ಮೂರು ತಿಂಗಳು ಆದರೂ ಇನ್ನೂ ಬಂದಿಲ್ಲ ಗೃಹಲಕ್ಷ್ಮಿ ಹಣ: ಗದಗದಲ್ಲಿ ಸಿಡಿದೆದ್ದ ಮಹಿಳೆಯರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಮನೆಯ ಯಜಮಾನನಿಗೆ 2000 ಹಣ ಬರಬೇಕು ಆದರೆ ಮೂರು ತಿಂಗಳಿಂದ ಖಾತೆಗೆ ವರ್ಗಾವಣೆಯಾಗದೆ ಆಗದಿರುವ ಕಾರಣ ಗದಗದಲ್ಲಿ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನುಡಿದಂತೆ ನಡೆಯದಿದ್ದರೆ ಮುಂದಿನ ಬಾರಿ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಗೃಹಿಣಿಯರಿಗೆ ಗೃಹಲಕ್ಷ್ಮೀಯ ಹಣ ಮೂರು ತಿಂಗಳಿನಿಂದ ಬಾರದೆ ಇರುವ ಕಾರಣ ಕೋಪಗೊಂಡಿದ್ದಾರೆ. ಜನೆವರಿ, ಪೆಬ್ರವರಿ, ಮಾರ್ಚ್ ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಕಾಂಗ್ರೆಸ್ ಪಕ್ಷವು ಉಚಿತ ಯೋಜನೆಗಳ ಭವರಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡು ರಾಜ್ಯದ ಜನರಿಗೆ, ಮಹಿಳೆಯರಿಗೆ ಮೋಸ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ನುಡಿದಂತೆ ನಡಯದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ಕೊಡುತಿದ್ದರೆ.
ಗದಗ ಜಿಲ್ಲೆಯಲ್ಲಿ ಬರುವ ಲಕ್ಷ್ಮೇಶ್ವರ ಎಂಬ ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳಾ ಫಲಾನುಭವಿಗಳು, ಸನ್ಮಾನ್ಯ ಸಿಎಂ ಸಿದ್ಧರಾಮಯ್ಯನವರು ಪದೇ ಪದೇ, ‘‘ನಮ್ಮದು ನುಡಿದಂತೆ ನಡೆಯುವ ಸರ್ಕಾರ’’ ಎಂದೆಲ್ಲಾ ಹೆಳುತಿದ್ದರಲ್ಲ ಆದರೆ ಇವಾಗ ಎಲ್ಲಿ ನಡಿತಿದೆ ರೀ ನುಡಿದಂತೆ ಎಂದು ಪ್ರೆಶ್ನೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ ಎಂದು ಹೇಳುತಿದ್ದರು ಆದರೆ, ಈಗ ಮೂರು ತಿಂಗಳುಗಳಾದರು ಹಣ ಬಂದಿಲ್ಲ. ಎಲ್ಲಿದೆರಿ ನುಡಿದಂತೆ ನಡೆದ ಸರ್ಕಾರ ಎಂದು ಪ್ರಶ್ನೆ ಮಾಡಿದ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ
ಗ್ಯಾರಂಟಿ ಯೋಜನೆಗಳನ್ನು ನೀಡಿ ಎಂದು ಯಾರೂ ಇವರಿಗೆ ಕೇಳಲಿಲ್ಲ, ಚುನಾವಣೆಯಲ್ಲಿ ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಮಹಿಳೆಯರು ಕೊಪಗೊಂಡಿದ್ದರೆ. ಸರ್ಕಾರದ ಈ ಗೃಹಲಕ್ಷ್ಮಿ ಹಣದ ಮೇಲೆ ಅವಲಂಬಿತರಾಗಿದ್ದೆವೆ, ಈಗ ಹಣ ವರ್ಗಾವಣೆ ಮಾಡದೇ ಇರುವುದರಿಂದ ಮನೆ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣಕ್ಕೂ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಸಾಕಷ್ಟು ಜನ ಮಹಿಳೆಯರು ಗ್ಯಾರಂಟಿಗಳನ್ನೇ ಅವಲಂಬಿಸಿ ಮನೆ ನಡೆಸುತ್ತಿದ್ದರೆ, ಗ್ಯಾರಂಟಿಗಳನ್ನು ನಮಗೆ ಸರಿಯಾಗಿ ತಲುಪುವಂತೆ ಮಾಡಿ ಎಂದು ಮಹಿಳಾ ಫಲಾನುಭವಿ ಗದಗ ನ ಮಾನವ್ವ ಎಂಬವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೂರು ತಿಂಗಳ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗುವುದಿಲ್ಲ. ಹಂತ ಹಂತವಾಗಿ ಮನೆಯ ಯಜಮಾನನಿಯ ಬ್ಯಾಂಕ್ ಖಾತೆಗೆ ಜಮಾ
ಗ್ಯಾರಂಟಿ ಯೋಜನೆಗಳಲ್ಲಿ ಈ ಗೃಹಲಕ್ಷ್ಮೀ ಯೋಜನಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯಾ ಅಥವಾ ಇಲವಾ ಎಂಬುದರ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಒಂದು ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಭೆ ಮಾಡಿ ಸುಮ್ಮನೆ ಕೂತಿದ್ದಾರೆ. ಸಂತೆಯಲ್ಲಿ ಹೋಗಿ ಮಹಿಳೆಯರನ್ನು ಮಾತನಾಡಿಸಿ ಪೋಟೋ ತೆಗಿಸಿಕೊಂಡು ಪೋಸ್ ಕೊಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಪೋಷ್ಟ್ ಮಾಡುತ್ತಾರೆ. ಆದರೆ, ಹೆಣ್ಣುಮಕ್ಕಳ ಕಷ್ಟ ಅವರ ಮನೆಯ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಫಲಾನುಭವಿ ಮಹಿಳೆಯರು ಆರೋಪಿಸಿದ್ದಾರೆ.
ಸ್ನೇಹಿತರೆ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.