ಕರ್ನಾಟಕ ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ತೆಗೆಸಲು ಧನಸಹಾಯ

Spread the love

ಕರ್ನಾಟಕ ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ತೆಗೆಸಲು ಧನಸಹಾಯ ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಮಳೆ ಆಧಾರಿತ ಕೃಷಿ ಪ್ರದೇಶದಲ್ಲಿ ನೀರಿನ ಕೊರತೆಯನ್ನು ನೀವು ನಿವಾರಿಸಲು ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಲು ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆ ಯನ್ನು ಜಾರಿಗೆ ಮಾಡಿದೆ. ಈ ಯೋಜನೆ ಮುಖ್ಯವಾಗಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಪುನರ್ವಿನಿಯೋಗಿಸುವ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕರ್ನಾಟಕದಲ್ಲಿ ಬಹುತೇಕ ಕೃಷಿ ಭೂಮಿ ಮಳೆಯನ್ನೇ ಅವಲಂಬಿಸಿದೆ ಹಾಗೂ ಬೆಳೆಯಲ್ಲಿ ನೀರಿನ ಕೊರತೆ ಕೊರತೆಯಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಕೃಷಿ ಭಾಗ್ಯ ಯೋಜನೆ ವಿವಿಧ ಸೌಲಭ್ಯಗಳನ್ನು ರೈತರಿಗೆ ಕೊಡುತ್ತದೆ.

ಕೃಷಿಭಾಗ್ಯ ಯೋಜನೆಯ ಮುಖ್ಯ ಉದ್ದೇಶಗಳೇನು?

• ಕೃಷಿ ಹೊಂಡ ನಿರ್ಮಾಣ ಮಾಡುವುದು. ಮಳೆಯ ನೀರನ್ನು ಸಂಗ್ರಹಿಸಿ ಕೃಷಿ ಹೊಂಡವನ್ನು ನಿರ್ಮಿಸಲು ಧನ ಸಹಾಯವನ್ನು ಮಾಡಲಾಗುತ್ತದೆ.

• ಡೀಜಲ್ ಸೋಲಾರ್ ಪಂಪ್ಸೆಟ್ಟುಗಳು ನೀರನ್ನು ಮೇಲೆ ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್ಸೆಟ್ಟುಗಳಿಗೆ ಸರ್ಕಾರವು ಧನಸಹಾಯ ಮಾಡುತ್ತದೆ.

• ಪಾಲಿಥಿನ್ ತಾಡಪಾಲ್: ಕೃಷಿ ಹೊಂಡದಲ್ಲಿ ನೀರು ಭೂಮಿ ಇಂಗದಂತೆ ತಡೆಯಲು ಪಾಲಿ ತಿರುವು ಅಳವಡಿಸಲು ಸರ್ಕಾರವು ಧನಸಹಾಯ ಮಾಡುತ್ತದೆ.

WhatsApp Group Join Now
Telegram Group Join Now       

• ಸೂಕ್ಷ್ಮ ನೀರಾವರಿ ಘಟಕಗಳು: ಹನಿ ಅಥವಾ ತುಂತುರು ನೀರಾವರಿ ಘಟಕಗಳಿಗೆ ಸರ್ಕಾರವು ರೈತರಿಗೆ ಧನಸಹಾಯವನ್ನು ಮಾಡುತ್ತದೆ.

• ತಂತಿ ಬೇಲಿ ಅಥವಾ ನೆರಳು ಪರದೆ: ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸಲು ಮತ್ತು ನೆರಳು ಪರದೆಗಳನ್ನು ಅಳವಡಿಸಲು ಸರ್ಕಾರವು ಧನಸಹಾಯವನ್ನು ಮಾಡುತ್ತದೆ.

WhatsApp Group Join Now
Telegram Group Join Now       

ರೈತರಿಗೆ ಸರ್ಕಾರದಿಂದ ಲಭ್ಯವಿರುವ ಸಬ್ಸಿಡಿಗಳು.

• ಕೃಷಿ ಹೊಂಡ ನಿರ್ಮಾಣ: ಸಾಮಾನ್ಯ ವರ್ಗದವರಿಗೆ 80% ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 90% ಧನಸಹಾಯ ಇರುತ್ತದೆ.

