“We need good criticism, not personal attacks” – Naseem Shah

Spread the love

“We need good criticism, not personal attacks” – Naseem Shah

“ಒಳ್ಳೆಯ ಟೀಕೆ ಬೇಕು, ವೈಯಕ್ತಿಕ ದಾಳಿಗಳು ಬೇಡ” – ನಸೀಮ್ ಶಾ

ಪಾಕಿಸ್ತಾನದ ಕ್ರಿಕೆಟ್ ಆಟಗಾರ ನಸೀಮ್ ಶಾ, ಆಟಗಾರರ ಮೇಲೆ ನಡೆಯುವ ವೈಯಕ್ತಿಕ ಟೀಕೆಗಳ ಬಗ್ಗೆ ಬೆಜಾರ ಬೆಜಾರಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈದ್ ಹಬ್ಬದ ಗೋಸ್ಕರ ಬಿಡುಗಡೆ ಮಾಡಿದ ವೀಡಿಯೋದಲ್ಲಿ ದಲ್ಲಿ ಅವರು ತಮ್ಮ ಸಹ ಆಟಗಾರರಾದ ಫಖರ್ ಜಮಾನ್ ಮತ್ತು ಮೊಹಮ್ಮದ್ ರಿಜ್ವಾನ್ ಜೊತೆ ಈ ವಿಷಯದ ಬಗ್ಗೆ ಮಾತನಾಡಿದರು.

“ನಮ್ಮ ಆಟದ ಬಗ್ಗೆ ಟೀಕೆ ಮಾಡಬಹುದು, ಅದು ನಮಗೆ ಸುಧಾರಿಸಲು ಸಹಾಯ ಮಾಡುತ್ತದೆ. ತಪ್ಪಿದಲ್ಲಿ ತಿದ್ದಿಕೊಳ್ಳುತಿವಿ, ಆದರೆ ವೈಯಕ್ತಿಕವಾಗಿ ಮಾತನಾಡ ಬೇಡಿ, ಅದು ಸರಿ ಅಲ್ಲ, ಅನಗತ್ಯ ಮತ್ತು ನಮಗೆ ನೋವುಂಟು ಮಾಡುತ್ತವೆ” ಎಂದು ನಸೀಮ್ ಹೇಳಿದರು. ಕೆಲವರು ಆಟಗಾರರ ಬಣ್ಣ, ಕೇಶವಿನ್ಯಾಸ, ಮಾತನಾಡುವ ರೀತಿಯ, ಅಥವಾ ವ್ಯಕ್ತಿತ್ವದ ಬಗ್ಗೆ ಟೀಕೆ ಮಾಡುತ್ತಾರೆ; ಅದು ಒಳ್ಳೆಯದು ಅಲ್ಲ, ಎಂದು ಅವರು ಹೇಳಿದರು.

“ನಾವು ಮನೆಗೆ ಹೋದಾಗ ನಮ್ಮ ಅಣ್ಣ ತಮ್ಮಂದಿರೂ ಕೆಲವೊಮ್ಮೆ ಟೀಕೆ ಮಾಡುತ್ತಾರೆ. ಆದರೆ, ನಮ್ಮ ಕೆಲಸದ ವಿಷಯದ ಬಗ್ಗೆ ಮಾತಾಡಿದರೆ ನಮಗೆ ಸಹಾಯ ಮಾಡುತ್ತದೆ, ಎಂದು ನಸೀಮ್ ಶಾ ಹೇಳಿದರು. ಹಿರಿಯ ಕ್ರಿಕೆಟಿಗರಿಂದ constructive ಮಾತುಗಳು ಬರಬೇಕೆ ಹೊರತು, ನೋವು ಕೊಡುವ ಟೀಕೆಗಳು ಅಥವಾ ಮಾತುಗಳು ಅಲ್ಲ ಎಂದರು.

ಫಖರ್ ಜಮಾನ್ ಕೂಡ ಇದನ್ನು ಬೆಂಬಲಿಸಿ, “ಮಾಜಿ ಕ್ರಿಕೆಟಿಗರನ್ನು ಗೌರವಿಸುವುದು ಅಂದರೆ ಅವರ ಬ್ಯಾಡ್ ಟೀಕೆಗಳನ್ನು ಅಥವಾ ಮಾತುಗಳನ್ನು ಸಹಿಸುವುದು ಎಂಬುದಲ್ಲ” ಎಂದು ಹೇಳಿದರು.

WhatsApp Group Join Now
Telegram Group Join Now       

ನಸೀಮ್ ಶಾ ಅಂತಿಮವಾಗಿ, “15 ವರ್ಷ ಕ್ರಿಕೆಟ್ ಆಡಿದವರು, ಆಟದ ಬಗ್ಗೆ ಟೀಕೆ ಮಾಡಿದರೆ ಸರಿ, ಆದರೆ ವೈಯಕ್ತಿಕ ಮಾತುಗಳು ಯಾರಿಗೆ ಆಗಲಿ ಬೇಸರ ತರಿಸುತ್ತವೆ” ಎಂದು ಹೇಳಿದರು. ಅವರ ಗುರಿ ಟೀಕೆಗಳಿಗೆ ಒತ್ತು ಅಥವಾ ಯೋಚಿಸುವದಕಿಂತ, ತಮ್ಮ ಆಟವನ್ನು ಉತ್ತಮಗೊಳಿಸುವ ಕಡೆ ಗಮನ ಕೊಟ್ಟರೆ ಒಳಿತು ಎಂದು ತಿಳಿಸಿದರು.

 

WhatsApp Group Join Now
Telegram Group Join Now       

Leave a Comment