There is no OTP for ration card, biometrics are mandatory; No waiting for OTP on the internet, have to stand in line…!

Spread the love

There is no OTP for ration card, biometrics are mandatory; No waiting for OTP on the internet, have to stand in line…!

ರೇಷನ್ ಕಾರ್ಡಿಗೆ ಒಟಿಪಿ ಇಲ್ಲ, ಬಯೋಮೆಟ್ರಿಕ್‌ ಕಡ್ಡಾಯ; ಇನ್ ಮೇಲೆ ಒಟಿಪಿಗಾಗಿ ಕಾಯಂಗಿಲ್ಲ, ಸಾಲಿನಲ್ಲಿ ನಿಲ್ಲಬೇಕು…!

ಪಡಿತರ ವಿತರಣಾ ಮಾಡಲು ಬಯೋಮೆಟ್ರಿಕ್‌ ಪದ್ಧತಿ ಮತ್ತೆ ಜಾರಿಯಾಗಿದೆ. ರೇಷನ್ ಕಾರ್ಡ್ ನಲ್ಲಿರುವ ಸದಸ್ಯರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಬಹುತೇಕರು ಮಾಡಿಸಿಕೊಳ್ಳುತ್ತಿರಲಿಲ್ಲ. ಅದರಿಂದ ಒಟಿಪಿ ವ್ಯವಸ್ಥೆ ರದ್ದುಪಡಿಸಿ, ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ರೇಷನ್‌ ಅಂಗಡಿಗೆ ಹೋಗಿ ದಿನಸಿ ಪಡೆಯುವಂತೆ ಮಾಡಲು ಬಯೋಮೆಟ್ರಿಕ್‌ ಮರುಗೊಳಿಸಲಾಗಿದೆ,” ಎಂದು ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಒಟಿಪಿ ಪದ್ದತಿ ತೆಗೆದು ಮತ್ತೆ ಬಯೋಮೆಟ್ರಿಕ್‌ ಪದ್ದತಿ ಜಾರಿಗೊಳಿಸಿರುವುದಕ್ಕೆ ರಾಜ್ಯದ ಜಿಲ್ಲೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ .

ಕರ್ನಾಟಕ: ರೇಷನ್ ವಿತರಣೆಯಲ್ಲಿ ಬಯೋಮೆಟ್ರಿಕ್‌ ಕಡ್ಡಾಯ, ಮತ್ತೆ ಜಾರಿಯಾಗಿದೆ. ಒಟಿಪಿ ವ್ಯವಸ್ಥೆ ತೆಗೆದು ಪುನಃ ಬಯೋಮೆಟ್ರಿಕ್‌ ಪದ್ಧತಿ ಜಾರಿಗೊಳಿಸಿರುವುದು ಜನರಲ್ಲಿ ಅಸಮಾಧಾನ ಉಂಟಾಗಿದೆ.

ರೇಷನ್ ವಿತರಣೆ ಆರಂಭದಲ್ಲಿ ರೇಷನ್‌ ಕಾರ್ಡ್‌ ಕೊಟ್ಟು, ಎಂಟ್ರಿ ಮಾಡಿಸಿಕೊಂಡು ಫಲಾನುಭವಿಗಳು ರೇಷನಿನ ಪದಾರ್ಥಗಳನ್ನು ಪಡೆದುಕೊಳ್ಳುತ್ತಿದ್ದರು. ಆಮೇಲೆ ಬಯೋಮೆಟ್ರಿಕ್‌ ಜಾರಿಗೊಳಿಸಲಾಗಿತ್ತು. ಅದರ ಸಾಧಕ-ಬಾಧಕಗಳು, ಲೋಪ-ದೋಷಗಳು, ನೆಟ್ವರ್ಕ್ ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ಬಯೋಮೆಟ್ರಿಕ್‌ ರದ್ದುಗೊಳಿಸಿ ಒಟಿಪಿ ವ್ಯವಸ್ಥೆ ಜಾರಿಗೊಳಿಸಿತು.

