Rapido,Uber ಬೈಕ್ ಟ್ಯಾಕ್ಸಿ ಸೇವೆ ತಾತ್ಕಾಲಿಕ ಸ್ಥಗಿತ : ಸಚಿವ ರಾಮಲಿಂಗಾರೆಡ್ಡಿ ಆದೇಶ
Karnataka ಬೆಂಗಳೂರು : Rapido ಮತ್ತು Uber ಬೈಕ್ ಟ್ಯಾಕ್ಸಿ ಸೇವೆಗಳನ್ನು ತಾತ್ಕಾಲಿಕವಾಗಿ ರಾಜ್ಯಾದ್ಯಂತ ಸ್ಥಗಿತ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಆದೇಶ ಆದೇಶಿಸಿದ್ದಾರೆ. ಈ ಕುರಿತಾಗಿ ರಾಮಲಿಂಗಾರೆಡ್ಡಿಯವರು ಸಾರಿಗೆ ಇಲಾಖೆಯ ಕಾರ್ಯದರ್ಶಿ, ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಾಮಲಿಂಗಾರೆಡ್ಡಿ, ಹೈಕೋರ್ಟ್‍ನ ಆದೇಶವನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ಮಾಡಿದ್ದಾರೆ.
ಬರುವ ಮುಂದಿನ 6 ವಾರಗಳಲ್ಲಿ ರ‍್ಯಾಪಿಡೋ ಸೇರಿದಂತೆ ಉಳಿದ ಇತರ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ ಮಾಡುವಂತೆ ಸೂಚಿಸಿ ಹೈಕೋರ್ಟ್ ಎಪ್ರಿಲ್ 2ರಂದು ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು. ಸರಕಾರಿ ಮೋಟಾರು ವಾಹನ ಕಾಯ್ದೆ ಪ್ರಕಾರ ಅಂದರೆ 1988 ಸೆಕ್ಷನ್ 3ರ ಅಡಿಯಲ್ಲಿ ಮಾರ್ಗಸೂಚಿಗಳನ್ನು ರೂಪಿಸಬೇಕು, ಅಲ್ಲಿಯವರೆಗೆ ಯಾವುದೇ (bike taxi) ರ‍್ಯಾಪಿಡೋ, ಬೈಕ್ ಟ್ಯಾಕ್ಸಿ ಹಾಗೂ ಊಬರ್ ತಮ್ಮ ಕಾರ್ಯವನ್ನು ನಿರ್ವಹಿಸುವ ನಿರ್ವಹಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು.
ಇದನ್ನು ಓದಿ: ರೈತರಿಗೆ ಸರ್ಕಾರದಿಂದ ಉಚಿತ ಬೋರ್ವೆಲ್.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.