ಪೋಸ್ಟ್ ಆಫೀಸ್ FD 2025 – ಸಂಪೂರ್ಣ ಮಾಹಿತಿ,

ಪೋಸ್ಟ್ ಆಫೀಸ್ FD 2025 – ಸಂಪೂರ್ಣ ಮಾಹಿತಿ,

ಪೋಸ್ಟ್ ಆಫೀಸ್ FD, ಅಂದರೆ Time Deposit (TD), ಇದು ಭಾರತ ಸರ್ಕಾರದ ಭರವಸೆಯೊಂದಿಗೆ ಸಿಗುವ ಹೂಡಿಕೆ ಯೋಜನೆ ಇದಾಗಿದೆ. ಇದು ನಿಮಗೆ ನಿಗದಿತ ಬಡ್ಡಿದರದೊಂದಿಗೆ ಭದ್ರವಾದ ಆದಾಯವನ್ನು ನೀಡುತ್ತದೆ.

ಯಾರೆಲ್ಲಾ ಪೋಸ್ಟ್ ಆಫೀಸ್ FD ಗೆ ಅರ್ಜಿ ಹಾಕಬಹುದು?

ಅರ್ಹ ವ್ಯಕ್ತಿಗಳು:

  • ಭಾರತೀಯ ನಾಗರಿಕರು
  • 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು
  • ಸಂಯುಕ್ತ ಖಾತೆ (Joint Account) ಹೊಂದುವವರು
  • ಅಪ್ರಾಪ್ತವಯಸ್ಕರ ಪರವಾಗಿ ಪೋಷಕರು ಅಥವಾ ಕಾನೂನು ಪಾಲಕರು
  • ಎಚ್ಇಚ್ಎಫ್ (HUF) ಸದಸ್ಯರು (ಕೆಲವೊಮ್ಮೆ)

ಅರ್ಜಿಯ ಪ್ರಕ್ರಿಯೆ – ಹೇಗೆ FD ಹಾಕಬೇಕು?

1. ಆಫ್‌ಲೈನ್ ವಿಧಾನ:

1. ನಿಕಟದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ.

WhatsApp Group Join Now
Telegram Group Join Now       

2. FD ಅರ್ಜಿ ಫಾರ್ಮ್ (Form A) ಪಡೆದು ಭರ್ತಿ ಮಾಡಿ.

3. ಅಗತ್ಯ ದಾಖಲೆಗಳು (ಕೆಳಗೆ ನೋಡಿ) ಜೊತೆಗೆ ಸಲ್ಲಿಸಿ.

WhatsApp Group Join Now
Telegram Group Join Now       

4. ಠೇವಣಿ ಮೊತ್ತವನ್ನು ನಗದು, ಚೆಕ್ ಅಥವಾ ಡಿ.ಡಿ. ಮೂಲಕ ಪಾವತಿಸಿ.

5. ಪಾವತಿ ಸ್ವೀಕರಿಸಿದ ನಂತರ “TD Certificate” ನೀಡಲಾಗುತ್ತದೆ. ಅದನ್ನು ಪಡೆದುಕೊಳ್ಳಿ.

2. ಆನ್‌ಲೈನ್ ವಿಧಾನ:

1. ಇ-ಬ್ಯಾಂಕಿಂಗ್ ಸಕ್ರಿಯಮಾಡಿಕೊಂಡಿರಬೇಕು

2. ebanking.indiapost.gov.in ಅನ್ನು ಲಾಗಿನ್ ಮಾಡಿ.

3.ಸಾಮಾನ್ಯ ಸೇವೆಗಳು [General Services] ಅನ್ನು ಆಯ್ಕೆ ಮಾಡಿ,ಸೇವಾ ವಿನಂತಿ [Service Request] ಮೇಲೆ ಕ್ಲಿಕ್ ಮಾಡಿ, ಹೊಸ ವಿನಂತಿ ಮೇಲೆ ಕ್ಲಿಕ್ [New Request] ಆಯ್ಕೆಮಾಡಿ.

4. Time Deposit ಆಯ್ಕೆ ಮಾಡಿ ಮತ್ತು ಸೂಚನೆಯಂತೆ ಪೂರ್ಣಗೊಳಿಸಿ.

ಇದನ್ನೂ ಓದಿ: ಜೂನ್ ಒಂದರಿಂದ ಕೇಂದ್ರದ ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆಯ ಅಡಿಯಲ್ಲಿ ಹೊಸ ನಿಯಮ, ಇವರಿಗೆ ಮಾತ್ರ 300 ಸಬ್ಸಿಡಿ ದೊರೆಯುತ್ತದೆ.

ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್ (ವೈಯಕ್ತಿಕ ಗುರುತು)

ಪ್ಯಾನ್ ಕಾರ್ಡ್ (ಹಣಕಾಸು ಗುರುತು)

ವಿಳಾಸದ ಪುರಾವೆ (ವಿದ್ಯುತ್ ಬಿಲ್/ಬ್ಯಾಂಕ್ ಸ್ಟೇಟ್ಮೆಂಟ್)

2 ಪಾಸ್‌ಪೋರ್ಟ್ ಫೋಟೋ

ಠೇವಣಿ ಅವಧಿಗಳು ಮತ್ತು ಬಡ್ಡಿದರಗಳು (2025 – Q1)

ಸೂಚನೆ: ಬಡ್ಡಿದರಗಳು ವರ್ಷಕ್ಕೆ ಲೆಕ್ಕಿಸಲಾಗುತ್ತವೆ. ಪ್ರತಿ ವರ್ಷ ಬಡ್ಡಿ, ಪಾವತಿ ಆಗುತ್ತದೆ.

ಕನಿಷ್ಠ ಠೇವಣಿ ಮೊತ್ತ:

₹1,000 (ಇದರ ಗುಣಾಕಾರದಲ್ಲಿ FD ಹಾಕಬಹುದು)

ಹೆಚ್ಚಿನ ಮಿತಿಯಿಲ್ಲ

FD ಲಾಭಗಳು:

1. ಸುರಕ್ಷಿತ ಹೂಡಿಕೆ: ಕೇಂದ್ರ ಸರ್ಕಾರದ ಭರವಸೆ.

2. ಸ್ಥಿರ ಆದಾಯ: ಬಡ್ಡಿದರ ನಿಗದಿತವಾಗಿರುತ್ತದೆ.

3. ಹಚ್ಚಿಗೆ ಬಡ್ಡ ದರ (SCSS): ಹಿರಿಯರಾದ ನಾಗರಿಕರಿಗೆ Senior Citizens Scheme ಇದರ ಮೂಲಕ 8.2% ಬಡ್ಡಿ ದೊರೆಯುತ್ತದೆ.

4. ತೆರಿಗೆ ವಿನಾಯಿತಿ: 5 ವರ್ಷ FD ಮೇಲೆ ₹1.5 ಲಕ್ಷದವರೆಗೆ 80C ಅಡಿಯಲ್ಲಿ ವಿನಾಯಿತಿ ಸಿಗುತ್ತದೆ.

5. ಪ್ರೀಮ್ಯಾಚರ್ ವಿತ್‌ಡ್ರಾ: 6 ತಿಂಗಳ ನಂತರ ಮುಕ್ತಾಯ ಮಾಡಬಹುದಾದ ಸೌಲಭ್ಯ.

6. Transfer Facility: ಖಾತೆಗಳನ್ನು ಒಂದು PO ನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದಾಗಿದೆ.

7. ನಾಮನಿರ್ದೇಶನ: ಮರಣೋತ್ತರ ಹಣ ಪಡೆದವರಿಗೆ ಹೆಸರಿಡಬಹುದಾಗಿದೆ.

FD ಮುಚ್ಚುವಿಕೆ ಅಥವಾ ಹಣ ಹಿಂಪಡೆಯುವುದು ಹೇಗೆ?

6 ತಿಂಗಳ ನಂತರ ಮುಚ್ಚಬಹುದು.

6 ತಿಂಗಳು – 1 ವರ್ಷದ ಒಳಗೆ ಮುಚ್ಚಿದರೆ 4% ಬಡ್ಡಿದರ ಮಾತ್ರ.

ಅದರ ನಂತರ ಪ್ರಸ್ತುತ ಬಡ್ಡಿದರ ಅನ್ವಯ.

ಸಮಾರೋಪ:

ಪೋಸ್ಟ್ ಆಫೀಸ್ FD 2025, ಸಣ್ಣ ಹೂಡಿಕೆದಾರರಿಂದ ನಿವೃತ್ತಿ ಯೋಜನೆ ಬಯಸುವವರು ಅಥವಾ ಸುರಕ್ಷಿತ ಆದಾಯ ಬಯಸುವ ಎಲ್ಲರಿಗೂ ಸೂಕ್ತ. ಬಹಳ ಕಡಿಮೆ ಮೊತ್ತದಿಂದ ಆರಂಭಿಸಿ, ಸರ್ಕಾರದ ಭದ್ರತೆ, ಸ್ಥಿರ ಬಡ್ಡಿ ಮತ್ತು ತೆರಿಗೆ ವಿನಾಯಿತಿಯಂತಹ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ.

ಸ್ನೇಹಿತರೆ ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment