ರೇಷನ್ ಕಾರ್ಡ್ ತಿದ್ದುಪಡಿ ಆರಂಭ
ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಾಗಿದೆಯೇ, ಹಾಗಾದರೆ ತಿದ್ದುಪಡಿ ಆರಂಭವಾಗಿದೆ ಈ ವಿಷಯದ ಕುರಿತು ಇಲ್ಲಿ ಸಂಪೂರ್ಣವಾಗಿ ಕೊಡಲಾಗಿದೆ ಓದಿ ತಿಳಿದುಕೊಳ್ಳಿ.
ಕರ್ನಾಟಕ ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಕೊಡಲಾಗುವ ರೇಷನ್ ಕಾರ್ಡ್ ಇಂದು ಸಾಮಾನ್ಯ ಕುಟುಂಬ ವರ್ಗಕ್ಕೆ ಅತ್ಯಂತ ಮುಖ್ಯ ದಾಖಲೆಗಳಲ್ಲಿ ಇದು ಒಂದಾಗಿದೆ ಗ್ಯಾಸ್ ಸಬ್ಸಿಡಿ ಆಗಿರಬಹುದು ಅಥವಾ ಆಹಾರ ಧಾನ್ಯಗಳು ಮತ್ತು ವಿವಿಧ ಸರ್ಕಾರದ ಸೌಲಭ್ಯಗಳು ಅಂದರೆ ಸರಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಈ ಕಾರ್ಡ್ ಬಹುಮುಖ್ಯ ವಾಗಿದೆ ಇದರಿಂದ ಇದರಲ್ಲಿರುವ ಮಾಹಿತಿಗಳು ಸರಿಯಾಗಿ ನಿಖರವಾಗಿ ಇರಬೇಕು ತಪ್ಪಾದ ಹೆಸರು ಆಗಿದ್ದರೆ ಅಥವಾ ವಿಳಾಸ ಸರಿಯಾಗಿ ಇಲ್ಲದಿದ್ದರೆ ಕುಟುಂಬ ಸದಸ್ಯರ ವಿವರಗಳು ಸರಿಯಾಗಿ ಇಲ್ಲದೆ ಹೋಗಿದ್ದರೆ ಮತ್ತು ವಯಸ್ಸು ಅಥವಾ ಹೊಸ ಸದಸ್ಯರನ್ನು ಕಾರ್ಡ್ ನಲ್ಲಿ ಸೇರಿಸುವ ಅಗತ್ಯ ಬಂದಾಗ ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಅವಶ್ಯಕ.
ರೇಷನ್ ಕಾರ್ಡ್ ಯಾಕೆ ತಿದ್ದುಪಡಿ ಮಾಡಬೇಕು ಕಾರಣಗಳು ಇಲ್ಲಿವೆ.
ಕುಟುಂಬದಲ್ಲಿ ಆಗುವ ಬದಲಾವಣೆಗಳ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಸಂದರ್ಭ ಬಂದೇ ಬರುತ್ತದೆ. ಇದರಲ್ಲಿ ಬರುವ ಪ್ರಮುಖ ಕಾರಣಗಳು:
ಹೆಸರಿನಲ್ಲಿ ತಪ್ಪು ಅಥವಾ ಅಕ್ಷರಗಳ ದೋಷ,
ವಿಳಾಸದಲ್ಲಿ ಬದಲಾವಣೆಗಳನ್ನು ಮಾಡುವುದು,
ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡುವುದು ಅಂದರೆ ಹುಟ್ಟಿದ ಮಗು ಆಗಿರಬಹುದು ಅಥವಾ ಈಗ ತಾನೇ ಹೊಸದಾಗಿ ಮದುವೆ ಮಾಡಿಕೊಂಡು ಬಂದಿರುವ ಸೊಸೆ ಆಗಿರಬಹುದು. ವಿಳಾಸ ಬದಲಾವಣೆ
ಸದಸ್ಯರ ಮರಣದ ನಂತರ ಅವರ ಹೆಸರನ್ನು delete ಮಾಡುವುದು
ವಯಸ್ಸಿನ ಮಾಹಿತಿ ತಪ್ಪಿರುವುದು
ಫೋಟೋ ಅಪ್ಡೇಟ್
Mobile number ಬದಲಾವಣೆ
ಈ ವಿವರಗಳು ಸರಿಯಾಗಿ ಇಲ್ಲದಿದ್ದರೆ ಸಬ್ಸಿಡಿ ಮತ್ತು ಸರ್ಕಾರಿ ಸೌಲಭ್ಯಗಳು, ಯೋಜನೆಗಳು ನಿಲ್ಲಬಹುದು; ಆದುದರಿಂದ ತಿದ್ದುಪಡಿ ಅತ್ಯಂತ ಅವಶ್ಯಕತೆ.
ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ
2025ರಲ್ಲಿ ಕರ್ನಾಟಕದ ಮೂಲೆಮೂಲೆಗಳಲ್ಲಿ ಇರುವ ನಾಗರಿಕರು ಜನಸಾಮಾನ್ಯರು ಈ ಕೆಳಗಿನ ಎರಡು ಮಾರ್ಗಗಳಿಂದ ತಿದ್ದುಪಡಿ ಮಾಡಬಹುದು:
ಆನ್ಲೈನ್ ಮೂಲಕ ಮಾಡಬಹುದು ಇದು ಅತಿ ವೇಗವಾದ ವಿಧಾನ ಎಂದರೆ ತಪ್ಪಾಗಲಾರದು.
ಸರ್ಕಾರದ Ahara Karnataka Portal ಮುಖಾಂತರ ಮನೆಯಿಂದಲೇ ತಿದ್ದುಪಡಿಗೆ ಅರ್ಜಿಯನ್ನು ಹಾಕಬಹುದು. ನಿಮ್ಮ
ಹತ್ತಿರದ ಹಕ್ಕುದಾರರ ಸೇವಾ ಕೇಂದ್ರದ (HDSC) ಮೂಲಕ
ನಿಮ್ಮಲ್ಲಿ ಯಾರಾದರೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಷ್ಟ ಇದೆ ಎಂದರೆ ಹತ್ತಿರದ ರೇಷನ್ ಅಂಗಡಿ / ತಹಶೀಲ್ದಾರ್ ಕಚೇರಿ / ಹಕ್ಕುದಾರರ ಸೇವಾ ಕೇಂದ್ರ ಅವುಗಳ ಮೂಲಕ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ Ration Card Correction ಮಾಡುವ ವಿಧಾನ
2025ರಲ್ಲಿ ಆನ್ಲೈನ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಆಗಿದೆ, ಈ ಕೆಳಗಿನ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
Step 1:https://ahara.kar.nic.in (ಸರಕಾರಿ ಅಧಿಕೃತ ಪೋರ್ಟಲ್) ಈ ಅಧಿಕೃತ ವೆಬ್ಸೈಟ್ open ಮಾಡಿ.
Step 2: e-Services ಆಯ್ಕೆ ಮಾಡಿಕೊಳ್ಳಿ
ಹೋಮ್ ಪೇಜ್ನಲ್ಲಿ e-Services → Ration Card → “Amendment / Correction” ಮೇಲೆ ಕ್ಲಿಕ್ ಮಾಡುವ ಮೂಲಕ ಮೂಲಕ ಮುಂದುವರಿದು
Step 3: ನಿಮ್ಮ ಪ್ರದೇಶ ವನ್ನು ಆಯ್ಕೆ ಮಾಡಿ
Bengaluru Division
Mysuru Division
Belagavi Division
Kalaburagi Division
ನೀವು ಯಾವ ಜಿಲ್ಲೆಗೆ ಯಾವ ವಿಭಾಗಕ್ಕೆ ಬರುತ್ತದೆಯೋ ಅದನ್ನು ಆಯ್ಕೆ ಮಾಡಕೊಳ್ಳಿ.
Step 4: ನಿಮ್ಮ Ration Card Number ಅನ್ನು ಎಂಟರ್ ಮಾಡಿ
ನಿಮ್ಮ RC Number (PDS ಕಾರ್ಡ್ ಸಂಖ್ಯೆ) ನಮೂದಿಸಿ “Go” ಕ್ಲಿಕ್ ಮಾಡುವ ಮೂಲಕ ಮುಂದುವರಿರಿ
Step 5: ಏನು ತಿದ್ದುಪಡಿ ಮಾಡಬೇಕು ಆ ವಿವರವನ್ನು ಆಯ್ಕೆ ಮಾಡಿಕೊಳ್ಳಿ.
ಪೋರ್ಟಲ್ನಲ್ಲಿ ಕೆಳಗಿನ ತಿದ್ದುಪಡಿಗಳು ಲಭ್ಯ ಇವೆ:
ಹೆಸರು ಸೇರಿಸುವುದು
ವಿಳಾಸ ಬದಲಾವಣೆ ಮಾಡುವುದು
ಸದಸ್ಯರ ಸೇರ್ಪಡೆ ಮಾಡುವುದು ಅಥವ ಹೊರಹಾಕುವುದು
ವಯಸ್ಸಿನ ತಿದ್ದುಪಡಿ ಮಾಡುವುದು
ಫೋಟೋ ಅಪ್ಡೇಟ್ ಮಾಡುವುದು
ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡುವುದು, ನೀವು ಯಾವುದನ್ನು
ತಿದ್ದುಪಡಿ ಮಾಡಬೇಕು ಆ ವಿಭಾಗದ ಮೇಲೆ ಕ್ಲಿಕ್ ಮಾಡಿ.
Step 6: ಅವಶ್ಯಕ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ನೀವು ಯಾವುದೇ ತಿದ್ದುಪಡಿ ಪ್ರಕಾರಕ್ಕೆ ಅನುಗುಣವಾಗಿ documents ಅಪ್ಲೋಡ್ ಮಾಡಬೇಕು. (ಈ ಕೆಳಗೆ ವಿವರ ಕೊಡಲಾಗಿದೆ).
Step 7: ಆಧಾರ್ ಕಾರ್ಡ್ ರಿಜಿಸ್ಟರ್ ಮೊಬೈಲ್ ನಂಬರ್ OTP ದೃಢೀಕರಣ
ಆಧಾರ್ ಕಾರ್ಡಿಗೆ ಲಿಂಕ್ ಇರುವ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು enter ಮಾಡಿ Verification ಪೂರ್ಣಗೊಳಿಸಿ.
Step 8: ಸಲ್ಲಿಸಿ (Submit)
ಈ ಅರ್ಜಿಯಲ್ಲಿ ನಮೂದಿಸಿದ ಎಲ್ಲ ಮಾಹಿತಿಯನ್ನು ಪರಿಶೀಲಿಸಿ Submit ಮೇಲೆ ಕ್ಲಿಕ್ ಮಾಡಿ.
ನಿಮ್ಮ ತಿದ್ದುಪಡಿ ಅರ್ಜಿಯು Acknowledgment Number ಸಹಿತ ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.
Step 9: ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡುವುದು (Status Check)
ಪೋರ್ಟಲ್ನಲ್ಲಿ “Check Status” ಆಯ್ಕೆ ಮಾಡಿ ಅಲ್ಲಿ RC Application Status ಎಂದು ನೋಡಬಹುದು.
ತಿದ್ದುಪಡಿಯ ಸಮಯ (Processing Time)
ಸಾಮಾನ್ಯವಾಗಿ:
ಆನ್ಲೈನ್ ತಿದ್ದುಪಡಿ: 7 ರಿಂದ 15 ದಿನಗಳು ಬೇಕಾಗುತ್ತದೆ.
HDSC ಮೂಲಕ: 7–20 ದಿನ
ವಿಳಾಸ ಬದಲಾವಣೆ ಅಥವಾ ಹೊಸ ಸದಸ್ಯ ಸೇರ್ಪಡೆಗೆ ಕೆಲವೊಮ್ಮೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.
ತಿದ್ದುಪಡಿ ಮಾಡಲು ಅಗತ್ಯ ದಾಖಲೆಗಳು ಈ ಕೆಳಕಂಡಂತೆ ಇವೆ (Ration Card Correction Documents)
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈ ಕೆಳಗಿನ ದಾಖಲೆಗಳು ಬಹುಮುಖ್ಯ:
ಸದಸ್ಯರ ಹೆಸರು ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು:
• Aadhaar Card
• Gazette copy (ಅವಶ್ಯವಾದರೆ)
• School Certificate (ಏಕಾಗ್ರತೆಗಾಗಿ)
ರೇಷನ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಬೇಕಾಗುವ ದಾಖಲಾತಿಗಳು:
• Aadhaar Address Proof
• ಹೊಸ ವಿಳಾಸದ Electricity Bill / Water Bill
