Mohammed Siraj: It really hurt when I wasn’t selected: Mohammed Siraj is upset,
Mohammed Siraj: ಆಯ್ಕೆ ಮಾಡದಿದ್ದಾಗ ನಿಜವಾಗಿಯೂ ತುಂಬಾ ನೋವಾಗಿತ್ತು: ಮಹಮ್ಮದ್ ಸಿರಾಜ್ ಬೇಸರ,
IPL 2025 SRH vs GT: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮತ್ತು 19ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯಗಳಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 152 ರನ್ ಗಳಿಸಿತು. ಈ ಗುರಿಯನ್ನು ಚೇಜ್ ಮಾಡಿ, ಗುಜರಾತ್ ಟೈಟಾನ್ಸ್ ತಂಡ 16 ಓವರ್ 4 ಬಾಲ್ ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿಯಾದ ಜಯ ಸಾಧಿಸಿದೆ.
IPL 2025: ಐಪಿಎಲ್ನ 19ನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ರೋಮಾಂಚಕ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೈದಾರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ಪ್ರದರ್ಶನ ಮಾಡಿ ಮಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಿತ್ತುಕೊಂಡಿದ್ದಾರೆ. ಈ ರೋಚಕ ಪ್ರದರ್ಶನದ ಫಲದಿಂದ, ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು.
ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಮೊಹಮ್ಮದ್ ಸಿರಾಜ್ ಅವರು, ತವರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ನನಗೆ ತುಂಬಾ ಖುಷಿ ನೀಡಿದೆ. ಏಕೆಂದರೆ ಇಂದಿನ ಪಂದ್ಯ ವೀಕ್ಷಿಸಲು ನನ್ನ ಕುಟುಂಬಸ್ಥರು ಸ್ಟೇಡಿಯಂಗೆ ಬಂದಿದ್ದರು. ಹಾಗಾಗಿಯೇ ಅವರ ಮುಂದೆ ಉತ್ತಮ ಪ್ರದರ್ಶನ ನೀಡಿರುವುದು ವಿಶೇಷ ಅನುಭವ ಎಂದು ಹೇಳಿದರು.
ಇನ್ನು ನಾನು 7 ವರ್ಷಗಳ ವರೆಗೆ ಆರ್ಸಿಬಿ ಪರ ಆಡಿದ್ದೇನೆ. ಈ ಸಮಯದಲ್ಲಿ ನನ್ನ ಬೌಲಿಂಗ್ ಉತ್ತಮಗೊಳಿಸಲು ಮತ್ತು ಮನಸ್ಥಿತಿ ಬದಲಿಸಲು ಶ್ರಮ ಹಾಕಿರುವೆನು. ನಿಜವಾಗಿಯೂ ಅದು ಈಗ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಖುಷಿ ಹಂಚಿಕೊಂಡರು.