Kannadigas win at CSK Fort, RCB defeats Chennai team after 17 years!
CSK vs RCB: CSK ಕೋಟೆಯಲ್ಲಿ ಕನ್ನಡಿಗರ ಜಯಬೆರಿ, 17 ವರ್ಷಗಳ ನಂತರ ಚೆನ್ನೈ ತಂಡವನ್ನ ಮಣಿಸಿದ ಆರ್ಸಿಬಿ!
ಚೆನ್ನೈನಲ್ಲಿ RCB ಗೆಲುವು ಸಾಧಿಸಿದೆ. 17 ವರ್ಷಗಳ ನಂತರ CSK ತಂಡವನ್ನು ಅವರದೇ ಗ್ರೌಂಡ್ನಲ್ಲಿ ನಲ್ಲಿ CSK ತಂಡವನ್ನು ಸೋಲಿಸಿದೆ. ರಜತ್ ಪಾಟೀದಾರ್ ರವರ ನೇತೃತ್ವದಲ್ಲಿ ಅದ್ಭುತ ಗೆಲುವು.
ಚೆನ್ನೈ (ಮಾ.28): ತಮಿಳು ನಾಡಿನ ಕೋಟೆಯಲ್ಲಿ ಕೊನೆಗೂ ಕನ್ನಡಿಗರ ಟೀಮ್ನ ಜಯಬೆರಿ. ಕನ್ನಡಿಗರು ಖುಷಿ ಪಡುವ ವಿಷಯ ಯಾಕೆಂದರೆ ಇಲ್ಲಿಗೆ ಬರೋಬ್ಬರಿ 17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ರೋಮಾಂಚಕ ಪ್ರದರ್ಶನ ನೀಡಿದೆ, ರಜತ್ ಪಾಟೀದಾರ್ ನೇತೃತ್ವದ ಆರ್ಸಿಬಿ ತಂಡವು 50 ರನ್ಗಳಿಂದ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಇತಿಹಾಸ ಬರೆದಿದೆ. ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ತಂಡ 7 ವಿಕೆಟ್ಗೆ 196 ರನ್ ಗಳನ್ನು ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂದ್ಯದ ಯಾವ ಹಂತದಲ್ಲೂ ಚೇಜ್ ಮಾಡುವ ಪ್ರಯತ್ನದಲ್ಲಿ ವಿಪುಲವಾಯಿತು.
ಇನ್ನಿಂಗ್ಸ್ನ 2ನೇ ಓವರ್ ಬೌಲಿಂಗ್ ಮಾಡಿದ ಜೋಸ್ ಹ್ಯಾಸಲ್ವುಡ್ ನಾಲ್ಕು ಬೌಲ್ ಗಳ ಅಂತರದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಟಗಾರರಾದ ರಾಹುಲ್ ತ್ರಿಪಾಠಿ ಮತ್ತು ರುತುರಾಜ್ ಗಾಯಕ್ವಾಡ್ರನ್ನು ಔಟ್ ಮಾಡಿದರು. ನಂತರ ಚೆನ್ನೈ ತಂಡ ಗೆಲುವಿನ ಚೇಜ್ ಉಳಿಸಲು ಉಳಿಕೊಳ್ಳಲಿಲ್ಲ. ತದನಂತರ ಹಂತ ಹಂತವಾಗಿ ಪ್ರಮುಖವಾದ ವಿಕೆಟ್ಗಳನ್ನು ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 10, ಓವರ್ ಮುಗಿಯುವ ಅಂತರದಲ್ಲಿ ಪಂದ್ಯ ಗೆಲ್ಲುವ ಯಾವುದೇ ಲಕ್ಷಣ ಕಾಣಿಸಲಿಲ್ಲ. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡಿತು, 148 ರನ್ ಗಳಿಸುವುದಕಷ್ಟೆ ಶಕ್ತವಾಯಿತು.
15 ಓವರ್ಗಳ ವೇಳೆಗೆ ಚೆನ್ನೈ ತಂಡ 99 ರನ್ಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ನಲ್ಲಿ ಜಡೇಜಾಗೆ ಧೋನಿ ಜೊತೆಯಾದಾಗ ಮಾತ್ರ ಚೆನ್ನೈ ಫ್ಯಾನ್ಸ್ಗಳ ಕಡೆಯಿಂದ ಗೆಲುವಿನ ಕೂಗು ಬಂದಿತು. ಆದರೆ, ಧೋನಿ ಬಂದರೂ ಚೆನ್ನೈ ತಂಡಕ್ಕೆ ಗೆಲುವು ಕಾಣುವ ಯಾವುದೇ ಲಕ್ಷಣ ಕಂಡು ಬರಲಿಲ್ಲ. CSK ತಂಡದ ಪರವಾಗಿ ಮೊದಲಿಗೆ ರಚಿನ್ ರವೀಂದ್ರ 31 ಬಾಲ್ ಗಳಲ್ಲಿ 5 ಬೌಂಡರಿ ಹೊಡೆದು 41 ರನ್ ಗಳಿಸಿ ಔಟಾದರು. ಹಾಗೆ ರಾಹುಲ್ ತ್ರಿಪಾಠಿ ರವರು 5 ರನ್, ರುತುರಾಜ್ ಗಾಯಕ್ವಾಡ್ 0, ದೀಪಕ್ ಹೂಡಾ 4, ಸ್ಯಾಮ್ ಕರನ್ 8 ರನ್ ಹೀಗೆ ಒಂದಂಕಿ ಸಂಖ್ಯೆಯಲ್ಲಿ ಔಟಾದರು. ರವಿಚಂದ್ರನ್ ಅಶ್ವಿನ್ 11 ರನ್ ಗಳಿಸುವದರಲ್ಲಿ ಯಶಸ್ವಿಯಾದರು.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆರ್ಸಿಬಿ ಅದ್ಭುತವಾದ ಪ್ರದರ್ಶನವನ್ನು ನೀಡಿತು. ರತಜ್ ಪಾಟಿದಾರ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ಹಾಗೂ ಜಿತೇಶ್ ಶರ್ಮ ಬ್ಯಾಟಿಂಗ್ನಲ್ಲಿ ಗಮನಸೆಳೆದರು; ಇತ್ತ ಬೌಲಿಂಗ್ನಲ್ಲಿ ಜೋಸ್ ಹ್ಯಾಸಲ್ವುಡ್ ಮತ್ತು ಭುವನೇಶ್ವರ್ಕುಮಾರ್ ಬೌಲಿಂಗ್ನಲ್ಲಿ ನಲ್ಲಿ ಚೆನ್ನೈ ತಂಡವನ್ನು ಕಟ್ಟಿಹಾಕುವದರಲ್ಲಿ ಯಶಸ್ವಿಯಾದರು. ಯಶ್ ದಯಾಳ್ ಹಾಕಿದ 13ನೇ ಓವರ್ನಲ್ಲಿ ರಚಿನ್ ರವೀಂದ್ರ ಮತ್ತು ಶಿವಂ ದುಬೆ ವಿಕೆಟ್ ಕಳೆದುಕೊಂಡರು; ಆಗ ತಂಡದ ಹೋರಾಟದ ಮೇಲೆ ಪರಿಣಾಮ ಬೀರಿತು. ಎಂಎಸ್ ಧೋನಿ, ಅಶ್ವಿನ್ಗಿಂತ ಕೆಳ ಕ್ರಮಾಂಕದಲ್ಲಿ 9ನೇ ಬ್ಯಾಟ್ಸ್ಮನ್ ಆಗಿ ಕ್ರೀಜ್ ಗೆ ಇಳಿದಿದ್ದು ಅಚ್ಚರಿ ಮೂಡಿಸಿದರು. 16 ಬಾಲ್ ಬಾಲ್ಗಳಲ್ಲಿ 30 ರನ್ ಗಳಿಸುವ ಮೂಲಕ ಐಪಿಎಲ್ನಲ್ಲಿ ಸಿಎಸ್ಕೆ ಪರವಾಗಿ ಜಾಸ್ತಿ ರನ್ ಗಳಿಸಿದ ಬ್ಯಾಟ್ಸ್ಮನ್ ಎಂದು ಎನಿಸಿಕೊಂಡರು.
ಆರ್ಸಿಬಿ ಎದುರಿನ ಪಂದ್ಯಕ್ಕೂ ಮುಂಚೆ ಕೊಹ್ಲಿ ಬಗ್ಗೆ ಮಾತನಾಡಿದ ಸಿಎಸ್ಕೆ ಕ್ಯಾಪ್ಟನ್ ಗಾಯಕ್ವಾಡ್!
ಆರ್ಸಿಬಿ ತಂಡ ತನ್ನ ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದ್ದು, ಇದು ಹಾಲಿ ಸೀಸನ್ನಲ್ಲಿ ತವರಿನ ಮೈದಾನ ಚಿನ್ನಸ್ವಾಮಿಯಲ್ಲಿ ತಂಡದ ಮೊದಲ ಆಟವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರವಿವಾರ ಗುವಾಹಟಿಯಲ್ಲಿ ಎದುರಿಸಲಿದೆ.