ಪಡಿತರ ಚೀಟಿಯೊಂದಿಗೆ ಅಂದರೆ ಆಧಾರ್ ಕಾರ್ಡಿಗೆ ಲಿಂಕ್ ಅಥವಾ ಜೋಡಣೆ ಮಾಡಿರುವ ಮೊಬೈಲ್‌ ನಂಬರ್‌ಗೆ ಒಟಿಪಿ ಬರುತ್ತಿತ್ತು. ಅದರ ಆಧಾರದ ಮೇಲೆ ಪಡಿತರ ಪದಾರ್ಥಗಳನ್ನು ಫಲಾನುಭವಿಗಳಿಗೆ ಕೊಡಲಾಗುತ್ತಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಹಿಂಪಡೆದು ಬಯೋಮೆಟ್ರಿಕ್‌ ಪದ್ಧತಿ ಮತ್ತೆ ಜಾರಿಯಾಗಿದೆ, ಆದರೆ ಈಗ ಜನರು ಮತ್ತದೇ ಸಮಸ್ಯೆಗಳನ್ನು ಎದುರಿಸುವಂತ ಪರಿಸ್ಥಿತಿ ಬಂದಿದೆ.

WhatsApp Group Join Now
Telegram Group Join Now       

‘ರೇಷನ್ ಕಾರ್ಡಿನಲ್ಲಿರುವ ಫಲಾನುಭವಿಗಳೆಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು, ಬಹುತೇಕರು ಮಾಡಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಒಟಿಪಿ ವ್ಯವಸ್ಥೆ ತೆಗೆದು ಹಾಕಿ, ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರು ರೇಷನ್‌ ಅಂಗಡಿಗೆ ಹೋಗಿ ರೇಷನ್ ಪಡೆಯುವಂತೆ ಮಾಡಲು ಬಯೋಮೆಟ್ರಿಕ್‌ ಮತ್ತೆ ಜಾರಿಗೆ ತರಲಾಗಿದೆ. ಜೊತೆಗೆ, ಇದರಿಂದ ಆ ಕುಟುಂಬದ ಸದಸ್ಯರೆಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಲು ಹೇಳಲಾಗಿದೆ,’ ಎನ್ನುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು.

ಇದರೊಂದಿಗೆ ಪಡಿತರ ಪದಾರ್ಥಗಳು ದುರುಪಯೋಗವಾಗುತ್ತಿದ್ದವು. ಫಲಾನುಭವಿಗಳು ತಾವು ಪಡೆದ ರೇಷನ್ ಪದಾರ್ಥಗಳನ್ನು ತಾವು ಬಳಸಿಕೊಳ್ಳದೆ ಬೇರೆಯವರಿಗೆ ದುಡ್ಡಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಕಳ್ಳಸಂತೆಯಲ್ಲಿಅನ್ನಭಾಗ್ಯ ಅಕ್ಕಿ ಮಾರಾಟವಾಗುತಿತ್ತು. ರೇಷನ್‌ ಬೇಕಿಲ್ಲದವರು ಇ-ಕೆವೈಸಿ ಮಾಡಿಸಿಕೊಳ್ಳದೆ ಒಟಿಪಿ ವ್ಯವಸ್ಥೆಯಿಂದ ರೇಷನ್‌ ಪಡೆದು ಅದನ್ನು ಬೇರೆಯವರಿಗೆ ದುಡ್ಡಿಗೆ ಮಾರಾಟ ಮಾಡಿಕೊಳ್ಳುತ್ತಿದ್ದರು. ಇಲ್ಲವೆಂದರೆ ರೇಷನ್‌ ಅಂಗಡಿಯವರಿಗೆ ಕೊಟ್ಟು ಹಣ ಪಡೆದುಕೊಳ್ಳುತ್ತಿದ್ದರು, ಈ ಆರೋಪಗಳು ಕೇಳಿಬರುತ್ತಿದ್ದವು. ಇದನ್ನು ತಡೆಯುವ ಗೋಸ್ಕರ ಬಯೋಮೆಟ್ರಿಕ್‌ ವ್ಯವಸ್ಥೆಯನ್ನೇ ಮರಳಿ ಜಾರಿಗೊಳ್ಳಲಾಗಿದೆ ಎಂಬುದು ಆಹಾರ ಇಲಾಖೆಯ ಅಧಿಕಾರಿಗಳು ನೀಡುವದು ಸ್ಪಷ್ಟನೆಯಾಗಿದೆ.

