Vaibhav Suryavanshi: 14 year old boy
35 ಬೌಲ್ಗೆ ಶತಕ ಬಾರಿಸಿದ ಈ ಹುಡುಗ ಯಾರು? 14 ವರ್ಷದ ಈ ಪೋರನಿಗಾಗಿ ದ್ರಾವಿಡ್ ಪಟ್ಟು ಹಿಡಿದಿದ್ದರು.
ಈ ಹುಡುಗ ಹೆಸರು ವೈಭವ್ ಸೂರ್ಯವಂಶಿ, ಸದ್ಯ ಇವಾಗ ಕ್ರಿಕೆಟ್ ಲೋಕದ ಸೆನ್ಸೇಷನ್. 14 ವರ್ಷದ ಈ ಪೋರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಐಪಿಎಲ್ನ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ, ವೈಭವ ಸೂರ್ಯವಂಶಿ, ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಬಾಲ್ನಲ್ಲಿ ಸಂಚೂರಿ ಬಾರಿಸಿದ್ದಾರೆ.
ಗುಜರಾತ್ ಟೈಟನ್ಸ್ ನೀಡಿದ್ದ 210 ರನ್ಗಳ ಟಾರ್ಗೆಟ್ ಅನ್ನು ಬೆನ್ನು ಹತ್ತಲು ಆರಂಭಿಕ ಆಟಗಾರನಾಗಿ ರಾಜಸ್ಥಾನ್ ಪರ ಬಂದಿದ್ದ ವೈಭವ್, 17 ಬಾಲ್ನಲ್ಲಿ ಅರ್ಧಶತಕ ಹೊಡೆದರು. ಈ ಬಾರಿಯ ಐಪಿಎಲ್‌ನಲ್ಲಿ ದಾಖಲೆ ಬರೆದ ಅತ್ಯಂತ ವೇಗದ ಅರ್ಧ ಶತಕ ಇದಾಗಿದೆ. ಸ್ಫೋಟಕ ಅರ್ಧಶತಕದೊಂದಿಗೆ ಆಟ ಸೂರುವು ಮಾಡಿದ ಇವರು ಕೇವಲ 35 ಬಾಲ್ನಲ್ಲಿ ಶತಕವನ್ನೂ ಪೂರ್ಣಗೊಳಿಸಿದರು. ವೈಭವ್ 265.75 ಸ್ಟ್ರೈಕ್ರೇಟ್ನಲ್ಲಿ ಆಡಿದರು. 38 ಬಾಲ್ ಎದುರಿಸಿದ ವೈಭವ್ 11 ಸಿಕ್ಸರ್, 7 ಪೊರ್ ಬಾರಿಸಿ ಮಿಂಚಿದರು.
ಇದನ್ನು ಓದಿ:ಕರ್ನಾಟಕ ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ತೆಗೆಸಲು ಧನಸಹಾಯ ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಪಿಎಲ್‌ನಲ್ಲಿ ದುಪ್ಪಟ್ಟು ಬೆಲೆಗೆ ಸೇಲ್![Vaibhav Suryavanshi]
ಈ ಸಾರಿ ನಡೆದ ಮೆಗಾ ಹರಾಜಿನಲ್ಲಿ ವೈಭವ್ ಇವರು ಜಾಸ್ತಿ ಬೆಲೆಗೆ ಮಾರಾಟವಾಗಿದ್ದಾರೆ. ಇದಲ್ಲದೇ, ಹರಾಜಿನಲ್ಲಿ ಮಾರಾಟವಾದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರಾಜು ಸಂದರ್ಭದಲ್ಲಿ, ವೈಭವ್ ರವರು 13 ವರ್ಷದವರಾಗಿದ್ದರು. ವೈಭವ್ಗಾಗಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪೈಪೋಟಿಗೆ ಬಿದ್ದಿದ್ದರು. ಕೊನೆಯಲ್ಲಿ, ಆರ್ಆರ್ ಬಿಡ್ಡಿಂಗ್ ಗೆದ್ದಿತು. ದೆಹಲಿ ತಂಡ ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ಕೊಟ್ಟು ಖರೀದಿ ಮಾಡಿತ್ತು. ವೈಭವ್, ಸೂರ್ಯವಂಶಿ ಪ್ರತಿಭೆಯನ್ನು ಗುರುತಿಸಿದ್ದ ಹೆಡ್ಕೋಚ್ ರಾಹುಲ್ ದ್ರಾವಿಡ್, ಕೊನೆಗೆ ಅವರನ್ನು ಖರೀದಿಸುವಲ್ಲಿ ಯಶಸ್ವಿ ಆದರು. ಈಗ, ವೈಭವ್, ದ್ರಾವಿಡ್ ಇಟ್ಟ ನಂಬಿಕೆ ಉಳಿಸಿಕೊಂಡರು, ಇಂದು ನ್ಯಾಯ ಒದಗಿಸಿದರು.
ಟೀಂ ಇಂಡಿಯಾ ಪರ ಶತಕ [Vaibhav Suryavanshi]
ವೈಭವ್ ಸೂರ್ಯವಂಶಿ ಇವರು ಮೂಲತಃ ಬಿಹಾರದ ಸಮಸ್ತಿಪುರದವರು. 12ನೇ ಚಿಕ್ಕ ವಯಸ್ಸಿನಲ್ಲಿ, ಅಂದರೆ 2023ರಲ್ಲಿ, ರಣಜಿಗೆ ಪದಾರ್ಪಣೆ ಮಾಡಿದ್ದರು. ಈಗ ಐಪಿಎಲ್‌ನಲ್ಲಿ ಮಿಂಚುತಿದ್ದಾರೆ. ಅಂಡರ್-19 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವೈಭವ್ ಸ್ಫೋಟಕ ಪ್ರದರ್ಶನವನ್ನು ನೀಡಿದ್ದಾರೆ. ಅಂಡರ್-19 ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಕರ್ಷಕ ಶತಕ ಪೂರ್ಣಗೊಳಿಸಲು ಯಶಸ್ವಿಯಾದರು. ಕೇವಲ 62 ಬಾಲ್ನಲ್ಲಿ 104 ರನ್ಗಳಿಸಿ ಎಲ್ಲರ ಗಮನ ಸೆಳೆದರು. 2005ರಲ್ಲಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಅವರು 58 ಬಾಲ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಅವರನ್ನು ಬಿಟ್ಟರೆ, ಇವಾಗ ವೈಭವ್ ಆ ಸಾಧನೆ ಮಾಡಿದ್ದಾರೆ.
ವೈಭವ್ ಶತಕದ ವೈಭವದಲ್ಲಿ 14 ಬೌಂಡರಿ, 4 ಸಿಕ್ಸರ್ಗಳಿದ್ದವು. ಸೂರ್ಯವಂಶಿ ಕುಚ್ ಬಿಹಾರ್ ಟ್ರೋಫಿಯಲ್ಲೂ ಪ್ರಮುಖ ಸಾಧನೆ ಮಾಡಿದ್ದಾರೆ. ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ 128 ಬಾಲ್ನಲ್ಲಿ 158 ರನ್ ಪಡೆದರು. ಈ ವೇಳೆ 22 ಬೌಂಡರಿ, ಮೂರು ಸಿಕ್ಸರ್ಗಳನ್ನು ಬಾರಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ 76 ರನ್ಗಳಿದ್ದರು. ಅಂಡರ್-19ನ Quadrangular ಸೀರಿಸ್ನಲ್ಲೂ ಅದ್ಭುತ ಪ್ರದರ್ಶನ ನೀಡಿದರು.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