಾರವು ಈಗ ತಂತ್ರಜ್ಞಾನವನ್ನು ಬಳಸಿಕೊಂಡು ಭೂ ಸಂಬಂಧಿತ ಮಾಹಿತಿಯನ್ನು ಆನ್ಲೈನಿನಲ್ಲಿ ನೀಡಲು ಹಲವಾರು ಆಪ್ ಆಪ್‌ಗಳನ್ನು ಹಾಗೂ ವೆಬ್ಸೈಟ್ಗಳನ್ನು ನಿರ್ಮಾಣ ಮಾಡಿ ಅಭಿವೃದ್ಧಿ ಮಾಡಿದೆ.

WhatsApp Group Join Now
Telegram Group Join Now       

ಹಾಗಾದರೆ ಇದನ್ನು ಬಳಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯ ಸರ್ಕಾರ ಇಲಾಖೆಯವರು ದಿಶಾಂಕ್ ಎಂಬ ಆಪನ್ನು ಅಭಿವೃದ್ಧಿಪಡಿಸಿದ್ದಾರೆ. ಗೂಗಲ್ ಮ್ಯಾಪ್ ನೊಂದಿಗೆ ಈ ಆಪನ್ನು ಜೋಡಣೆ ಮಾಡಲಾಗಿದೆ. ನಿಮ್ಮ ಭೂಮಿಯ ನಕ್ಷೆ, ಸರ್ವೆ ನಂಬರ್, ಮಾಲೀಕನ ಹೆಸರು, ವಿಸ್ತೀರ್ಣ, ಎಷ್ಟು ಬಳಕೆಯ ತಾತ್ಪರ್ಯ, ಹಾಗೂ ಸರ್ಕಾರಿ ಆಸ್ತಿಗಳ ವಿವರಗಳು, ಎಲ್ಲವನ್ನು ಈ ಆಪ್ ಮೂಲಕ ನೋಡಬಹುದು.

ಈ ಆಪ್ ಅನ್ನು ಬಳಸುವುದು ಹೇಗೆ?

  • ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ದಿಶಂಕ್ ಆಪ್ ಅನ್ನು ಸರ್ಚ್ ಮಾಡಿ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು.
  • ಆಪ್ ಓಪನ್ ಮಾಡಿ, ಬಳಿಕ ಜಿಪಿಎಸ್ ಆನ್ ಮಾಡಿಕೊಳ್ಳಬೇಕು.
  • ಬಳಿಕ ಸರ್ವೇ ನಂಬರ್ ಸರ್ಚ್ ಮಾಡಿ.
  • ನಿಮ್ಮ ಜಿಲ್ಲೆ, ತಾಲೂಕು ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ.

ತಕ್ಷಣವೇ ನಿಮ್ಮ ಜಮೀನಿನ ವಿವರಗಳು ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಗೋಚರವಾಗುತ್ತವೆ.

WhatsApp Group Join Now
Telegram Group Join Now       

ಭೂಮಿ ಪೋರ್ಟಲನ್ನು ಕರ್ನಾಟಕ ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇಲ್ಲಿಗೆ ಹೋಗಿ ಆನ್ಲೈನ್ ಮೂಲಕ ಆರ್ ಟಿ ಸಿ ಎಂ ಆರ್ ಆದಾಯ ನಕ್ಷೆಗಳಂತ ದಾಖಲೆಗಳನ್ನು ಪಡೆಯಬಹುದು; ಇದು ರೈತರಿಗೆ, ಸಾಮಾನ್ಯ ನಾಗರಿಕರಿಗೆ ಅನುಕೂಲವಾಗುವ ಈ ಪೋರ್ಟಲ್ಗೆ ಪ್ರವೇಶ ಮಾಡುವುದು ತುಂಬಾ ಸರಳ.

ಐಆರ್ಟಿಸಿ ಪೋರ್ಟಲ್ ಅನ್ನು ಬಳಸುವ ವಿಧಾನ.

ಗೂಗಲ್ ಕ್ರೋಮ್ ಗೆ ಹೋಗಿ RTC & MR ಅಥವಾ i-RTC ಎಂದು ಸರ್ಚ್ ಮಾಡಿ, ಇದರ ಮೇಲೆ ಕ್ಲಿಕ್ ಮಾಡಿ.

ಜಿಲ್ಲೆ, ತಾಲೂಕು, ಹೋಬಳಿ, ಸರ್ವೆ ನಂಬರ್ ಆಯ್ಕೆ ಮಾಡಿ.

ಭೂಮಿಯ ಮಾಲೀಕನ ಹೆಸರು ನಕ್ಕೆ ಮತ್ತು ದಾಖಲೆಗಳು ಡಬ್ಬೆವಾಗುತ್ತದೆ.

ತಾವು ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಬಹುದು; ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.

ಲ್ಯಾಂಡ್ ರೆಕಾರ್ಡ್, ಡಿಜಿಟಲ್ ಭೂಮಿ ದರ್ಶನ

ಇದು ಕರ್ನಾಟಕ ಸರ್ಕಾರದ ಅಧಿಕೃತ ಆನ್ಲೈನ್ ಪೋರ್ಟಲ್ ಆಗಿದೆ. ಈ ಪೋರ್ಟಲ್‌ನಲ್ಲಿ ಸರ್ವೆ ನಂಬರ್‌ಗಳು, ಗ್ರಾಮ ನಕ್ಷೆಗಳು, ಮಾಲೀಕನ ಹೆಸರು, ಭೂಮಿಯ ಇತಿಹಾಸ ಹಾಗೂ ಇತರೆ ದಾಖಲೆಗಳು ಇಲ್ಲಿವೆ. ಈ ಪೋರ್ಟಲ್ ಬಳಕೆದಾರರ ಸ್ನೇಹಿತ ಆಗಿದೆ. ಇಲ್ಲಿ ಈ ಎಲ್ಲಾ ಮಾಹಿತಿಗಳು ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ದೊರೆಯುತ್ತವೆ.

ಈ ಮಾಹಿತಿ ತಮಗೂ ಮತ್ತು ನಮಗೆ ಏಕೆ ಮುಖ್ಯವಾಗಿದೆ?

ಯಾರೇ ಆಗಲಿ ಜಮೀನು ಖರೀದಿಸುವ ಮೊದಲು ಪರಿಶೀಲನೆ ಮಾಡಬಹುದು.

ಹಕ್ಕು ಸಂಬಂಧಿತ ವಿವಾದಗಳಿಂದ ಮುಕ್ತಿ ದೊರೆಯುವುದು

ಸರ್ಕಾರಿ ಯೋಜನೆಗಳ ಅನುಕೂಲ ಪಡೆಯಬಹುದು ಮತ್ತು ಅಗತ್ಯ ದಾಖಲೆಗಳನ್ನು ತಯಾರಿಸಬಹುದು.

ಈಗ ಕಂದಾಯ ಕಚೇರಿಗೆ ಹೋರಾಡಬೇಕಿಲ್ಲ. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಬೇರೆ ಯಾರ ಸಹಾಯವಿಲ್ಲದೆ ಭೂ ನಕ್ಷೆ, ಸರ್ವೆ ನಂಬರ್ ಮತ್ತು ಭೂ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು. ಇದೊಂದು ಹೊಸ ಪ್ರಯತ್ನವಾಗಿದೆ. ಕರ್ನಾಟಕ ಸರ್ಕಾರ ಡಿಜಿಟಲ್ ಶಕ್ತಿಯ ಪ್ರದರ್ಶನವಿದೆ.

 

Leave a Comment