What did the audience who saw the movie Sikhandar say?
‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದಾದರು ಏನು?
Salman Khan: ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಇಬ್ಬರು ನಟಿಸಿರವ ‘ಸಿಖಂಧರ್’ ಸಿನಿಮಾ ಮಾರ್ಚ್ 30 ಕ್ಕೆ ಬಿಡುಗಡೆ ಆಗಿದ್ದು. ಸಿನಿಮಾದ ಪ್ರಥಮ ಪ್ರದರ್ಶನದ ನೋಡಿದ ಪ್ರೇಕ್ಷಕರು ಟ್ವಿಟರ್ನಲ್ಲಿ ನಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ಟ್ವಿಟ್ಟರ್ನಲ್ಲಿ ‘ಸಿಖಂಧರ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟನಾ,
ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಖಂಧರ್’ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಎ ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪಕ್ಕಾ ಕಮರ್ಶಿಯಲ್ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾವನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗಿದ್ದು, ಮೊದಲ ಪ್ರದರ್ಶನದಲ್ಲಿ ಕಿಕ್ಕಿರಿದು ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಸಿಖಂಧರ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಈ ಕೆಳಗಿನಂತೆ ಇದೆ. ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಸ್ಯಾಮ್ ಎಂಬ ಹೆಸರಿನವರು ಟ್ವೀಟ್ ಮಾಡಿ ಹೀಗೆ ಹೇಳಿದರು, ‘ಸಿಖಂಧರ್’ ಸಿನಿಮಾ ಮಾಸ್ ಎಂಟರ್ಟೈನರ್ ಸಿನಿಮಾ ಜೊತೆಗೆ ಎಮೋಷನ್ಸ್ ಸಹ ಇದೆ. ಸಲ್ಮಾನ್ ಅವರು ತಮ್ಮ ಮ್ಯಾನರಿಸಂ, ಸ್ಟೈಲ್ನಿಂದ ಮರಳು ಮಾಡಿದ್ದಾರೆ. ಆಕ್ಷನ್ ದೃಶ್ಯಗಳಂತೂ ಸಿಳ್ಳೆ ಹೊಡೆಯುವಂತೆ ಇವೆ. ಈ ಸಿನಿಮಾವು ಸಾಮಾಜಿಕ ವಿಷಯ ಹೊಂದಿರುವ ಕಮರ್ಶಿಯಲ್ ಸಿನಿಮಾ ಆಗಿದೆ, ನಿರ್ಮಾಪಕ ಸಾಜಿದ್ ನಾಡಿಯಾವಾಲಗೆ ಸಲ್ಮಾನ್ಗೆ ಯಾವ ರೀತಿಯ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ಗೊತ್ತಿದೆ ಎಂದಿದ್ದಾರೆ. ರಶ್ಮಿಕಾ, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಎಲ್ಲರೂ ತುಂಬ ಚೆನ್ನಾಗಿ ನಟಿಸಿದ್ದಾರೆ. ‘ಸಿನಿಮಾದಲ್ಲಿ ಒಂದು ಸರ್ಪ್ರೈಸ್ ಸಹ ಇದೆ’ ಎಂದಿದ್ದಾರೆ.
ಸೆಲೆಬ್ರಿಟಿ ಸಿನಿಮಾ ವಿಮರ್ಶಕ ತರಣ್ ಆದರ್ಶನ್ ಟ್ವೀಟ್ ಮಾಡಿದ್ದು, ‘ಬ್ಲಾಕ್ ಬಸ್ಟರ್, ಬ್ಲಾಕ್ ಬಸ್ಟರ್, ಬ್ಲಾಕ್ ಬ್ಲಸ್ಟರ್’ ಎಂದು ತೀರ್ಪು ಕೊಟ್ಟಿದ್ದಾರೆ. ‘ಭಜರಂಗಿ ಭಾಯಿಜಾನ್’ ಸಿನಿಮಾದ ಬಳಿಕ ಸಲ್ಮಾನ್ ನಟಿಸಿರುವ ಅತ್ಯುತ್ತಮ ಸಿನಿಮಾ ಇದು. ‘ಸುಲ್ತಾನ್’, ‘ಟೈಗರ್ ಜಿಂದಾ ಹೇ’ ಈ ಸಿನಿಮಾಗಳಿಗಿಂತಲೂ ಈ ತುಂಬ ಉತ್ತಮವಾಗಿದೆ. ಸಿನಿಮಾ ನೋಡುವಾಗ ಕೆಲವು ದೃಶ್ಯಗಳಲ್ಲಿ ಕಣ್ಣೀರು ಬಂತು, ಆಕ್ಷನ್ ಮತ್ತು ಸೆಂಟಿಮೆಂಟ್ ಎರಡನ್ನೂ ಅದ್ಭುತವಾಗಿ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಹಲವು ದೃಶ್ಯಗಳು ಈ ಸಿನಿಮಾದಲ್ಲಿ ರೋಮಾಂಚಕವಾಗಿವೆ ಎಂದಿದ್ದಾರೆ.
