The evil eye is always watching, but it doesn’t touch me; Pavithra Gowda’s mystical message…!
ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ನನ್ನ ಮುಟ್ಟೋಕಾಗಲ್ಲ ; ಪವಿತ್ರಾ ಗೌಡ ಮಾರ್ಮಿಕ ಸಂದೇಶ…!
ದರ್ಶನ್ ಪಾಲಿಗೆ ಮುಳ್ಳು ಆದವರು ಪವಿತ್ರಾ ಗೌಡ. ಒ ಸಂಸಾರವನ್ನು ಹಾಳು ಮಾಡಿರಿವುದಷ್ಟೆ ಅಲ್ಲ, ಜೊತೆಗೆ ಒಬ್ಬ ಸೂಪರ್ ಸ್ಟಾರ್‌ನ ಕಿಮ್ಮತ್ತು ಹಾಳು ಮಾಡಿದ ಕುಖ್ಯಾತಿ ಪವಿತ್ರಾ ಗೌಡ, ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮನೆಯಲ್ಲಿ ಹೋಮ ಹವನವನ್ನು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ತಮ್ಮ ಅಭಿಮಾನಿಗಗಳಿಗೆಲ್ಲ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವವರಿಗೆ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಆದರೆ.. ಇವರ ಬಹುತೇಕ ಫಾಲೋವರ್ಸ್ ಯುಗಾದಿಗೆ ಶುಭಾಶಯವನ್ನು ಹೇಳದೇ ಬೇರೆ ಆಲೋಚನೆ ಮಾಡುತ್ತಿದ್ದಾರೆ. ಪವಿತ್ರಾ ಗೌಡ ತಾವು ಬರೆದುಕೊಂಡ ಸಾಲುಗಳ ಕುರಿತು ಚರ್ಚೆ ಮಾಡುತ್ತಿದ್ದಾರೆ. ಹೌದು, ಪವಿತ್ರ ಗೌಡ ಯುಗಾದಿ ಹಬ್ಬಕ್ಕೆ ಶುಭ ಕೋರುತ್ತಾ ಪವಿತ್ರಾ ಗೌಡ ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತದೆ ಆದರೆ ಅದು ನನ್ನನ್ನು ಮುಟ್ಟಲು ಅಸಾಧ್ಯ, ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ ಎಂದು ಬರೆದುಕೊಂಡಿದ್ದಾರೆ.
ಹಾಗಾದರೆ ಪವಿತ್ರಾ ಗೌಡರ ಮೇಲೆ ಬಿದ್ದಿರುವ ಆ ಕೆಟ್ಟ ದೃಷ್ಟಿ ಯಾರದ್ದು ? ಈ ಮೂಲಕ ಯಾರಿಗಾದರೂ ಪವಿತ್ರಾ ಗೌಡ ಸಂದೇಶ ಕೊಟ್ಟಿದ್ದಾರ ? ಅಂತ ಅನ್ನೂವ ಪ್ರಶ್ನೆ ಇವಾಗ ಅನೇಕರನ್ನು ಅಲೋಚನೆಗಿಡುಮಾಡಿದೆ. ಅವರದ್ದಿರಬಹುದಾ, ಇವರದ್ದಿರಬಹುದಾ ಅಂತೇಳಿ ಊಹೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಇನ್ನು ನಟ ದರ್ಶನ್ ಹಾಗೂ ಪವಿತ್ರಾ ಗೌಡರ ನಡುವೆ ಈ ಹಿಂದಿನ ಸಂಬಂಧ ಎಲ್ಲರಿಗೂ ಗೊತ್ತಿರುವ ವಿಷಯವೆ. ಸ್ವತಃ ಪವಿತ್ರಾ ಗೌಡ ಕಳೆದ ವರ್ಷ ಇದೇ ವೇಳೆಗೆ ನಟ ದರ್ಶನ್ ಮತ್ತು ನನ್ನ ನಡುವಿನ ಸಂಬಂಧಕ್ಕೆ ಹತ್ತು ವರ್ಷ ಎಂದು ತಮ್ಮದೇ ಸೋಶಿಯಲ್ ಮೀಡಿಯಾದಲ್ಲಿ ಕರೆದುಕೊಂಡು ಪೋಸ್ಟ್ ಮಾಡಿ ಫೋಟೊಗಳನ್ನು ಸಹಾ ಹಂಚಿಕೊಂಡಿದ್ದರು.
