Students of DDU PU College, Doranahalli, secured fifth position in the PUC results, Yadagiri district.
ಪಿಯುಸಿ ರಿಸಲ್ಟ್ ಯಾದಗಿರಿ ಜಿಲ್ಲೆಯಲ್ಲಿ ಐದನೇ ಸ್ಥಾನ ಪಡೆದ ದೋರನಹಳ್ಳಿಯ ಡಿ ಡಿ ಯು ಪಿಯು ಕಾಲೇಜ್ ವಿದ್ಯಾರ್ಥಿಗಳು
ಯಾದಗಿರಿ: ದೂರನಹಳ್ಳಿಯ ಡಿ ಡಿ ಯು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಯಾದಗಿರಿ ಜಿಲ್ಲೆಗೆ 5ನೇ ಸ್ಥಾನ ಪಡೆದಿರುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಯಾದಗಿರಿ ಜಿಲ್ಲೆಗೆ ಐದನೇ ಸ್ಥಾನ ಪಡೆದುಕೊಂಡೆದವರು ದೇವಮ್ಮ ತಂದೆ ಮಾಳಪ್ಪ ಮುಕಾರಿ ಕಾಡಮಗೇರಾ (ಬಿ) 95.16%.
ವಾಣಿಜ್ಯ ವಿಭಾಗದಲ್ಲಿ, ಮೌನೇಶ್ ತಂದೆ ಮಲ್ಲಿಕಾರ್ಜುನ್ 91% ಇವರು ಜಿಲ್ಲೆಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮತ್ತು ಪದ್ಮಾವತಿ ತಂದೆ ಶರಣಪ್ಪ 90% ಜಿಲ್ಲೆಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಕಲಾವಿಭಾಗದಲ್ಲಿ ಡಿಡಿಯು ಕಾಲೇಜಿನಲ್ಲಿ ದೇವಮ್ಮ ತಂದೆ ಮಾಳಪ್ಪ ಮುಕಾರಿ ಕಾಡಮಗೇರಾ ಬಿ 95.16% ಕಾಲೇಜಿಗೆ ಪ್ರಥಮ ಸ್ಥಾನ, ಮತ್ತು ಭಾಗ್ಯಜ್ಯೋತಿ ತಂದೆ ಮಾಳಪ್ಪ 92% ಕಾಲೇಜಿಗೆ ದ್ವಿತೀಯ ಸ್ಥಾನ, ಜ್ಯೋತಿ ತಂದೆ ವಿಶ್ವನಾಥ ರೆಡ್ಡಿ 89% ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೌನೇಶ್ ತಂದೆ ಮಲ್ಲಿಕಾರ್ಜುನ್ 91% ಕಾಲೇಜಿಗೆ ಪ್ರಥಮ ಸ್ಥಾನ, ಪದ್ಮಾವತಿ ಶರಣಪ್ಪ 90% ದ್ವಿತೀಯ ಸ್ಥಾನ, ಬೀರಲಿಂಗ ಹನುಮಂತರಾಯ 86% ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭಾಗ್ಯಶ್ರೀ ರವಿ 83% ಕಾಲೇಜಿಗೆ ಪ್ರಥಮ ಸ್ಥಾನ, ಶ್ರೀದೇವಿ ಶ್ರೀನಿವಾಸ್ 82% ಕಾಲೇಜಿಗೆ ದ್ವಿತೀಯ ಸ್ಥಾನ, ಕಾವೇರಿ ಹೀರು 91% ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ದೇವಮ್ಮ ತಂದೆ ಮಾಳಪ್ಪ ಮುಕಾರಿ ಕಾಡಮಗೇರ ಬಿ ಇವರು 95.16% ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ. ಕಾಲೇಜಿನ ಕೀರ್ತಿ ಅಷ್ಟೇ ಅಲ್ಲದೆ, ಜಿಲ್ಲೆಯ ಮತ್ತು ತಮ್ಮ ಊರು ಆದಂತಹ ಕಾಡಮಗೇರಾ ಬಿ ಗ್ರಾಮಕ್ಕೆ ಹೆಸರು ತಂದುಕೊಟ್ಟಿದ್ದಾರೆ.