ಆದರೆ ಬಾಲಿವುಡ್ನಲ್ಲಿ ನಲ್ಲಿ ಆಫ್ ಬಾಕ್ಸ್ಆಫೀಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ಸಿನಿಮಾದ ಬಗ್ಗೆ ಪೂರ್ತಿಯಾಗಿ ನೆಗೆಟಿವ್ ಅಭಿಪ್ರಾಯಗಳು ವ್ಯಕ್ತಪಡಿಸಲಾಗಿದೆ. ‘ಸಿಖಂಧರ್’ ಸಿನಿಮಾದಲ್ಲಿ ನೋಡಲು ಸಾದ್ಯವಾಗದಷ್ಟು ಕೆಟ್ಟದಾಗಿದೆ. ಸಿನಿಮಾದ ಯಾವ ದೃಶ್ಯದಲ್ಲಿ ಕೂಡ ಜೀವವೇ ಇಲ್ಲ. ಒಂದು ಬೋರ್ ಸಿನಿಮಾ ಇದು. ಸಲ್ಮಾನ್ ಖಾನ್ ಒಂದೇ ಎಕ್ಸ್ಪ್ರೆಶನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಎಆರ್ ಮುರುಗದಾಸ್, ಕತೆ ಹೇಳುವ ಶೈಲಿಯಲ್ಲಿ ಯಾವ ಹೊಸತನ ಇಲ್ಲ. ಆಕ್ಷನ್ ದೃಶ್ಯಗಳು ಸಹ ಫ್ಲ್ಯಾಟ್ ಆಗಿವೆ. ರಶ್ಮಿಕಾ ಹಾಗೂ ಕಾಜಲ್ ಇಬ್ಬರ ಪಾತ್ರಕ್ಕೂ ಪ್ರಾಮುಖ್ಯತೆ ಇಲ್ಲ. ಹಿನ್ನೆಲೆ ಸಂಗೀತ ಚನ್ನಾಗಿಲ್ಲ ಎಂದು ಬರೆದಿದ್ದಾರೆ
ಶಾಹಿದ್ ದರ್ಮಾನಿ ಎಂಬುವರು ಲಂಡನ್ನಲ್ಲಿ ‘ಸೀಖಂಧರ್’ ಸಿನಿಮಾ ವೀಕ್ಷಿಸಿದ್ದು, ಲಂಡನ್ನಲ್ಲಿ ಪ್ರೇಕ್ಷಕರು ಚಿತ್ರ ಮಂದಿರದ ಒಳಗೆ ಸ್ಕ್ರೀನ್ ಮುಂದೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ಹಂಚಿಕೊಂಡಿದ್ದಾರೆ. ‘ಸಿಖಂಧರ್’ ಸಿನಿಮಾ ಅದ್ಭುತವಾಗಿದೆ. ಒಂದೊಳ್ಳೆ ಕಮರ್ಶಿಯಲ್ ಸಿನಿಮಾ, ಸಂಗೀತ, ಆಕ್ಷನ್, ಎಮೋಷನ್ ಎಲ್ಲವೂ ತುಂಬ ಚನ್ನಾಗಿ ಮಿಕ್ಸ್ ಆಗಿ ಮುಡಿ ಬಂದಿದೆ. ಒಳ್ಳೆ ಮನರಂಜನಾ ಸಿನಿಮಾ ಎಂದಿದ್ದಾರೆ.
ಅಖಿಲೇಶ್ ಕುಮಾರ್ ಎಂಬುವರು ಟ್ವೀಟ್ ಮಾಡಿ, ಸಲ್ಮಾನ್ ಖಾನ್ ಅವರ ಕಳೆದ ಕೆಲವು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಸೂಪರ್ ಆಗಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ರವರ ಎಂಟ್ರಿ ಸೀನ್ ಅದ್ಭುತವಾಗಿದೆ. ಆಕ್ಷನ್, ಸೆಂಟಿಮೆಂಟ್ ಮತ್ತು ಹಾಡುಗಳು ತುಂಬ ಚೆನ್ನಾಗಿವೆ ಎಂದಿದ್ದಾರೆ.