• ಸೋಲಾರ್ ಪಂಪ್ಸೆಟ್ಟುಗಳು: ಸಾಮಾನ್ಯ ವರ್ಗದವರಿಗೆ 50% ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 90% ಧನಸಹಾಯ ಸರಕಾರದಿಂದ ಇರುತ್ತದೆ.

• ಪಾಲಿಥೀನ್: ಸಾಮಾನ್ಯ ವರ್ಗದವರಿಗೆ 80% ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 90% ಸರ್ಕಾರದಿಂದ ಧನಸಹಾಯ ವಿರುತ್ತದೆ.

• ಸೂಕ್ಷ್ಮ ನೀರಾವರಿ ಘಟಕಗಳು; ಎಲ್ಲಾ ವರ್ಗದವರಿಗೆ 90% ಸರ್ಕಾರದಿಂದ ಧನಸ್ಹಾಯ ಇರುತ್ತದೆ.

ಈ ಯೋಜನೆ ಪಡೆಯಲು ಅರ್ಹತೆ ಮತ್ತು ಮಾನದಂಡಗಳು.

• ಒಂದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

• ರೈತರು ಎಫ್ ಐಡಿ ಒಂದಿರಾ ಬೇಕು ಅಂದರೆ ರೈತರ ಗುರುತಿನ ಸಂಖ್ಯೆ ಹೊಂದಿರಬೇಕು.

• ಬ್ಯಾಂಕ್ ಖಾತೆ ಫಲ ನೀ ಬಾವಿ ರೈತರು ತಮ್ಮ ಹೆಸರಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

• ಹಿಂದಿನ ಸಬ್ಸಿಡಿ ಕಳೆದ ಮೂರು ವರ್ಷಗಳಲ್ಲಿ ಪಂಪ್ಸೆಟ್ ಅಥವಾ ನೀ ಹನಿ ನೀರಾವರಿ ಸಬ್ಸಿಡಿ ಪಡೆದವರು ಕೃಷಿ ಬಂಡಗಳಿಗೆ ಮಾತ್ರ ಹರರಾಗಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಇಚ್ಛೆಯುಳ್ಳ ಯುಳ್ಳ ರೈತರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳಾವುವು?

1. ಪಾಸ್ಪೋರ್ಟ್ ಗಾತ್ರದ ಫೋಟೋ.

2. ಆದಾಯ ಪ್ರಮಾಣ ಪತ್ರ

3. ಜಾತಿ ಪ್ರಮಾಣ ಪತ್ರ.

4. ಗುರಿತಿನ ಚೀಟಿ.

5. ಕೃಷಿ ಪಾಸ್ ಬುಕ್/ಪಹಣಿ ಪತ್ರ.

ಇದನ್ನು ಓದಿ: ಭೂ ಸುರಕ್ಷಾ ಯೋಜನೆ ಇಂದಿನಿಂದ ಜಾರಿಗೆ ಇಲ್ಲಿದೆ ಸಂಪೂರ್ಣ ವಿವರ.

2025 ಹಾಗೂ 26ನೇ ಸಾಲಿನ ಬಜೆಟ್ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯ ಅಡಿಯಲ್ಲಿ 12,000 ಕೃಷಿಹೊಂಡಗಳನ್ನು ನಿರ್ಮಿಸಲು ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಈ ಯೋಜನೆಯ ಅಡಿಯಲ್ಲಿ ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರಸಿಹೊಂಡಗಳನ್ನು ನಿರ್ಮಿಸಲಾಗಿದೆ. ಇದು ಮಳೆಯ ಆಧಾರಿತ ಕೃಷಿ ಪ್ರದೇಶದಲ್ಲಿ ನೀರಾವರಿ ಸೌಲಭ್ಯಗಳನ್ನು ವಿಸ್ತರಿಸಲು ಈ ಕೃಷಿಹೊಂಡವು ಮಹತ್ವದ ಪಾತ್ರ ವಹಿಸುತ್ತಿದೆ.

ಸ್ನೇಹಿತರೆ, ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment