ಮೊದಲ ಬ್ಯಾಟಿಂಗ್ ಮುಗಿದ ಬೆನ್ನಲ್ಲೇ ಪಂಜಾಬ್- ಕೋಲ್ಕತ್ತಾ ನಡುವಿನ ಪಂದ್ಯ ರದ್ದುಮಾಡಲು ಕಾರಣವೇನು?
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಸೂರುವಾದ ಐಪಿಎಲ್ ಪಂದ್ಯ ರದ್ದು.
ಒಂದೆ ಓವರ್ನಲ್ಲಿ 7 ರನ್ ಗಳಿಸಿದ್ದ ಕೋಲ್ಕತ್ತಾ.
ನೈಟ್ ರೈಡರ್ಸ್ ಬ್ಯಾಟಿಂಗ್ ಅಬ್ಬರದಿಂದ ಅರ್ಧಶತಕ ಸಿಡಿಸಿದ್ದ ಪ್ರಭಸಿಮ್ರಾನ್.
ಮಳೆ ಬಂದಿರುವ ಕಾರಣದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ 44ನೇ ಐಪಿಎಲ್ ಪಂದ್ಯವನ್ನು ನಿಲ್ಲಿಸಲಾಯಿತು. ಈ ವರ್ಷದ ಅಂದರೆ 2025ರ ಸೀಸನ್ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯ ಫಲಿತಾಂಶ ಇಲ್ಲದೆ ಅಂಕಗಳನ್ನು ಈ ಎರಡೂ ಕಡೆ ತಂಡಗಳಿಗೆ ನೀಡಲಾಗಿದೆ.
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ತಂಡಗಳು ನಿನ್ನೆ ಸಂಜೆ 7:30ಕ್ಕೆ ಗ್ರೌಂಡ್ ಗೆ ಇದವು. ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆದ ಶ್ರೇಯಸ್ ಅಯ್ಯರ್ (Tass) ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ತಮ್ಮ ಬ್ಯಾಟಿಂಗ್ ಆಟವನ್ನು ಪೂರ್ಣಗೊಳಿಸಿದ್ದರು. ಓಪನರ್ಸ್ ಪ್ರಿಯಾಂಶ್ ಆರ್ಯ ಮತ್ತು ಪ್ರಭಾಸಿಮ್ರನ್ ಅವರ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ಗೆ 202 ರನ್ಗಳ ಬೃಹತ್ತಾದ ಮೊತ್ತದ ಗುರಿ ಕೊಡಲಾಯಿತು.
ಇದನ್ನೂ ಓದಿ: ಪಿ ಎಮ್ ಕಿಸಾನ್ ಯೋಜನೆ 20ನೇ ಕಂತು ಬಿಡುಗಡೆ ಆಗುವುದರ ಬಗ್ಗೆ
ಓಪನರ್ ಪ್ರಿಯಾಂಶ್ ಆರ್ಯ ಆರಂಭದಲ್ಲಿ ವೇಗದ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೆಕೆಆರ್ ತಂಡಕ್ಕೆ ಕಾಟವಾಡರು. ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿದ ಸ್ಫೋಟಕ ಬ್ಯಾಟರ್ 8 ಬೌಂಡರಿ, 4 ಅಮೋಘವಾದ ಸಿಕ್ಸರ್ಗಳಿಂದ 69 ರನ್‌ಗಳನ್ನು ಗಳಿಸಿದರು. ಇದು ಪಂಜಾಬ್ ತಂಡಕ್ಕೆ ತಂದು ಕೊಟ್ಟ ಕಾಣಿಕೆಯನ್ನಬಹುದು. ರಸೆಲ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಹೊರಗೆ ಹೊದರು.
ಪ್ರಿಯಾಂಶ್ ಆರ್ಯ ಜೊತೆ ಕ್ರೀಸ್ಗೆ ಆಗಮಿಸಿದ್ದ ಓಪನರ್ ಪ್ರಭಾಸಿಮ್ರನ್ ಕೂಡ ಕೆಕೆಆರ್ ಬೌಲರ್ಗಳ ವಿರುದ್ಧ ರನ್ ಗಳ ಸುರಿಮಳೆ ತಂದು ಕೊಟ್ಟರು ಆರ್ಯಗಿಂತ ತುಸು ಜೋರಾಗಿಯೇ ಬ್ಯಾಟ್ ಬೀಸಿದ ಪ್ರಭಾಸಿಮ್ರನ್ ಸ್ಫೋಟಕ 83 ರನ್‌ಗಳನ್ನು ಬಾರಿಸಿದರು. ಕೇವಲ 49 ಬೌಲ್ಗಳನ್ನು ಆಡಿದ ಪ್ರಭಾಸಿಮ್ರನ್ 6 ಬೌಂಡರಿ 6 ಆಕಾಶದ ಎತ್ತರಕ್ಕೆ ಸಿಕ್ಸರ್ಗಳನ್ನು ಹೊಡೆದರು.
ಆದರೆ ಕೆಕೆಆರ್ನ 2ನೇ ಇನ್ನಿಂಗ್ಸ್ನಲ್ಲಿ ಆರಂಭವಾಗಿ ಸುನಿಲ್ ನೈರನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಬ್ಯಾಟಿಂಗ್ ಆರಂಭಿಸಿ ಒಂದು ಓವರ್ ಆಡಿ 7 ರನ್‌ಗಳನ್ನು ಗಳಿಸಿದ್ದರು. ಇನ್ನೊಂದು ಓವರ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜೋರಾಗಿ ಮಳೆಯ ಜೊತೆಗೆ ಕೆಟ್ಟದಾದ ವಾತಾವರಣ ಏರ್ಪಟ್ಟಿದೆ. ಇದರಿಂದ ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ತಲಾ ಒಂದೊಂದು ಅಂಕ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಮ್ಯಾಚ್ ನಡೆಯುವ ವೇಳೆಯಲ್ಲಿ ಮಳೆ ಬಂದಿರುವುದರಿಂದ ಮೈದಾನದಿಂದ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್ನಕಡೆ ಓಡಿ ಹೋದರು. ಕೆಕೆಆರ್ ಸೆಕೆಂಡ್ ಬ್ಯಾಟಿಂಗ್ ಎನೋ ಆರಂಭಿಸಿತ್ತು. ಆದರೆ (bad atmosphere) ಹಾಗೂ ಮಳೆ ಇದ್ದಿದ್ದರಿಂದ ಪಂದ್ಯವನ್ನೇ ರದ್ದು ಎಂದು ಘೋಷಣೆ ಮಾಡಿ ಒಂದೊಂದು ಪಾಯಿಂಟ್ ಕೊಡಲಾಗಿದೆ. ಪಂದ್ಯದಲ್ಲಿ ಒಂದು ಓವರ್ ಮಾತ್ರ ಆಡಿತು (kkr) ಇನ್ನಾ 19 ಓವರ್ಗಳಲ್ಲಿ 195 ರನ್‌ಗಳನ್ನು ಗಳಿಸಬೇಕಿತ್ತು. ಆದರೆ ಮಳೆಯ ಕಾರಣದಿಂದ ಮ್ಯಾಚ್ ಅನ್ನು ಸ್ಥಗಿತಗೊಳಿಸಲಾಯಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.