ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪಾಸಾದವರಿಗೆ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಈಗಲೇ ಅರ್ಜಿಗೆ ಅಪ್ಲೈ ಮಾಡಿ.
ಭಾರತೀಯ ವಾಯುಪಡೆಯು 2025ನೇ ಸಾಲಿನ ಗ್ರೂಪ್ ಸಿ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶದ ಸಾವಿರಾರು ಯುವಕರಿಗೆ ಹೊಸ ಭವಿಷ್ಯದ ಆಶಾಕಿರಣವಾಗಿ ಪರಿಣಮಿಸಿತಿದೆ. ಒಟ್ಟು 153 ಉದ್ಯೋಗಗಳನ್ನು ಒಳಗೊಂಡ ಈ ನೇಮಕಾತಿಯ ಪ್ರಕ್ರಿಯೆ ಮಧ್ಯಮ ಮತ್ತು ಅಲ್ಪ ಶಿಕ್ಷಣ ಪಡೆದುಕೊಂಡಿರುವವರಿಗೂ ಕೂಡ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡುತ್ತಿದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಮತ್ತು ಅರ್ಜಿಯ ಪ್ರಕ್ರಿಯೆ.
ಮೇ 17 2025 ರಂದು ಅರ್ಜಿ ಸಲ್ಲಿಗೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಜೂನ್ 15 2018 ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ವಿಶೇಷತೆ ಎಂದರೆ ಈ ಬಾರಿ ಆನ್ಲೈನ್ ಮಾತ್ರವಲ್ಲದೆ ಆಫ್ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಅಧಿಕೃತ ವೆಬ್ಸೈಟ್ indianirforce.nic.in ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಉದ್ಯೋಗಗಳ ವಿವರಗಳು ಇಲ್ಲಿವೆ.
ಈ ನೇಮಕಾತಿಯಲ್ಲಿ ಪ್ರಮುಖವಾಗಿ 53 ಹುದ್ದೆಗಳು ಮಲ್ಟಿ-ಟಾಸ್ಕಿಂಗ್ ಸ್ಟಾಪ್ ಗೆ ಮೀಸಲಾಗಿದೆ.
ಇತರ ಉದ್ಯೋಗಗಳಿವೆ ನೋಡಿ ಕೆಳಗಡೆ,
- ಎಲ್ ಡಿ ಸಿ
- ಹಿಂದಿ ಟೈಪಿಸ್ಟ್
- ಅಡುಗೆ ಸಿಬ್ಬಂದಿ
- ಪೇಂಟರ್
- ಸ್ಕೋರ್ ಕಿಪ್ಪರ್
- ಕಾರ್ಪೆಂಟರ್
- ಹೌಸ್ ಕೀಪಿಂಗ್ ಸಿಬ್ಬಂದಿ
ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.
ಆಯಾ ಉದ್ಯೋಗಗಳ ಪ್ರಕಾರ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ.
• ಎಲ್ ಡಿ ಸಿ ಮತ್ತು ಸ್ಕೋರ್ ಟಿಪ್ಪರ್ ಉದ್ಯೋಗಗಳಿಗೆ ಕನಿಷ್ಠ 12ನೇ ತರಗತಿ ಉತ್ತೀರ್ಣ ಆಗಿರಬೇಕು.
• ಅಡುಗೆ ಸಿಬ್ಬಂದಿ, ಪೇಂಟರ್, ಕಾರ್ಪೆಂಟರ್ ಮತ್ತು ಡ್ರೈವರ್ ಉದ್ಯೋಗಗಳಿಗೆ 10ನೇ ತರಗತಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.
• ಅಭ್ಯರ್ಥಿಯ ವಯೋಮಿತಿ 18 ರಿಂದ 25 ವರ್ಷಗಳ ನಡುವೆ ಇರಬೇಕು. ಮೀಸಲಾತಿಗೆ ಸಂಬಂಧಿಸಿದಂತೆ ಆಯಾ ವರ್ಗಗಳಿಗೆ ವೈಯಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಇದನ್ನು ಓದಿ: ಗೃಹಲಕ್ಷ್ಮಿಯ ಪೆಂಡಿಂಗ್ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ತಪ್ಪದೇ ಹೀಗೆ ಮಾಡಿ.
ಆಯ್ಕೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಕೌಶಲ್ಯ ಪರೀಕ್ಷೆ ಇರುತ್ತದೆ, ಲಿಖಿತ ಪರೀಕ್ಷೆ ಇರುತ್ತದೆ, ಹಾಗೂ ಪ್ರಾಯೋಗಿಕ ಪರೀಕ್ಷೆ ಕೂಡ ಇರುತ್ತದೆ. ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಲಿಖಿತ ಪರೀಕ್ಷೆಯ ವೇಳಾಪಟ್ಟಿ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ. ಅರ್ಹತರಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ವೆಬ್ಸೈಟ್ ಮುಖಾಂತರ ಕೊಡಲಾಗುತ್ತದೆ.
ತಮಗೆ ಕೊನೆಯದಾಗಿ ಹೇಳುವುದೇನೆಂದರೆ, ಭದ್ರತೆಯೊಂದಿಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯಲು ಬಯಸುವ ಯುವಕ, ಯುವತಿಯರಿಗೆ ಈ ನೇಮಕಾತಿ ಉತ್ತಮ ಅವಕಾಶ ಎಂದು ಹೇಳಬಹುದು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅವಕಾಶ ಇಲ್ಲದಿರುವರಿಗೂ ಸರಕಾರಿ ಸೇವೆಗೆ ಪ್ರವೇಶಿಸುವ ದಾರಿ ಈ ಅಧಿಸೂಚನೆ ಮೂಲಕ ಸುಲಭವಾಗಿ ಇರುತ್ತದೆ, ವಿಶೇಷವಾಗಿ ಎಂಟಿಎಸ್, ಅಡುಗೆಗಾರ, ಕಾರ್ಪೆಂಟರ್ ಹುದ್ದೆಗಳು ಗ್ರಾಮೀಣ ಮತ್ತು ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಅರ್ಜಿಯನ್ನು ಸಲ್ಲಿಸುವ ಮುಂಚೆ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಅರ್ಹತೆಗಳನ್ನು ಪರಿಶೀಲಿಸಿ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧತೆ ಮಾಡಿಕೊಳ್ಳಿ. ಉದ್ಯೋಗಗಳು ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ.
ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದುಕೊಂಡ ಮೇಲೆ ಈ ಮಾಹಿತಿಯನ್ನು ಈ ಕೂಡಲೇ ನಿಮ್ಮೆಲ್ಲಾ ಸ್ನೇಹಿತರಿಗೆ ಮತ್ತು ಬಂದು ಬಳಗದವರಿಗೆ ಶೇರ್ ಮಾಡಿ, ತುಂಬು ಹೃದಯದ ಧನ್ಯವಾದಗಳು.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.