IPL 2025: Rajasthan Royals win against CSK!
IPL 2025: CSK ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್!
ಐಪಿಎಲ್ 2025ರ ಸಾಲಿನ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡೆದಿದ್ದು, ರೋಚಕ ಪೈಪೋಟಿಯಲ್ಲಿ ರಾಜಸ್ಥಾನ ತಂಡ ಗೆಲುವು ಸಾಧಿಸಿದೆ.
ಗುವಾಹಟಿ: ಐಪಿಎಲ್ 2025ರ ಸಾಲಿನ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡೆದಿದ್ದು, ರೋಚಕ ಪೈಪೋಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವು ಸಿಕ್ಕಿದೆ.
ಐಪಿಎಲ್-2025ರ 11ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 183 ರನ್ ಗಳನ್ನು ಮಾಡಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಗುರಿಯನ್ನು ನೀಡಿತು. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಚೆನ್ನೈ ಬೌಲಿಂಗ್ ಮಾಡಲು ಮುಂದಾಯಿತು. ರಾಜಸ್ಥಾನ 9 ವಿಕೆಟ್‌ಗೆ 182 ರನ್ ಗಳಿಸಿತು. ರಾಜಸ್ಥಾನ ನೀಡಿದ 183 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ 176 ರನ್ ಗಳಿಸುವಷ್ಟರಲಿ ಪಂದ್ಯ ಕೈ ಚೆಲ್ಲಿತು.
ಆರ್‌ಆರ್ ತಂಡದ ನಿತೀಶ್ ರಾಣಾ 36 ಬೌಲ್ ಗಳಲ್ಲಿ 81 ರನ್ ಸಂಪಾದಿಸಿದರು. ನಾಯಕ ರಿಯಾನ್ ಪರಾಗ್ 37, ಸಂಜು ಸ್ಯಾಮ್ಸನ್ 20 ರನ್ ಗಳಿಸಿದರು. ಖಲೀಲ್ ಅಹ್ಮದ್, ನೂರ್ ಅಹ್ಮದ್ ಮತ್ತು ಮಥೀಶ್ ಪತಿರಾನ ಇಬ್ಬರು ಎರಡ ಎರಡು ವಿಕೆಟ್ ಪಡೆದರು. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರು ಒಂದೊಂದು ವಿಕೆಟ್ ತೆಗೆದರು.
ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 63 ರನ್ ಸಂಪಾದಿಸಿ ಔಟಾದರು. ಅಲ್ಲದೆ ಹಸರಂಗ ವಿಜಯ್ ಶಂಕರ್ 9 ರನ್ ಗಳಿಸಿದರು, ಶಿವಂ ದುಬೆ 18 ರನ್ ಗಳಿಸಿದರು ಮತ್ತು ರಾಹುಲ್ ತ್ರಿಪಾಠಿ 23 ರನ್ ಬಾರಿಸಿ ಅವರು ಔಟ್ ಆದರೂ. ಜೋಫ್ರಾ ಆರ್ಚರ್ ರಚಿನ್ ರವೀಂದ್ರ 0 ಗೆ ಪೆವಿಲಿಯನ್ ದಾರಿ ತೋರಿಸಿದರು. ಎಂಎಸ್ ಧೋನಿ 16 ರನ್ ಗಲಿಸಿ ಔಟ್ ಆದರೂ.