WhatsApp Group Join Now
Telegram Group Join Now       

ಆದರೆ, ಬಿಪಿಎಲ್‌ಕಾರ್ಡ್ಹೊಂದಿದವರೆಲ್ಲರು ಬಡ ಮತ್ತು ಮಧ್ಯಮಡವರ್ಗದವರು. ಮತ್ತು, .ಇವರಲ್ಲಿ ಕೂಲಿ ಕೆಲಸಕ್ಕೆ ಹೋಗುವವರೇಜಾಸ್ತಿ; ದೈಹಿಕ ಶ್ರಮದಿಂದ ಕಷ್ಟಪಟ್ಟು ದುಡಿಯುವ ಇವರ ಕೈಗಳಲ್ಲಿಹಸ್ತರೇಖೆಗಳು ಸವೆಯುತ್ತಿರುತ್ತವೆ. ಕೆಲವರು ಕೈಗಳಲ್ಲಿ ಗುಳ್ಳೆಗಳು ಬಂದು ಚರ್ಮ ಸುಲಿದು ಬರುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಪಡಿತರ ಅಂಗಡಿಗೆ ಹೋಗಿ ಬಯೋಮೆಟ್ರಿಕ್‌ ಕೊಟ್ಟು ರೇಷನ್‌ ಪಡೆದುಕೊಳ್ಳುವುದುಎಂದು ಜನರ ಜನರಪ್ರಶ್ನೆಯಾಗಿದೆ. ಅಲ್ಲದೆ, ,ಸರ್ವರ್ಸಮಸ್ಯೆ ಆಹಾರ

ರ ಇಲಾಖೆಯಲ್ಲಿ ಇದ್ದೆ ಇದೆ. ವಾರದಲ್ಲಿ ಮೂರ್ನಾಲ್ಕು ದಿನ ಸರ್ವರ್‌ ಸಮಸ್ಯೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಜನರು ಕೂಲಿ ಕೆಲಸ ಬಿಟ್ಟು, ದಿನಪೂರ್ತಿ ರೇಷನ್‌ಅಂಗಡಿಯಲ್ಲಿ ಮುಂದೆಯೇ ಕಾಯ್ದು ನಿಲ್ಲಬೇಕು. ಸರ್ವರ್ ಇಲ್ಲ ಅಂದರೆ ಕಾದು ಕಾದು ಮನೆಗೆ ಹೋಗಿ ಮತ್ತೆ ಮರುದಿನ ಅದೆ ಸರದಿಯಲ್ಲಿ ನಿಲ್ಲಬೇಕು, ರೇಷನ್‌ ಪಡೆಯುವುದಕ್ಕೋಸ್ಕರ ಕೂಲಿ ಮೊತ್ತವನ್ನು ನಷ್ಟ ಮಾಡಿಕೊಳ್ಳಬೇಕೆ ಎಂಬ ಮತ್ತೊಂದು ಪ್ರಶ್ನೆಯು ಬಹುತೇಕ ಪಡಿತರ ಚೀಟಿದಾರರದು.

