ಮೂರು ತಿಂಗಳ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗುವುದಿಲ್ಲ. ಹಂತ ಹಂತವಾಗಿ ಮನೆಯ ಯಜಮಾನನಿಯ ಬ್ಯಾಂಕ್ ಖಾತೆಗೆ ಜಮಾ

ಮೂರು ತಿಂಗಳ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗುವುದಿಲ್ಲ. ಹಂತ ಹಂತವಾಗಿ ಮನೆಯ ಯಜಮಾನನಿಯ ಬ್ಯಾಂಕ್ ಖಾತೆಗೆ ಜಮಾ, ಲಕ್ಷ್ಮಿ ಹೆಬ್ಬಾಳಕರ್

ಗೃಹಲಕ್ಷ್ಮಿ ಯೋಜನೆ, ಮೂರು ತಿಂಗಳ ಬಾಕಿ ಹಣ ಶೀಘ್ರದಲ್ಲಿ ಅವರವರ ಖಾತೆಗೆ ಜಮಾ ಆಗಲಿದೆ.

ರಾಜ್ಯದ ಮಹಿಳೆಯರಿಗೆ ಸ್ಮಾರಕವಾಗಿ ನೀಡಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಮೇ ತಿಂಗಳಲ್ಲಿ ಅಂತಹ ಹಂತವಾಗಿ ಮನೆಯ ಯಜಮಾನಿಯರಿಗೆ ಅವರವರ ಅಕೌಂಟಿಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಿಸಿದ್ದಾರೆ. ಇದೇ ರೀತಿಯಾದ ಎಲ್ಲಾ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಕನ್ನಡ ಟ್ರೆಂಡಿಂಗ್ ಚಾನಲ್ ಅನ್ನು ಸೇರಿಕೊಳ್ಳಿ; ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಒಂದು ಪ್ರಮುಖ ಯೋಜನೆ ಆಗಿದ್ದು, ಪ್ರತಿ ತಿಂಗಳು 2000 ರೂಪಾಯಿ ನೆರವು ರಾಜ್ಯದ ಮಹಿಳಾ ಗೃಹಿಣಿಯರಿಗೆ ಕೊಡಲಾಗುತ್ತಿದೆ. ಆದರೆ ಕಳೆದ ಮೂರು ತಿಂಗಳುಗಳಿಂದ ಈ ಹಣವು ಬಿಡುಗಡೆಯಾಗದೆ ಇರುವುದರಿಂದ ಅನೇಕರಿಗೆ ತೊಂದರೆ ಉಂಟಾಗಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಈಗ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲು ತೀರ್ಮಾನ ಮಾಡಿದೆ.

ಇದನ್ನೂ ಓದಿ: ಹೊಸ ಬಿಪಿಎಲ್ ರೇಷನ್ ಕಾರ್ಡ್‌ನ ಅರ್ಜಿದಾರರೇ, ಇಲ್ಲಿ ಗಮನಿಸಿ: ಶೀಘ್ರವೇ ರೇಷನ್ ಕಾರ್ಡ್ ವಿತರಣೆ

ಉಡುಪಿ ಜಿಲ್ಲೆಯ ಕುಂದಾಪುರ ರೈತರ ಸಂಪರ್ಕ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದ ಕೂಡಲೇ ಮೂರು ತಿಂಗಳ ಬಾಕಿ ಹಣವನ್ನು ಮೇ ತಿಂಗಳಲ್ಲಿ ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುವುದು. ಮೊದಲ ಕಂತು ಒಂದು ವಾರದ ಒಳಗಡೆ, ಎರಡನೇ ಕಂತು ಮುಂದಿನ ವಾರದಲ್ಲಿ ಮತ್ತು ಮೂರನೇ ಕಂತಿನ ಹಣವು ತಿಂಗಳ ಅಂತ್ಯದ ಒಳಗಡೆ ಖಾತೆಗೆ ಬರಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

ಈ ನಡುವೆ ರಾಜ್ಯದ ಸಾವಿರಾರು ಮಹಿಳೆಯರು ತಮ್ಮ ಬಾಕಿ ಹಣಕ್ಕಾಗಿ ಕಾಯುತ್ತಾ ಇದಾರೆ. ಸರ್ಕಾರವು ಈ ವಿಳಂಬಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣವನ್ನು ಸೂಚಿಸಿದೆ, ಆದರೆ ಈಗ ಅನುಮೋದನೆ ಪೂರ್ಣಗೊಂಡಿದೆ, ಹಣ ವಿತರಣೆ ಪ್ರಕ್ರಿಯೆ ತ್ವರಿತಗೊಳ್ಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

WhatsApp Group Join Now
Telegram Group Join Now       

ಯೋಜನೆಯ ಪ್ರಯೋಜನಗಳು ಏನು?

1 ಪ್ರತಿ ತಿಂಗಳು 2000 ಮನೆ ಯಜಮಾನಿಗೆ ನೇರ ಬೆಂಬಲ.

2. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹಣಕಾಸಿನ ಸಹಾಯ ಮಾಡಿದಂತಾಗುತ್ತದೆ.

WhatsApp Group Join Now
Telegram Group Join Now       

3 ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವತಂತ್ರ.

ಈ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ಆಧಾರ್ ಲಿಂಕ್, ಬ್ಯಾಂಕ್ ಖಾತೆ ಮತ್ತು ಗೃಹಿಣಿಯರ ಹೆಸರಿನಲ್ಲಿ ಖಾತೆ ಇರುವುದು ಅನಿವಾರ್ಯ ಮುಖ್ಯವಾಗಿದೆ. ಇನ್ನು ಯೋಜನೆಗೆ ನೋಂದಾಯಿಸದಿರುವವರು ತಮ್ಮ ಸಮೀಪದ ಸೇವಾ ಕೇಂದ್ರದಲ್ಲಿ ದಾಖಲಾತಿ ಮಾಡಿಸಿಕೊಳ್ಳಬಹುದು.

ಆದ್ದರಿಂದ, ಮೇ ತಿಂಗಳು ಕೊನೆ ಆಗುವುದರ ಒಳಗಡೆ ಎಲ್ಲಾ ಬಾಕಿ ಹಣವು ಮಹಿಳೆಯರ ಖಾತೆಗೆ ಬರಲಿದೆ ಎಂಬುದು ಸಚಿವರ ಭರವಸೆ. ಇದು ರಾಜ್ಯದ ಗೃಹಿಣೀರಿಗೆ ದೊಡ್ಡ ಉಪಶಮನವಾಗಿದೆ.

ಹಣ ಬಿಡುಗಡೆಯ ಪ್ರಗತಿಯನ್ನು ಅನುಸರಿಸಲು ಅಧಿಕೃತ Karnataka gruhalakshami portal ಅನ್ನು ನೋಡಿ.

ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment