ಉದ್ಯೋಗದ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಖಾಲಿ ಇರುವ ಎಂಟು ಸಾವಿರ ಕಾನ್ಸ್ಟೇಬಲ್ ಹಾಗೂ 1,000 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ದಿನಗಳಿಂದ ನಿಂತ ಹೋಗಿದ್ದ ಪಿಎಸ್ಐ, ಅಂದರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆಗೆ ಈಗ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ಐದು ವರ್ಷಗಳಿಂದ ಪಿಎಸ್ಐ ಉದ್ಯೋಗಗಳಿಗೆ ನೇಮಕಾತಿ ನಡೆಯದಿದ್ದರೂ, ಈಗ ಒಂದು ಸಾವಿರ ಕಾಲಿ ಉದ್ಯೋಗಗಳನ್ನು ಆದಷ್ಟು ಬೇಗ ಬರ್ತಿ ಮಾಡಲಾವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ನಡೆದ ನೇಮಕಾತಿ ಹಗರಣದ ಬಳಿಕ ಈ ಪ್ರಕ್ರಿಯೆ ನಿಂತುಹೋಗಿತ್ತು. ಆದರೆ ಈಗ ಸರ್ಕಾರವು ಪಾರದರ್ಶಕ ಹಾಗೂ ನ್ಯಾಯಯುತವಾದ ನೇಮಕಾತಿಗೆ ಕೈ ಹಾಕಿದೆ. ಇದರೊಂದಿಗೆ ಈಗಾಗಲೇ 500 ಪಿ ಎಸ್ ಐ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಪಡೆಯುತ್ತಾ ಇದ್ದಾರೆ.
ಇದನ್ನು ಓದಿ: ರೇಷನ್ ಮತ್ತು ಗೃಹಲಕ್ಷ್ಮಿ ಲಾಭ ಇಂತವರಿಗೆ ಸಿಗೋದಿಲ್ಲ. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.
8000 ಕಾನ್ಸ್ಟೇಬಲ್ ಉದ್ಯೋಗಗಳಿಗೂ ನೇಮಕಾತಿ.
ಗೃಹ ಸಚಿವರು ತಿಳಿಸಿರುವಂತೆ, ರಾಜ್ಯದಾದ್ಯಂತ 8000 ಕಾನ್ಸ್ಟೇಬಲ್ ಉದ್ಯೋಗಗಳು ಖಾಲಿ ಇವೆ. ಇವುಗಳನ್ನು ಆದ್ಯತೆಯ ಆಧಾರದ ಮೇರೆಗೆ ಬರ್ತಿ ಮಾಡಲಾಗುವುದು. ಇದರೊಂದಿಗೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸೌಕರ್ಯಗಳನ್ನು ಹೆಚ್ಚಿಸಲು, ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಗಳು ಹಾಗೂ ಇತರೆ ಪೊಲೀಸ್ ಸೌಕರ್ಯಗಳಿಗೆ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಕೊಡಲಾಗುವುದು.
ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?
ಆಳಂದ ಶಾಸಕ ಬಿ.ಆರ್. ಪಾಟೀಲ್ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು ಜಿ ಜಿ.ಆರ್. ಪಾಟೀಲ್ ಅವರು ಹಿರಿಯ ನಾಯಕರು ಹಾಗೂ ಅವರ ಆರೋಪಗಳು ಸರ್ಕಾರದ ವಿರುದ್ಧ ಅಲ್ಲ, ಅವರ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ನಾವು ಎಲ್ಲರ ಕೆಲಸಗಳಿಗೂ ಸಮಾನ ಆದ್ಯತೆ ಕೊಡುತ್ತೇವೆ ಹಾಗೂ ಯಾರನ್ನು ತೇಜೋವಧೆ ಮಾಡುವ ಉದ್ದೇಶ ನಮ್ಮಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಕರ್ನಾಟಕ ಬ್ಯಾಂಕ್ ಬ್ಯಾಂಕ್‌ನಲ್ಲಿ ಕೃಷಿಮಾಡಲು ಭೂಮಿ ಖರೀದಿ ಮಾಡಲು ಸಾಲ ಸೌಲಭ್ಯ
ಇದು ಯುವ ಜನರಿಗೆ ದೊಡ್ಡ ಅವಕಾಶ ಎಂದು ಹೇಳಬಹುದು.
ಈ ನೇಮಕಾತಿಯ ಪ್ರಕ್ರಿಯೆಯು ಬೇರೆಯವರಿಗೆ ಉದ್ಯೋಗದ ಅವಕಾಶವನ್ನು ಸೃಷ್ಟಿಸುವುದರೊಂದಿಗೆ ಪೋಲಿಸ್ ಇಲಾಖೆಯ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಉದ್ಯೋಗದ ಆಕಾಂಕ್ಷಿಗಳು ಅಧಿಕೃತ ಸರಕಾರಿ ಅದಿಸೂಚನೆಗಳಿಗಾಗಿ ಕಾಯಬೇಕಾಗಿದೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.