• Rent Agreement / House Tax Receipt
ಹೊಸ ಸದಸ್ಯ ಸೇರ್ಪಡೆ
• ಜನನ ಪ್ರಮಾಣ ಪತ್ರ
• ಮಗುವಿನ Aadhaar (ಇದ್ದರೆ)
• ಪೋಷಕರ Aadhaar ಕಾರ್ಡ್
• ವಿವಾಹದ ನಂತರ ಹೆಸರು–ವಿಳಾಸ ಬದಲಾವಣೆ
• Marriage Certificate
• ಗಂಡನ ಕುಟುಂಬದ RC ಸಂಖ್ಯೆ
• ಎರಡರ Aadhaar
ಸದಸ್ಯರನ್ನು ರೇಷನ್ ಕಾರ್ಡ್ ನಿಂದ ಡಿಲೀಟ್ ಮಾಡಲು ಬೇಕಾಗುವ ದಾಖಲಾತಿಗಳು:
ಮರಣ ಪ್ರಮಾಣ ಪತ್ರ Death certificate
ಹೊಸ ವಿಳಾಸಕ್ಕೆ ಸ್ಥಳಾಂತರ ಪ್ರಮಾಣ (ಅವಶ್ಯವಾದರೆ)
ವಯಸ್ಸು ತಿದ್ದುಪಡಿ
Aadhaar
Birth Certificate
ರೇಷನ್ ಕಾರ್ಡ್ ತಿದ್ದುಪಡಿ ಶುಲ್ಕ (Fees)
ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗೆ ಸಂಬಂಧಪಟ್ಟ ಸಾಮಾನ್ಯ ಮಾಹಿತಿ:
ಆನ್ಲೈನ್ ತಿದ್ದುಪಡಿ: ₹0, ಬಹುತೇಕ ಉಚಿತವಾಗಿರುತ್ತದೆ
HDSC / Seva Kendra: ₹20 – ₹40 (ಸೇವಾ ಶುಲ್ಕ)
ಆಹಾ ಜಿಲ್ಲೆಗಳ ಪ್ರಕಾರ ಶುಲ್ಕ ಸ್ವಲ್ಪ ಬದಲಾವಣೆ ಆದರೂ ಆಗಬಹುದು.
ತಿದ್ದುಪಡಿಗೆ ಅರ್ಜಿ ಸಲ್ಲಿಸಿರುವ ಪ್ರೋಸೆಸಿಂಗ್ ಕಂಪ್ಲೀಟ್ ಆಗಿದೆ ಆದರೆ ಆ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಅದರ ವಿವರ.
ತಿದ್ದುಪಡಿ ನಂತರ ಹೊಸ ರೇಷನ್ ಕಾರ್ಡ್ನ್ನು ಹೇಗೆ ಡೌನ್ಲೋಡ್ ಮಾಡಬಹುದು?
Ahara Karnataka Website open ಮಾಡಿ
e-Services → Ration Card → “Download e-Ration Card”
RC Number enter ಮಾಡಿ ಸದಸ್ಯರನ್ನು ಆಯ್ಕೆ ಮಾಡಿ ಆಧಾರ್ ಕಾರ್ಡಿಗೆ ಲಿಂಕ್ ಇರುವ ನಂಬರ್ಗೆ ಓಟಿ ರವಾನೆ ಆಗುತ್ತದೆ ಆ ಒಟಿಪಿಯನ್ನು ನಮೂದಿಸಿ.
PDF ರೂಪದಲ್ಲಿ ನಿಮ್ಮ ಹೊಸದಾಗಿ ತಿದ್ದುಪಡಿಯಾಗಿರುವ ಕಾರ್ಡ್ ಡೌನ್ಲೋಡ್ ಮಾಡಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಸಮಸ್ಯೆಗಳು ಮತ್ತು ಪರಿಹಾರಗಳು.
OTP ಬರದೆ ಇರುವುದು
ಮೊಬೈಲ್ ನೆಟ್ವರ್ಕ್ ಚೆಕ್ ಮಾಡಿ
DND Off ಮಾಡಿಕೊಳ್ಳಿ
ಬೇರೆ ಸಂಖ್ಯೆಗೆ update ಮಾಡಲು HDSC ಭೇಟಿ ಮಾಡಿ
ದಾಖಲೆ reject ಆಗುವುದು
ಫೈಲ್ clear ಆಗಿರಬೇಕು
Aadhaar ಕಾರ್ಡಿನಲ್ಲಿ ಇರುವ ಹೆಸರು ರೇಷನ್ ಕಾರ್ಡ್ ಇವು ಎರಡರಲ್ಲಿ ಹೆಸರಿನೊಂದಿಗೆ ಹೊಂದಿಕೊಂಡಿರಬೇಕು.
ತಿದ್ದುಪಡಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲನೆ ಇದ್ದಲ್ಲಿ ಹೆಚ್ಚುನ ಸಮಯ ಹಿಡಿಯಬಹುದು.
ಅಗತ್ಯವಿದ್ದರೆ “Application Status” ಮೂಲಕ ಟ್ರ್ಯಾಕ್ ಮಾಡಬಹುದು.
ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.










