HAL invites applications for various posts.
ಎಚ್ ಎ ಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ,
ಉದ್ಯೋಗ ಆಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಇದಾಗಿದ್ದು, ಹಿಂದುಸ್ತಾನ್ ಹಿರೋನಾಟಿಕ್ಸ್ ಲಿಮಿಟೆಡ್ ಅಂದ್ರೆ ಎಚ್ಎಲ್ ಎಲ್ ನೇಮಕಾತಿ 2025 ರ.
ಉದ್ಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಈ ಉದ್ಯೋಗಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಪ್ರಕಟಣೆ ಮಾಡಲಾಗಿದೆ. ಇದು ಅದ್ಭುತವಾದ ಉದ್ಯೋಗ ಅವಕಾಶ ಎಂದು ಹೇಳಬಹುದು. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು ಈ ಕೆಳಗೆ ಕೊಡಲಾದ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಈ ವರದಿಯನ್ನು ತಾವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಯನ್ನು ಪರಿಪೂರ್ಣವಾಗಿ ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
HAL ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ಸಂಸ್ಥೆಯು 2025ನೇ ಸಾಲಿನ ನೇಮಕಾತಿಯ ಪ್ರಕ್ರಿಯೆ ಪ್ರಾರಂಭಿಸಿದೆ.ಇಚ್ಛೆ ಉಳ್ಳವರು ಮತ್ತು ಅರ್ಹತೆ ಇರುವವರು HAL ಅಧಿಕೃತ ವೆಬ್‌ಸೈಟ್‌ನಲ್ಲಿ, ನಲ್ಲಿ ಅಂದರೆ ಆನ್ಲೈನಿನಲ್ಲಿ, ಅರ್ಜಿ ಸಲ್ಲಿಸಬಹುದು.
ಉದ್ಯೋಗಗಳ ವಿವರ ಹೀಗಿವೆ.
• ಆಪರೇಟರ್ (ಸೀಟ್ ಮೆಟಲ್ ವರ್ಕರ್) (ಸ್ಕೇಲ್-ಸಿ5) 01
• ಆಪರೇಟರ್ (ಮಸಿನಿಸ್ಟ್) (ಸ್ಕೇಲ್ ಸಿ5) 03
• ಡಿಪ್ಲೋಮಾ ಟೆಕ್ನಿಷಿಯನ್ಸ್ (ಮೆಕ್ಯಾನಿಕಲ್) (ಸ್ಕೇಲ್ ಡಿ 6) 20
• ಡಿಪ್ಲೋಮಾ ಟೆಕ್ನಿಷಿಯನ್ಸ್ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಶನ್/ (ಸ್ಕೇಲ್- ಡಿ 6) 26
• ಆಪರೇಟರ್ (ಫಿಟ್ಟರ್) (ಸ್ಕೇಲ್ ಸಿ5) 34
• ಆಪರೇಟರ್ (ಎಲೆಕ್ಟ್ರಿಷಿಯನ್) (ಸ್ಕೇಲ್ ಸಿ5) 14
ಈ ಹುದ್ದೆಗೆ ಅರ್ಜಿ ಹಾಕುವವರ ಅರ್ಹತೆ ಮತ್ತು ವಯೋಮಿತಿ.
ಅರ್ಹತೆ, ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಡಿಪ್ಲೋಮೋ ಅಥವಾ ಐಟಿಐ ಪೂರೈಸಿದ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ 31 ಮಾರ್ಚ್ 2025ರ ಅನುಸಾರವಾಗಿ
ಸರ್ಕಾರದ ನೇಮದ ಪ್ರಕಾರ ಸಾಮಾನ್ಯ, ಆರ್ಥಿಕವಾಗಿ ದುರ್ಬಲ ವರ್ಗ, ಅಭ್ಯರ್ಥಿಗಳು 28 ವರ್ಷ ಆಗಿರಬೇಕು. ಹಾಗೆ ಮೀಸಲಾತಿ ವರ್ಗಕ್ಕೆ ಸೇರಿದ ಅರ್ಜಿದಾರರಿಗೆ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ನೀವು ಈ ಹುದ್ದೆಗೆ ಅರ್ಜಿಯನ್ನು ಯಾಕೆ ಸಲ್ಲಿಸಬೇಕು.
1. ಎಚ್ ಎ ಎಲ್ ಸರ್ಕಾರದ ಉನ್ನತ ಸಂಸ್ಥೆಯಾಗಿದ್ದು ಉದ್ಯೋಗ ಭದ್ರತೆಗೆ ಭರವಸೆ ನೀಡುತ್ತದೆ
2. ಆಕರ್ಷಕ ವೇತನ ಮತ್ತು ಹಲವಾರು ಅನುಕೂಲಗಳೊಳಗೊಂಡ ಉದ್ಯೋಗ ಇದಾಗಿದೆ.
3. ಆಧುನಿಕ ತಂತ್ರಜ್ಞಾನ ಮತ್ತು ತಜ್ಞರ ಮಾರ್ಗದರ್ಶನದಲ್ಲಿ, ಇಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.
4. ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಪಾತ್ರ ವಹಿಸುವ ಅವಕಾಶ ನಿಮ್ಮದಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
• ಎಚ್ ಎ ಎಲ್ ಅಧಿಕೃತ ವೆಬ್ಸೈಟ್ hal-india.co.in ಗೆ ಭೇಟಿ ನೀಡಿರಿ.
• ರಿಕ್ವೈರ್ಮೆಂಟ್ ವಿಭಾಗಕ್ಕೆ ಹೋಗಿ ಸಂಬಂಧಿತ ಅಧಿ ಸೂಚನೆಗಳನ್ನು ಓದಿ.
• ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಹಾಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅರ್ಜಿ ಶುಲ್ಕವನ್ನು ಇದ್ದರೆ ಪಾವತಿಸಿ ಇಲ್ಲದಿದ್ದರೆ ಬಿಡಿ.
• ಅರ್ಜಿ ಸಲ್ಲಿಸಿದ ಬಳಿಕ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ. ಹಾಗೆ ಅದನ್ನು ಭವಿಷ್ಯಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ 4ನೇ ತಾರೀಕು ಏಪ್ರಿಲ್ ತಿಂಗಳ 2025.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ತಾರೀಕು ಏಪ್ರಿಲ್ 2025.