ಕಾಲ ಎಷ್ಟು ವಿಚಿತ್ರ ಅಲ್ವಾ ಯಾವ ಯಾವ ಟೈಮಲ್ಲಿ ಏನೇನೋ ಆಗಬೇಕು ಅದೆಲ್ಲ ನಮ್ಮಗರಿವಿಲ್ಲದೆ ನಡೆದು ಹೋಗುತ್ತದೆ, ಕೇವಲ ಒಂದು ವರ್ಷದಲ್ಲಿ ಎಲ್ಲಾ ಬದಲಾಗಿದೆ. ಹೋದ ವರ್ಷ ನಟ ದರ್ಶನ್, ಪವಿತ್ರಾ ಗೌಡ ಅವರ ಜೊತೆಯಲ್ಲಿ ಇರುತ್ತಿದ್ದ ದರ್ಶನ್, ಈಗ ಪವಿತ್ರಾ ಗೌಡ ಅವರಿಗೆ ದರ್ಶನವನ್ನು ನೋಡಿ ತುಂಬ ದಿನಗಳೇ ಆಗಿವೆ. ಅನೇಕರು ಜನರು ದರ್ಶನ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ, ಯಾರೋ ಒಬ್ಬರು ಮಿಸ್ ಆಗಿದ್ಧಾರೆ ಪೂಜೆಗೆ ಕಳೆ ಇಲ್ಲ ಎನ್ನುತ್ತಿದ್ದಾರೆ. ಅಕ್ಕ ಬಾಸ್ ಎಲ್ಲಿ ? ಅಕ್ಕ ಯಜಮಾನರು ಎಲ್ಲಿ ? ಎಂದು ಕಾಮೆಂಟ್ ಗಳ ಸುರಿಮಳೆನೆ ಬರುತಿದೆ. ಅಕ್ಕನ ಮುಖದಲ್ಲಿ ನಗು ಮತ್ತು ಕಳೆ ಎರಡು ಇಲ್ಲ ಬಾಸ್ ಇದ್ದಿದ್ದರೆ ಫುಲ್ ಮಿಂಚುತ್ತಿದ್ದರು ಎಂದು ಅನೇಕರು ಪವಿತ್ರ ಗೌಡರ ಕಾಲೆಳೆದಿದ್ದಾರೆ.
ಪವಿತ್ರ ಗೌಡ ಕೆಲ ದಿನಗಳ ಹಿಂದೆ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆಯುತ್ತದೆ, ಮೇಲೊಬ್ಬ ಎಲ್ಲವನ್ನೂ ನೊಡುತ್ತಿರುತ್ತಾನೆ, ನಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಭಗವದ್ಗೀತೆಯ ಸಂದೇಶದ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಪವಿತ್ರ ಗೌಡ ಜೈಲಿಂದ ಬಿಡುಗಡೆ ಆದ ಮೇಲೆ ಪವಿತ್ರಾ ಗೌಡ ತುಂಬಾ ದೇವಸ್ಥಾನಕ್ಕೆ ಬೇಟಿ ನೀಡಿದರು. ಅದೆಷ್ಟೋ ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ಗೌಡ ತದನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ಮಾಡಿ, ಸಾಯಿ ಬಾಬಾ ದರ್ಶನ ಪಡೆದಿದ್ದರು. ನಂತರ ಉತ್ತರ ಪ್ರದೇಶದ ಪ್ರಯಾಗರಾಜ್‌ಕ್ಕೆ ಹೋಗಿ ಪವಿತ್ರಾ ಗೌಡ ಮಹಾಕುಂಭ ಮೇಳದಲ್ಲಿ ಪಾಪ ಕರ್ಮಗಳನ್ನು ತೊಳೆಯಲು ಮಿಂದೆದ್ದು ಶಾಹಿ ಸ್ನಾನ ಮಾಡಿದ್ದರು.
ಸದ್ಯ ಇವಾಗ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವ ಪವಿತ್ರಾ ಗೌಡ ಮತ್ತು ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಸಲ್ಲಿಸಿದ್ದಾರೆ. ದಿನಾಂಕ ಏಪ್ರಿಲ್ 2ರಂದು ಈ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ತಿಳಿದು ಬಂದಿದೆ.