ಒಟಿಪಿ ವ್ಯವಸ್ಥೆ ಇದ್ದಾಗ ರೇಷನ್‌ ಅಂಗಡಿಯವರಿಗೆ ಒಟಿಪಿ ಹೇಳಿ ಸುಲಭವಾಗಿ ಒಟಿಪಿ ಕೊಟ್ಟು ರೇಷನ್‌ ಪಡೆದುಕೊಳ್ಳುತ್ತಿದ್ದೆವು. ಅಂಗಡಿಗೆ ನಾವು ಹೋಗಲು ಆಗದಿದ್ದರೆ ಅಕ್ಕಪಕ್ಕದ ಮನೆಯವರನ್ನೋ ಅಥವಾ ಪರಿಚಯಸ್ಥರನ್ನೂ ಕಳುಹಿಸಿ ರೇಷನ್‌ ಪಡೆದುಕೊಳ್ಳಲು ಅವಕಾಶವಿತ್ತು. ಆದರೆ ಈಗ ನಾವು ಎಷ್ಟೇ ಕೆಲಸದ ಒತ್ತಡವಿದ್ದರೂ ಅಥವಾ ಕೂಲಿ ಇದ್ದರೂ ಸರದಿಯಲ್ಲಿ ನಿಲ್ಲುವಂತೆ ಆಗಿದೆ, ಕೂಲಿ ನಷ್ಟ ಮಾಡಿಕೊಂಡು ರೇಷನ್‌ ಅಂಗಡಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎನ್ನುವ ಅಳಲನ್ನು ರಾಜ್ಯದ ಪಲಾನಿಬಾವಿಗಳು ತೋಡಿಕೊಳ್ಳುತ್ತಾರೆ.

ಹಿರಿಯರಿಗೆ ರಿಯಾಯಿತಿ:

”ಏಕಪಡಿತರ ಚೀಟಿದಾರರು (ಸಿಂಗಲ್‌ ಕಾರ್ಡ್‌) ಮತ್ತು 60 ವರ್ಷ ಮೇಲ್ಪಟ್ಟ ಪಡಿತರ ಚೀಟಿದಾರರಿಗಾಗಿ ಒಟಿಪಿ ವ್ಯವಸ್ಥೆಯನ್ನೇ ಬಳಸಿಕೊಳ್ಳಬಹುದು. ಸಿಂಗಲ್‌ ಕಾರ್ಡ್‌ದಾರರು ಹಾಸಿಗೆ ಹಿಡಿದಿದ್ದರೆ ಅವರ ಮನೆಯ ಬಾಗಿಲಿಗೆ ಹೋಗಿ ರೇಷನ್‌ ಕೊಟ್ಟು ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ..” ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್‌ ಹೇಳಿದ್ದಾರೆ

ಆಹಾರ ಇಲಾಖೆಯಲ್ಲಿ ಸರ್ವರ್‌ ಮೈಗ್ರೇಷನ್‌ ನಡೆಯುತ್ತಿದೆ. ಆದರಿಂದ ಒಟಿಪಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಬಯೋಮೆಟ್ರಿಕ್‌ ಪದ್ಧತಿಯನ್ನು ಮರಳಿ ಜಾರಿಗೊಳಿಸಲಾಗಿದೆ. ಫಲಾನುಭವಿಗಳು ಸ್ಥಳಾಂತರವಾಗಿದ್ದರೆ ಜಿಎಸ್‌ಸಿ ಮೂಲಕ ಫಲಾನುಭವಿ ವಾಸಿಸುತ್ತಿದ್ದ ಪ್ರದೇಶದಲ್ಲಿನ ರೇಷನ್‌ ಅಂಗಡಿಯಲ್ಲಿ ಕಾರ್ಡ್‌ ಬದಲಾವಣೆ ಮಾಡಿಸಿಕೊಂಡು ಅಲ್ಲೇ ರೇಷನ್‌ ಪಡೆಯಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದು ಎಂ.ಪಿ. ಕೃಷ್ಣಕುಮಾರ್‌ ಸ್ಪಷ್ಟಪಡಿಸಿದ್ದಾರೆ.

 

Leave a Comment